Actress Sreeleela: ಬಾಲಯ್ಯನ ಮಗನ ಕೈಹಿಡಿಯುತ್ತಾರಾ ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಮದುವೆ?! ಟಾಲಿವುಡ್ ಅಂಗಳದಲ್ಲಿ ಶುರುವಾಯ್ತು ಹೊಸ ಗುಸು ಗುಸು ?!

Tollywood news balayya son nandamuri mokshagna Teja to marry actress sreeleela

Actress Sreeleela: ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ ನಂತರ ಭರಾಟೆ, ಬೈಟು ಲವ್ ಎಂಬ ಮೂರು ಚಿತ್ರಗಳಲ್ಲಿ ನಟಿಸಿ ಇದೀಗ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ನಟಿ ಶ್ರೀಲೀಲಾ( Actress Sreeleela) ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

 

ಈಗಷ್ಟೇ ಟಾಲಿವುಡ್ (Tollywood) ಅಂಗಳದಲ್ಲಿ ನೆಲೆ ಭದ್ರಪಡಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಮದುವೆಯ ಕುರಿತ ಸುದ್ದಿಗಳು ಹರಿದಾಡುತ್ತಿವೆ. ಇದೀಗ, ಟಾಲಿವುಡ್ ಸ್ಟಾರ್ ನಟನ ಮಗನ ಜೊತೆಗೆ ನಟಿ ಶ್ರೀ ಲೀಲಾ ಹೆಸರು ಥಳಕು ಹಾಕಿಕೊಂಡಿದೆ. ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದು, ಬರೋಬ್ಬರಿ ಹನ್ನೊಂದು ಸಿನಿಮಾ ಇವರ ಕೈಯಲ್ಲಿದೆ. ಸ್ಟಾರ್ ನಟರ ಜೊತೆಗೆ ಬಣ್ಣ ಹಚ್ಚುತ್ತಿರುವ ನಟಿ ಶ್ರೀ ಲೀಲಾ, ಇದೀಗ ಬಿಡುಗಡೆಗೆ ಸಜ್ಜಾಗಿರುವ ‘ಭಗವಂತ ಕೇಸರಿ’ (Bhagavantha Kesari) ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ಬಣ್ಣ ಹಚ್ಚಿದ್ದಾರೆ. ಇದೇ ಬಾಲಯ್ಯ ಅವರ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಅವರ ಹೆಸರು ಥಳುಕು ಹಾಕಿಕೊಂಡಿದ್ದು, ನಟಿ ಶ್ರೀ ಲೀಲಾ ಮೋಕ್ಷಗಣನ ಜೊತೆ ಮದುವೆ (Wedding) ಆಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಮೋಕ್ಷಗಣನ ಜೊತೆ ಶ್ರೀಲೀಲಾ (Sreeleela) ಸೆಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಅಷ್ಟೇ ಅಲ್ಲದೇ, ಜೊತೆಗೆ ಓಡಾಡಿದ್ದು ನಿಜವೇ!! ಆದರೆ, ಇದನ್ನೇ ದೊಡ್ಡ ವಿಚಾರ ದಂತೆ ಹಬ್ಬಿಸಿ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಅಲ್ಲಿಯ ಕೆಲವು ಮೀಡಿಯಾ ವರದಿ ಮಾಡಿದ್ದು, ಇದನ್ನು ಕೇಳಿ ಶ್ರೀಲೀಲಾ ಫುಲ್ ಬೇಜಾರು ಮಾಡಿಕೊಂಡಿದ್ದಾರಂತೆ. ಇದು ಸುಳ್ಳು ಎಂದು ನಟಿ ಶ್ರೀಲೀಲಾ ಸ್ಪಷ್ಟನೆ ನೀಡಿದರೂ ಯಾರೂ ಕೂಡ ಕೇಳುತ್ತಿಲ್ಲವಂತೆ. ಸಿನಿಮಾ ಅಂದ ಮೇಲೆ ಈ ರೀತಿ ಸುಳ್ಳು ಸುದ್ದಿಗಳು ಊಹಾಪೋಹಗಳು ಹರಿದಾಡುವುದು ಸಾಮಾನ್ಯ, ಅದೇ ರೀತಿ, ಇದೀಗ, ನಟಿ ಶ್ರೀಲೀಲಾ ಮದುವೆ ಕುರಿತು ಊಹಾಪೋಹ ಚರ್ಚೆಗೆ ಕಾರಣವಾಗಿಬಿಟ್ಟಿದೆ.

ಇದನ್ನೂ ಓದಿ:Divorce: 17ರ ಹುಡುಗಿಗೂ, 78ರ ಅಜ್ಜನಿಗೂ ನಡೆಯಿತು ಅದ್ದೂರಿಯಾದ ಮದುವೆ – ಆದ್ರೆ 22 ದಿನಕ್ಕೇ ಎಲ್ಲವೂ ಮುಗಿದೋಯ್ತು.. !! ಕಾರಣ….?!

Leave A Reply

Your email address will not be published.