Home Latest Health Updates Kannada Coffee-Coconut Oil: ಕಾಫಿಯಲ್ಲಿ ತೆಂಗಿನೆಣ್ಣೆ ಬೆರೆಸಿ ಸೇವಿಸಿ, ಈ ಎಲ್ಲಾ ಲಾಭಗಳನ್ನು ಪಡೆಯಿರಿ !

Coffee-Coconut Oil: ಕಾಫಿಯಲ್ಲಿ ತೆಂಗಿನೆಣ್ಣೆ ಬೆರೆಸಿ ಸೇವಿಸಿ, ಈ ಎಲ್ಲಾ ಲಾಭಗಳನ್ನು ಪಡೆಯಿರಿ !

Coffee-Coconut Oil

Hindu neighbor gifts plot of land

Hindu neighbour gifts land to Muslim journalist

Coffee – Coconut Oil: ಪ್ರತಿದಿನ ಕಾಫಿ (Coffee – Coconut Oil) ಕುಡಿಯುವುದು ಪೂರ್ವಜರಿಂದ ಬಂದ ಸಂಪ್ರದಾಯ. ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿಯಿಂದ ಶುರುಮಾಡಿ ಸಂಜೆಯವರೆಗೂ ಕಾಫಿ ಕುಡಿಯುತ್ತಲೇ ಇರುತ್ತಾರೆ. ಪ್ರತಿದಿನ ಒಂದಲ್ಲ ಎರಡಲ್ಲ 4 ರಿಂದ 5 ಸಲ ಕಾಫಿ ಕುಡಿಯುವವರೂ ಇದ್ದಾರೆ. ಪ್ರತಿದಿನ ಕಾಫಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಗುಣಲಕ್ಷಣಗಳು ಒತ್ತಡ ಮತ್ತು ಆತಂಕವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಕಾಫಿಗೆ ತೆಂಗಿನೆಣ್ಣೆ ಸೇರಿಸುವುದರಿಂದ ದುಪ್ಪಟ್ಟು ಲಾಭವಿದೆ. ಹೌದು, ಕಾಫಿಯಲ್ಲಿ ತೆಂಗಿನೆಣ್ಣೆ ಬೆರೆಸಿ ಸೇವಿಸಿ, ಈ ಎಲ್ಲಾ ಲಾಭಗಳನ್ನು ಪಡೆಯಿರಿ !

ನಾವು ಎದ್ದ ತಕ್ಷಣ ಕಾಫಿಗೆ ನಮ್ಮ ಮನಸ್ಸು ಹಾತೊರೆಯುತ್ತದೆ. ಕಾಫಿಯ ಗುಣವೇ ಹಾಗೆ ತನ್ನ ಅದ್ಭುತವಾದ ರುಚಿಗೆ ಸುಲಭವಾಗಿ ಜನರ ಮನಸ್ಸನ್ನು ಆಕರ್ಷಿಸಿ ಬಿಡುತ್ತದೆ. ಕಾಫಿಯ ಸೇವನೆ ಬಹುತೇಕರಿಗೆ ಪ್ರಿಯವಾದುದು. ಕಾಫಿಯ ಜೊತೆಗೆ ತೆಂಗಿನೆಣ್ಣೆಯ ಮಿಶ್ರಣ ತುಂಬಾ ಪ್ರಯೋಜನಕಾರಿಯಾಗಿದೆ‌. ಹೌದು, ಪ್ರತಿದಿನ ಬೆಳಗ್ಗೆ ಒಂದು ಕಪ್ ಕಾಫಿಯಲ್ಲಿ ಎರಡು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ಅಪಾಯಕಾರಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆ ಬೆರೆಸಿದ ಕಾಫಿ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಕಾಫಿ ಮತ್ತು ತೆಂಗಿನೆಣ್ಣೆ ಮಿಶ್ರಣವನ್ನು ಕುಡಿಯುವುದರಿಂದ ಮೆದುಳು ಸುಧಾರಿಸಿ, ಏಕಾಗ್ರತೆ ಹೆಚ್ಚುತ್ತದೆ. ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ. ಮೆದುಳಿನ ನರಗಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಆಗಾಗ ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನೆಣ್ಣೆಯೊಂದಿಗೆ ಕಾಫಿಯನ್ನು ಸೇವಿಸಿದರೆ ಶೀಘ್ರದಲ್ಲೇ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಕಾಫಿ ಮತ್ತು ತೆಂಗಿನೆಣ್ಣೆ ಮಿಶ್ರಣವೂ ಮಧುಮೇಹದಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಖಿನ್ನತೆಯನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಸಹ ಕಾಫಿ ಮತ್ತು ತೆಂಗಿನೆಣ್ಣೆ ಮಿಶ್ರಣ ಸಹಕಾರಿಯಾಗಿದೆ.

 

ಇದನ್ನು ಓದಿ: Marriage: ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ!!!