Ravi Teja: ಚಿತ್ರೀಕರಣದ ಸಂದರ್ಭ ನಟ ರವಿತೇಜಗೆ ಗಂಭೀರ ಗಾಯ! 16 ಸ್ಟಿಚ್‌ ಹಾಕಿಸಿಕೊಂಡ ನಟ!!!

entertainment news tiger nageswara rao director vamsee told about ravi tejas injury

Share the Article

ನಟ ರವಿತೇಜ ಅವರು ಟೈಗರ್‌ ನಾಗೇಶ್ವರ ರಾವ್‌ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಸಿನಿಮಾದ ಶೂಟಿಂಗ್‌ ವೇಳೆ ಅಪಘಾತವಾಗಿದೆ. ಸಿನಿಮಾದ ಶೂಟಿಂಗ್‌ ಸಮಯದಲ್ಲಿ ರವಿತೇಜ ಅವರಿಗೆ ಈ ಅಪಘಾತ ಸಂಭವಿಸಿದೆಯಂತೆ. ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ರವಿತೇಜ ಅವರು ಅಪಘಾತಕ್ಕೀಡಾಗಿದ್ದಾರೆ.

‘ಟೈಗರ್ ನಾಗೇಶ್ವರ ರಾವ್’ ಸಿನಿಮಾದಲ್ಲಿ ರೈಲು ದರೋಡೆ ಮಾಡುವ ಒಂದು ದೃಶ್ಯವಿದ್ದು, ಈ ಸಿನಿಮಾದಲ್ಲಿ ರೈಲಿನ ಮೇಲಿನಿಂದ ಜಿಗಿಯುವ ಒಂದು ಶಾಟ್‌ ಇದೆ. ಆ ದೃಶ್ಯದ ಸಿನಿಮಾ ಶೂಟಿಂಗ್‌ ಸಂದರ್ಭ ರವಿತೇಜ ಅವರ ಬ್ಯಾಲೆನ್ಸ್‌ ಕಳೆದು ಕೆಳಗೆ ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ.

ಇದರ ಪರಿಣಾಮ ರವಿತೇಜ ಅವರು ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಹದಿನಾರು ಹೊಲಿಗೆ ಹಾಕಿದ್ದಾರೆ. ಇತ್ತೀಚೆಗೆ ಈ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

ಇದನ್ನು ಓದಿ: Cat Viral Video: ಮೂರು ಬೆಕ್ಕುಗಳಿಂದ ಪಾರಿವಾಳ ಹಿಡಿಯಲು ಹರಸಾಹಸ, ಮುಂದೇನಾಯ್ತು? ಈ ಬೇಟೆಯಾಡುವ ವೀಡಿಯೋ ವೈರಲ್‌!

Leave A Reply