Drone Prathap: ಬಿಗ್ ಬಾಸ್ ಮನೆಯಲ್ಲೂ ಹಾರದ ‘ಡ್ರೋನ್’ !! ಹಾರಿಸಲು ಹೋದ್ರೆ ಹಲವರಿಂದಾಗುತ್ತಿದೆ ‘ಪ್ರತಾಪ’ ಪ್ರಹಾರ

Drone Pratap had created a controversy by claiming a drone

Drone Prathap: ಕನ್ನಡದಲ್ಲಿ ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿದ್ದು, ಸಮರ್ಥರು ಮತ್ತು ಅಸಮರ್ಥರ ನಡುವೆ ಈಗಾಗಲೇ ಪೈಪೋಟಿ ಆರಂಭ ಆಗಿದೆ. ಅದರಲ್ಲೂ ದೊಡ್ಮನೆಗೆ ಯುವ ವಿಜ್ಞಾನಿ ಅಂತಲೇ ಹೈಲೈಟ್ ಆಗಿದ್ದ ಡ್ರೋನ್ ಪ್ರತಾಪ್ (Drone Prathap) ಆಗಮಿಸಿದ್ದು, ಪ್ರತಾಪ್ 80 ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿದ್ದಾರೆ.

 

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಸಿಕ್ಕ ಡೈಲಾಗ್ ಬಿಟ್ಟು ಜನಪ್ರಿಯರಾಗಿಯೇ ಬಿಗ್​ಬಾಸ್ ಮನೆ ಸೇರಿರುವ ಡ್ರೋನ್ ಪ್ರತಾಪ್ ತಮ್ಮದಲ್ಲದ ಡ್ರೋನ್ ಅನ್ನು ತಮ್ಮದೆಂದು ಹೇಳಿ ವಿವಾದ ಸುತ್ತಿಸಿಕೊಂಡಿದ್ದರು. ಇನ್ನು ರಕ್ಷಕ್ ಕೂಡ ಡೈಲಾಗ್ ಬಿಡೋದರಲ್ಲಿ ಕಮ್ಮಿ ಇಲ್ಲ. ಇದೀಗ ಈ ಇಬ್ಬರು ಬಿಗ್​ಬಾಸ್ ಮನೆಯಲ್ಲಿದ್ದು ಹಲವರ ಕಣ್ಣು ಇವರ ಮೇಲಿದೆ.

ಮೊದಲೆರಡು ದಿನ ರಕ್ಷಕ್ ತುಸು ಮಾತನಾಡಿದರು, ತಮ್ಮ ಸೋಷಿಯಲ್ ಮೀಡಿಯಾ ಅಪಿಯರೆನ್ಸ್ ಬಗ್ಗೆ ಪ್ರಶ್ನಿಸಿದವರಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಡ್ರೋನ್ ಪ್ರತಾಪ್ ತುಸು ಮೌನವಾಗಿದ್ದರು. ಆದರೆ ಈಗ ಡ್ರೋಪ್ ಪ್ರತಾಪ್ ಮೇಲೆ ಹಲವರು ತಮ್ಮ ಪ್ರತಾಪ ತೋರಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಡ್ರೋನ್ ಸಹ ಉತ್ತರ ನೀಡಿದ್ದಾರೆ.

ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್, ರಕ್ಷಕ್ ಇನ್ನಿತರರು ಮಾತನಾಡುತ್ತಾ ಕೂತಿದ್ದಾಗ ಡ್ರೋನ್ ಪ್ರತಾಪ್ ಅವರ ಡ್ರೋನ್ ಬಗ್ಗೆ ಚರ್ಚೆ ಬಂತು. ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್ ಅವರುಗಳು ಡ್ರೋನ್ ಪ್ರತಾಪ್ ಅವರ ಡ್ರೋನ್​ ಬಗ್ಗೆ ಹಾಸ್ಯಾಸ್ಪದವಾಗಿ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಡ್ರೋನ್ ಪ್ರತಾಪ್ ಆಕ್ಷೇಪ ವ್ಯಕ್ತಪಡಿಸಿ. ನಾನು ಮಾಡಿರುವ ಡ್ರೋನ್ ನೀವು ನೋಡಿಲ್ಲ, ನನ್ನ ಕಂಪೆನಿ ಯಾವುದೆಂದು ನಿಮಗೆ ಗೊತ್ತಿಲ್ಲ. ಆದರೆ ನಗುತ್ತಾ ಹಾಸ್ಯ ಮಾಡುತ್ತೀರಿ. ನಾನು ಡ್ರೋನ್​ಗೆ ಬೇಕಿರುವ ವಸ್ತುಗಳ ಪಟ್ಟಿ ಕೊಡುತ್ತೇನೆ, ಲ್ಯಾಪ್​ಟಾಪ್ ತರಿಸಿ ಇಲ್ಲೇ ಅಸೆಂಬಲ್ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಆ ನಂತರ ನಡೆದ ಟಾಸ್ಕ್ ಒಂದರಲ್ಲಿ ಪ್ರತಾಪ್, ಸ್ನೇಹಿತ್​ಗೆ ನಾಲಾಯಕ್ ಫಲಕ ನೀಡಿದರು. ಅದಾದ ಬಳಿಕ ಪ್ರತಾಪ್ ಮೇಲೆ ಸಿಟ್ಟು ಮಾಡಿಕೊಂಡ ಸ್ನೇಹಿತ್, ಪ್ರತಾಪ್ ಒಬ್ಬ ಸುಳ್ಳುಗಾರ, ಹಗರಣ ಮಾಡಿದ್ದಾನೆ, ದ್ರೋಹ ಮಾಡಿದ್ದಾನೆ ಎಂದರು. ಅವನನ್ನು ಮನುಷ್ಯ ಎಂದೇ ನಾನು ಕನ್ಸಿಡರ್ ಮಾಡಿಲ್ಲ ಎಂದೂ ಸಹ ಹೇಳಿದರು.

ಬಳಿಕ ಡ್ರೋನ್ ಪ್ರತಾಪ್ ಜೊತೆಗೆ ಚರ್ಚೆಯ ಸಂದರ್ಭದಲ್ಲಿಯೂ ಸ್ನೇಹಿತ್ ಪದೇ ಪದೇ ಡ್ರೋನ್ ವಿಷಯ ಮಾಡಿದರು. ಆಗ ಡ್ರೋನ್ ಪ್ರತಾಪ್, ಬ್ಯುಸಿನೆಸ್ ವಿಷಯವನ್ನು, ಹಣಕಾಸಿನ ವಿಷಯವನ್ನು ಇಲ್ಲಿ ಯಾಕೆ ಚರ್ಚೆ ಮಾಡುತ್ತೀರಿ, ನನ್ನ ಆಫೀಸ್​ ಇದೆ ಅಲ್ಲಿ ಬಂದು ವ್ಯವಹಾರ ಮಾತನಾಡಿ ಎಂದರು. ಆದರೂ ಬಿಡದ ಸ್ನೇಹಿತ್, ನೀನು ಡೋಂಗಿ, ಫೇಕ್ ಎಂದು ನೇರವಾಗಿ ಟೀಕೆ ಮಾಡಿದರು . ಸ್ನೇಹಿತ್​ರ ಮಾತಿನಿಂದ ಸಿಟ್ಟುಕೊಂಡ ಪ್ರತಾಪ್, ಡೊಂಗಿ, ಫೇಕ್ ಎಂದು ಕರೆಯಬೇಡಿ ಎಂದು ಏರಿದ ಧ್ವನಿಯಲ್ಲಿ ಕೂಗಾಡಿದರು.

 

ಇದನ್ನು ಓದಿ: Charlie to Bigg Boss house: ಈ ದಿನ ಮನೆಗೆ ಬಲಗಾಲಿಟ್ಟು ಬರ್ತಾಳೆ ‘ ಚಾರ್ಲಿ’!!! ಸಂಭಾವನೆ ಕೇಳಿದ್ರೆ ಹೌಹಾರ್ತೀರಾ…

Leave A Reply

Your email address will not be published.