Good News For Farmers: ಪಂಚ ರಾಜ್ಯ ಚುನಾವಣೆ ಎಫೆಕ್ಟ್, ರೈತರಿಗೆ ಸಿಗಲಿದೆ ಈ ಬಂಪರ್ ಗಿಫ್ಟ್
Central Government announced good News for the farmers regarding pm Kisan yojana latest news


PM Kisan yojana: ರೈತರಿಗೆ(Farmers)ನೆರವಾಗುವ ನಿಟ್ಟಿನಲ್ಲಿ ಕೇಂದ್ರ(Central Government)ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ, ಸರ್ಕಾರ ರೈತರಿಗೆ ಭರ್ಜರಿ ಶುಭ ಸುದ್ದಿ ನೀಡುವ ಸಾಧ್ಯತೆ ಹೆಚ್ಚಿದೆ.

ಪಂಚ ರಾಜ್ಯಗಳ ಚುನಾವಣೆಗೂ ಮೊದಲೇ ಸರ್ಕಾರ ರೈತರಿಗೆ ಮಹತ್ವದ ಕೊಡುಗೆ ಘೋಷಣೆ ಮಾಡುವ ನಿರೀಕ್ಷೆ ಇದೆ. ರೈತರಿಗೆ ಕೃಷಿ ಚಟುವಟಿಕೆಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana) ಮೊತ್ತವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕಿಸಾನ್ ಸಮ್ಮಾನ್ ಯೋಜನೆಯ ವಾರ್ಷಿಕ ಹಣ 6,000 ರೂ.ನಿಂದ 8000 ರೂ.ಗೆ ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ವಾರ್ಷಿಕ 60,000 ಕೋಟಿ ರೂಪಾಯಿ ಬಜೆಟ್ ನಿಗದಿ ಮಾಡಿದೆ ಎನ್ನಲಾಗಿದೆ. ಒಂದು ವೇಳೆ, ಪ್ರತಿ ರೈತರಿಗೆ ವಾರ್ಷಿಕ 8000 ರೂ.ಗೆ ಏರಿಕೆ ಮಾಡಿದರೆ ಹೆಚ್ಚುವರಿಯಾಗಿ 20,000 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ: Meenakshi Chaudhary: ಮೀನ ಬಲೆಯ ಸೀರೆಯಲ್ಲಿ ಮಿಂಚುತ್ತಿರುವ ಮೀನ ಕಂಗಳ ಸುಂದರಿ ಮೀನಾಕ್ಷಿ!!!
