Bank loans: ಬ್ಯಾಂಕ್ ನಲ್ಲಿ ಸಾಲ ಮಾಡಿರೋರಿಗೆಲ್ಲಾ ಬಂತು ಹೊಸ ರೂಲ್ಸ್ !! ಬೆಳ್ಳಂಬೆಳಗ್ಗೆಯೇ ಹೊರ ಬಿತ್ತು ಹೊಸ ಸೂಚನೆ !
New rules for all bank borrowers
Bank loans: ಬ್ಯಾಂಕ್’ನಲ್ಲಿ ಸಾಲ (Bank loans) ಮಾಡಿರೋರಿಗೆಲ್ಲಾ ಹೊಸ ರೂಲ್ಸ್ ಬಂದಿದೆ. ಬೆಳ್ಳಂಬೆಳಗ್ಗೆಯೇ ಹೊಸ ಸೂಚನೆ ಹೊರಬಿದ್ದಿದೆ. ಅನೇಕರು ಬ್ಯಾಂಕ್ ಗಳಿಂದ ಹೋಂ ಲೋನ್ ಸಾಲವನ್ನು ಪಡೆದು ತಮ್ಮ ಕನಸುಗಳನ್ನು ಪೂರೈಸಿಕೊಳ್ಳುತ್ತಾರೆ. ಹೋಂ ಲೋನ್ ಅಥವಾ ಯಾವುದೇ ಸಾಲವನ್ನು ಮರುಪಾವತಿ ಮಾಡಿದ ನಂತರ ಬ್ಯಾಂಕ್ ನಿಂದ NOC ಪ್ರಮಾಣಪತ್ರವನ್ನು ಪಡೆಯುವುದು ಬಹಳ ಮುಖ್ಯ.
ನೀವು ಬ್ಯಾಂಕ್ ನಿಂದ NOC ಪ್ರಮಾಣ ಪತ್ರವನ್ನು ಪಡೆಯದೆ ಹೋದರೆ, ನಿಮ್ಮ ಸಾಲದ ಮೊತ್ತ ಇನ್ನು ಬಾಕಿ ಇದೆ ಎಂದು ತೋರಿಸುತ್ತದೆ. ಈ ಕಾರಣದಿಂದ ಇದು ನಿಮ್ಮ CIBIL ಸ್ಕೋರ್ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ನೀವು ಯಾವುದೇ ಸಾಲ ಪಡೆಯುವಾಗ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನೀವು NOC ಪಡೆಯದೆ ಹೋದರೆ ಸಾಲದಾತನು ನಿಮಗೆ ವಿಳಂಬ ಶುಲ್ಕವನ್ನು ಬಡ್ಡಿಯ ಜೊತೆಗೆ ಸೇರಿಸಲಾಗುತ್ತದೆ.
ಆಸ್ತಿಯ ವಿಚಾರಗಳಲ್ಲಿ ಸಹ ನೀವು NOC ಪಡೆಯದೆ ಇರುವ ಕಾರಣ ತೊಂದರೆಗಳನ್ನು ಸಹ ಎದುರಿಸಬೇಕಾಗುತ್ತದೆ. ನಿಮ್ಮ ಬಳಿ NOC ಇಲ್ಲದೆ ಹೋದರೆ ನೀವು ಆ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುವುದಿಲ್ಲ. ಈ ಕಾರಣದಿಂದ ಆಸ್ತಿಯ ಮಾರಾಟದಲ್ಲಿ ಸಮಸ್ಯೆಗಳು ಉಂಟಾಗಬಹುದು.
ಇದನ್ನು ಓದಿ: Areca Nut Farming: ನಿಮ್ಮ ತೋಟದ ಅಡಿಕೆ ಗಿಡಗಳಿಗೆ ಕಾಂಡ ಸೀಳೋ ಸಮಸ್ಯೆಯೇ ?! ಇಲ್ಲಿದೆ ನೋಡಿ ಪರಿಹರಿಸೋ ಸುಲಭ ಮಾರ್ಗ !