Charmadi Ghat: ಚಾರ್ಮಡಿ ಘಾಟ್ ಪ್ರಯಾಣಿಕರಿಗೆ ಕೇಂದ್ರದಿಂದ ಭರ್ಜರಿ ಗುಡ್ನ್ಯೂಸ್!
Great news for Charmadi Ghat passengers from the central
Charmadi Ghat: ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಗಳ ನಡುವೆ 25 ಕಿಮೀ ವ್ಯಾಪ್ತಿಯ ಚಾರ್ಮಡಿ ಘಾಟ್ ಹೆದ್ದಾರಿಯನ್ನು ದಕ್ಷಿಣ ಕನ್ನಡದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಅದಲ್ಲದೆ ಪ್ರಾಕೃತಿಕ ಸೌಂದರ್ಯದಿಂದ ಚಾರ್ಮಡಿ ಘಾಟ್ (Charmadi Ghat) ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದೀಗ ಸರ್ಕಾರದಿಂದ ಚಾರ್ಮಡಿ ಘಾಟ್ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಲಾಗಿದೆ. ಇದರಿಂದ ಪ್ರಯಾಣಿಕರ ಹಲವು ದಿನಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.
ಹೌದು, ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಚಾರ್ಮಡಿ ಘಾಟ್ ಹೆದ್ದ್ದಾರಿಯ ಅಭಿವೃದ್ಧಿಗೆ ಅನುಮತಿ ನೀಡಿದೆ. ಈ ಮೂಲದ ಚಾರ್ಮಡಿ ಘಾಟ್ ದ್ವಿಪಥ ಹೆದ್ದಾರಿಯಾಗಿ ಬದಲಾಗಲಿದೆ.
ಚಾರ್ಮಡಿ ಘಾಟ್ ರಸ್ತೆ ಅತಿ ಹೆಚ್ಚು ವಾಹನ ಸಂಚಾರ ಹೊಂದಿರುವ ಮಾರ್ಗ ಇದಾಗಿದ್ದು, 11 ವಿಶಿಷ್ಠ ತಿರುವುಗಳನ್ನು ಹೊಂದಿದೆ. 2018-19ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ಮಾರ್ಗವನ್ನು ಕೆಲ ದಿನ ಬಂದ್ ಮಾಡಲಾಗಿತ್ತು.
ರಸ್ತೆಯ ರಿಪೇರಿ ಬಳಿಕ ಹಂತ ಹಂತವಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ ಮಳೆಗಾಲದಲ್ಲಿ ಬಂಡೆ ಕುಸಿತ, ಭೂ ಕುಸಿತ ಉಂಟಾಗುತ್ತಿರುತ್ತದೆ. ಈ ಹಿನ್ನೆಲೆ ರಸ್ತೆಯ ಅಭಿವೃದ್ಧಿಯ ಮನವಿ ಕೇಳಿ ಬಂದಿತ್ತು.
ಆದ್ದರಿಂದ ಇದೀಗ ಚಾರ್ಮಡಿ ಹಳ್ಳದಿಂದ ಘಾಟ್ ನ 11ನೇ ತಿರುವಿನವರೆಗಿನ 11.2 ಕಿ.ಮೀ ವ್ಯಾಪ್ತಿಯ ಹೆದ್ದಾರಿಯ ಅಭಿವೃದ್ಧಿಯಾಗಲಿದೆ. ಅಭಿವೃದ್ಧಿ ಆಗುತ್ತಿರುವ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. ಅಲ್ಲದೇ 490 ಕೋಟಿ ರೂ.ಗಳಲ್ಲಿ ಹೆದ್ದಾರಿ ಅಭಿವೃದ್ಧಿ ಆಗಲಿದೆ. ಈ ಸಂಬಂಧ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ರಸ್ತೆ 10 ಮೀ ಅಗಲ ಇರಲಿದ್ದು, ದ್ವಿಪಥ ಆಗಲಿದೆ. ರಸ್ತೆಯೂ ದ್ವಿಪಥ ಆಗೋದರಿಂದ ವಾಹನಗಳ ವೇಗ ಹೆಚ್ಚಾಗಲಿದ್ದು, ವಾಣಿಜ್ಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಗಳಿವೆ.