KYC Update: ಬ್ಯಾಂಕ್ ಗ್ರಾಹಕರೇ ಗಮನಿಸಿ, ನೀವೇನಾದರೂ KYC ಮಾಡುವುದು ವಿಳಂಬವಾದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯ!
Bank account will be disabled after KYC Update delay latest news
KYC Update: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ಫೋನ್ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಬೆರಳ ತುದಿಯಲ್ಲಿ ಮೊಬೈಲ್ ಎಂಬ ಸಾಧನದ ಮೂಲಕ ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಆರ್ಥಿಕ ವ್ಯವಹಾರಗಳು ಸುಲಲಿತವಾಗಿ ಮತ್ತು ಸುರಕ್ಷತೆ ಯಿಂದ ಕೂಡಿರಲು ಆರ್‌ಬಿಐ ಗ್ರಾಹಕರಿಗೆ ಕೆವೈಸಿ (KYC)ಮಾಹಿತಿಯನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಲು ಸೂಚನೆ ನೀಡುತ್ತದೆ.
ಬ್ಯಾಂಕ್ ಗ್ರಾಹಕರು ತಮ್ಮ ನೋ ಯುವರ್ ಕಸ್ಟಮರ್(Know Your Customer info)ಮಾಹಿತಿಯನ್ನು ನವೀಕರಿಸಲು ಶಾಖೆಗೆ ಭೇಟಿ ನೀಡುವ ಅವಶ್ಯಕತೆಯಿಲ್ಲ. ಗ್ರಾಹಕರು ಆನ್‌ಲೈನ್ ಚಾನೆಲ್‌ಗಳ ಮೂಲಕ ಸ್ವಯಂ ಘೋಷಣೆಯನ್ನು ಒದಗಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಗ್ರಾಹಕರು ಬ್ಯಾಂಕ್ ಖಾತೆಗಳನ್ನು ತೆರೆಯುವ ಸಂದರ್ಭ ಇಲ್ಲವೇ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಕಡ್ಡಾಯವಾಗಿ ಕೆವೈಸಿ ಪ್ರಕ್ರಿಯೆ ಮಾಡಬೇಕು.ನಿಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಕೆವೈಸಿ ವಿವರಗಳನ್ನು ನವೀಕರಿಸಲು ನಿಮ್ಮ ಬ್ಯಾಂಕ್ ನಿಮಗೆ ಇಮೇಲ್ ಕಳುಹಿಸಿದಲ್ಲಿ ಸಮಯಕ್ಕೆ ಸರಿಯಾಗಿ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಆರ್‌ಬಿಐ ನಿಯಮಾವಳಿಗಳ ಅನುಸಾರ, ಕೆವೈಸಿ ಅಪ್‌ಡೇಟ್ ಮಾಹಿತಿ ಅವಶ್ಯಕವಾದಲ್ಲಿ ಬ್ಯಾಂಕ್‌ಗಳು ಗ್ರಾಹಕರ ಗಮನಕ್ಕೆ ತರಬೇಕಾಗುತ್ತದೆ. ಖಾತೆದಾರರು ತಮ್ಮ ಪ್ಯಾನ್ ಸಂಖ್ಯೆ ಇಲ್ಲವೇ ಅದಕ್ಕೆ ಪೂರಕವಾಗುವ ಇ-ಡಾಕ್ಯುಮೆಂಟ್ ಇಲ್ಲವೇ ಫಾರಂ 60 ಅನ್ನು ಒದಗಿಸುವ ಮುಖಾಂತರ ತಮ್ಮ ಡೇಟಾವನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ, ಸರಿಯಾದ ದಾಖಲಾತಿಗಳನ್ನು ನೀಡದಿದ್ದರೆ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗುತ್ತದೆ.ಆರ್‌ಬಿಐ ಮಾರ್ಗಸೂಚಿಯ ಅನುಸಾರ, ಬ್ಯಾಂಕ್‌ಗಳು ಈ ಗಡುವನ್ನು ನಿರ್ದಿಷ್ಟ ಪ್ರಕರಣವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ, ಅನಾರೋಗ್ಯ ಅಥವಾ ವಯಸ್ಸಾದ ಸಮಸ್ಯೆ ಮುಂತಾದ ಕಾರಣಗಳಿಗೆ ಮಾತ್ರ ವಿನಾಯಿತಿಯನ್ನು ನೀಡಬಹುದಾಗಿದೆ. ಒಂದು ವೇಳೆ ಖಾತೆಯು ಸ್ಥಗಿತವಾದರೆ, ಎಲ್ಲ ರೀತಿಯ ವ್ಯವಹಾರಗಳನ್ನು ತಡೆ ಹಿಡಿಯಲಾಗುತ್ತದೆ. ಹೀಗಾಗಿ, ಖಾತೆಗಳನ್ನು ಮರು ಚಾಲನೆ ಗೊಳಿಸಲು ಮತ್ತೆ ಕೆವೈಸಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಬ್ಯಾಂಕ್‌ನಿಂದ ಸೂಚನೆ ಬಂದ 30 ದಿನದೊಳಗೆ ನೀವು ಅಗತ್ಯ ಮಾಹಿತಿ ಇಲ್ಲವೇ ದಾಖಲೆಗಳನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.
ಇದನ್ನು ಓದಿ: ಬಿಸಿಲ ಬೇಗೆಗೆ ಬೆಂದು ಗ್ಲಾಸ್’ನಲ್ಲಿದ್ದ ನೀರನ್ನು ಗಟಗಟನೆ ಕುಡಿದು ಬಿಟ್ಟ ಕರಿನಾಗರ: ವೈರಲ್ ಆಯ್ತು ವಿಡಿಯೋ