World Cup 2023: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ BJP; ಸಿಗಲಿದೆ 40 ಸಾವಿರ ಮಹಿಳೆಯರಿಗೆ ಉಚಿತ ಟಿಕೆಟ್!!!

World Cup 2023 political news BJP party given good news for womems

World Cup 2023: ಅಕ್ಟೋಬರ್‌ 5ರಂದು ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಈ ಮೆಗಾ ಟೂರ್ನಿಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ 2023ರ ಮೊದಲ ಪಂದ್ಯ ನಡೆಯಲಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಮತ್ತು ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

 

ಭಾರತ ಸೇರಿದಂತೆ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದ 10 ನಗರಗಳಲ್ಲಿ ವಿಶ್ವಕಪ್ ಸರಣಿ ನಡೆಯಲಿದ್ದು, ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್ ಮಾರಾಟ ಪ್ರಾರಂಭವಾಗಿದ್ದು, ಅಭಿಮಾನಿಗಳು ಆನ್‌ಲೈನ್‌ ಮೂಲಕ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಈ ಪಂದ್ಯಕ್ಕೆ 40,000 ಕ್ಕೂ ಹೆಚ್ಚು ಮಹಿಳೆಯರನ್ನು ಸಜ್ಜುಗೊಳಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಹೀಗಾಗಿ, ಅಕ್ಟೋಬರ್‌ 5 ರಂದು ನಡೆಯಲಿರುವ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ವೀಕ್ಷಿಸಲು 40 ಸಾವಿರ ಮಹಿಳೆಯರಿಗೆ ಉಚಿತ ಟಿಕೆಟ್ (ಪಾಸ್) ಮತ್ತು ಆಹಾರ ನೀಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇದರಲ್ಲಿ ಭಾಗವಹಿಸುವ ಮಹಿಳೆಯರಿಗೆ ಮ್ಯಾಚ್ ಪಾಸ್ ಹೊರತುಪಡಿಸಿ ಟೀಗೆ ಎರಡು ಟೋಕನ್, ತಿಂಡಿಗೆ ಒಂದು ಟೋಕನ್ ಮತ್ತು ಆಹಾರಕ್ಕೆ ಒಂದು ಟೋಕನ್ ಒದಗಿಸಲಾಗುತ್ತದೆ. ಈ ಮೂಲಕ ಮೋದಿ ಕ್ರೀಡಾಂಗಣಕ್ಕೆ 40 ಸಾವಿರ ಮಹಿಳೆಯರೂ ಕೂಡ ಕ್ರಿಕೆಟ್‌ ನೋಡಬಹುದು.

ಅಹಮದಾಬಾದ್ ಕಾರ್ಪೊರೇಷನ್ ನ ಎಲ್ಲ 48 ವಾರ್ಡ್ ಗಳಿಂದ 800 ಮಹಿಳೆಯರಂತೆ 40,000 ಮಹಿಳೆಯರನ್ನು ನೇಮಕ ಮಾಡಲಾಗಿದ್ದು, ಈ ಕುರಿತು ಅಧಿಕಾರಿಗಳು ಪ್ರತಿ ವಾರ್ಡ್‌ಗೆ ವಾಟ್ಸಾಪ್ ಆಹ್ವಾನ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಉಚಿತ ಸೇವೆ ಕೇವಲ ಮಹಿಳೆಯರಿಗೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಮಹಿಳೆಯರು ತಮ್ಮ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಪ್ರಧಾನ ಕಾರ್ಯದರ್ಶಿಗೆ ವಾಟ್ಸಾಪ್ ಮೂಲಕ ಕಳುಹಿಸುವ ಮುಖಾಂತರ ನೊಂದಾಯಿಸಿಕೊಳ್ಳಬಹುದು.

 

ಇದನ್ನು ಓದಿ: Tragic Love Story: ಪ್ರಿಯಕರನ ಆತ್ಮಹತ್ಯೆ; ಆಘಾತಗೊಂಡ ಪ್ರಿಯತಮೆ ಮಾಡಿದ್ದೇನು?

Leave A Reply

Your email address will not be published.