Home ದಕ್ಷಿಣ ಕನ್ನಡ Puttur: ಸೆಲೂನ್ ಬಾಡಿಗೆ ವಿಚಾರ : ಕ್ಷೌರಿಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ

Puttur: ಸೆಲೂನ್ ಬಾಡಿಗೆ ವಿಚಾರ : ಕ್ಷೌರಿಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ

Puttur

Hindu neighbor gifts plot of land

Hindu neighbour gifts land to Muslim journalist

Puttur : ವ್ಯಕ್ತಿಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು(Puttur)ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶ ಮೂಲದ ಬಿಲಾಲ್ ಎಂಬುವವರು ನೀಡಿದ ದೂರಿನ ಅನುಸಾರ ಅಬ್ದುಲ್ ರಜಾಕ್ ನರಿಮೊಗರು, ಶಕೀಲ್ ಸವಣೂರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ಟೋಬರ್ .2 ರಂದು ರಾತ್ರಿ ಸೆಲೂನ್ ಬಂದ್ ಮಾಡಿ ಮಹಮ್ಮದ್ ಬಿಲಾಲ್ ಎಂಬುವವರು ಊಟಕ್ಕೆಂದು ವಾಹನಕ್ಕೆ ಕಾಯುತ್ತಿದ್ದ ಸಂದರ್ಭ ಸೆಲೂನ್ ಮಾಲಕರಾದ ಅಬ್ದುಲ್ ರಜಾಕ್ ನರಿಮೊಗರು, ಶಕೀಲ್ ಸವಣೂರು ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಕಾರಿನಲ್ಲಿ ಬಂದಿದ್ದಾರೆ ಎನ್ನಲಾಗಿದೆ.

ಬಿಲಾಲ್ ರನ್ನು ಕಾರಿನಲ್ಲಿ ಬಿಡುವುದಾಗಿ ನಂಬಿಸಿ ಕಾರಿನಲ್ಲಿ ಕೂರಿಸಿದಲ್ಲದೆ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭ ಸೆಲೂನ್ ಮಾಲಿಕರು ಸೆಲೂನ್ ಗೆ ಹೆಚ್ಚಿನ ಬಾಡಿಗೆಯನ್ನು ನೀಡಬೇಕೆಂದು ಬಿಲಾಲ್ ಬಳಿ ತಕರಾರು ಮಾಡಿದ್ದಾರೆ.ಬಿಲಾಲ್ ಒಪ್ಪದೇ ಇದ್ದಾಗ ಕಾರಿನಲ್ಲಿದ್ದವರು ಎಲ್ಲ ಹಲ್ಲೆ ನಡೆಸಿದ್ದು, ಬಿಲಾಲ್ ರವರ ಪರ್ಸ್ ಮತ್ತು ಅದರಲ್ಲಿದ್ದ 7500 ರೂ ಮತ್ತು ದಾಖಲಾತಿಗಳನ್ನು ಕಿತ್ತುಕೊಂಡು ಜೀವಬೆದರಿಕೆ ಹಾಕಿ ಅವರನ್ನು ವಿಟ್ಲ ಮಂಗಿಲಪದವು ಎಂಬಲ್ಲಿ ಇಳಿಸಿ ಹೋಗಿದ್ದಾರೆ ಎಂಬುದಾಗಿ ದೂರಿನಲ್ಲಿ ಹೇಳಿದ್ದಾರೆ. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 95- 2023 eo: 365, 342, 323, 392, 506 R/W 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಬೇಕೆಂದರೆ ಮದುವೆಯ ಫೋಟೋ ಮನೆಯ ಈ ಜಾಗದಲ್ಲಿ ಇಡಬೇಡಿ!