Beauty Tips: ಸುಂದರವಾಗಿ ಕಾಣಲು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದಿಲ್ಲ – ಮನೆಯಲ್ಲೇ ಕೂತು ಹೀಗ್ ಮಾಡಿ, ಕ್ಷಣಾರ್ಧದಲ್ಲಿ ಹಾಲಿನಂತ ಮೃದು ತ್ವಚೆ ಪಡೆಯಿರಿ !

Tips at home instead of going to beauty parlor to look beautiful

Beauty Tips: ಮಹಿಳೆಯರು ಯಾವಾಗಲೂ ತನ್ನ ಅಂದವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ಅದರಲ್ಲೂ ವಾಸ್ತವ ವಯಸ್ಸಿಗಿಂತ ಕಿರಿಯರಾಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಹೊಳೆಯುವ ಸೌಂದರ್ಯ ಪಡೆಯಲು ಫೇಶಿಯಲ್ ಮತ್ತು ಸ್ಪಾ ಮಾಡಲು ಅನೇಕ ಜನರು ವಾರಕ್ಕೊಮ್ಮೆ ಪಾರ್ಲರ್‌ಗೆ ಹೋಗುತ್ತಾರೆ. ಆದರೆ ನೈಸರ್ಗಿಕ ಪದಾರ್ಥಗಳು ವಿವಿಧ ತ್ವಚೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಿಮ್ಮ ಚರ್ಮಕ್ಕೆ ತಾರುಣ್ಯದ ಹೊಳಪನ್ನು ನೀಡುತ್ತದೆ. ಆದ್ದರಿಂದ ಇಂದು ಸುಲಭವಾಗಿ ನಿಮಗೆ ಮನೆಯಲ್ಲೇ ಹೇಗೆ ಬ್ಯೂಟಿ ಕೇರ್​​(Beauty Tips) ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇವೆ.

 

ಕಡಲೆಹಿಟ್ಟು:
ಕಡಲೆಹಿಟ್ಟು ಚರ್ಮದ ಮೇಲಿನ ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಗತ್ಯ ಪ್ರಮಾಣದ ಸೌತೆಕಾಯಿ ರಸವನ್ನು ತೆಗೆದುಕೊಂಡು ಅದನ್ನು ಕಡಲೆಹಿಟ್ಟಿನ ಜೊತೆ ಮಿಶ್ರಣ ಮಾಡಿ. ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿ. 20 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ತೊಳೆಯಿರಿ. ಇದರಿಂದ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ.

ಆಲಿವ್ ಎಣ್ಣೆ :
ಆಲಿವ್ ಎಣ್ಣೆಯ ಅಥವಾ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಇದು ಚರ್ಮದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ವಾರದಲ್ಲಿ 2 ದಿನ ಈ ಸ್ಕ್ರಬ್ ಅನ್ನು ಬಳಸಬಹುದು.

ಅರಿಶಿನ:
ಅರಿಶಿನ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆ. ಅರಿಶಿನವನ್ನು ಬೇಸನ್ ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಿ. ಸ್ಟ್ರೆಚ್ ಮಾರ್ಕ್ ಇರುವ ಜಾಗದಲ್ಲಿ ಅದನ್ನು ಹಚ್ಚಿಕೊಳ್ಳಿ.

ಶ್ರೀಗಂಧ:
ನುಣ್ಣಗೆ ಪುಡಿಮಾಡಿದ ಬಾದಾಮಿಯನ್ನು ತೆಗೆದುಕೊಂಡು ಅದನ್ನು ಶ್ರೀಗಂಧದದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಸಿ ಹಾಲು ಸೇರಿಸಿ. ಸ್ನಾನದ ಮೊದಲು ಮುಖಕ್ಕೆ ಮತ್ತು ತೋಳುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಹೊಳೆಯುವ ತ್ವಚೆ ಪಡೆಯಬಹುದು.

ಮುಲ್ತಾನಿ ಮಿಟ್ಟಿ:
ಅಗತ್ಯ ಪ್ರಮಾಣದ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಸ್ವಲ್ಪ ಟೊಮೆಟೊ ರಸದೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ಚಿಟಿಕೆ ಅರಿಶಿನ ಮತ್ತು ಶ್ರೀಗಂಧದ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಜೇನುತುಪ್ಪ ಮತ್ತು ನಿಂಬೆ:
ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಮೇಳೆ ಲೇಪಿಸಿ. 20 ನಿಮಿಷಗಳ ಕಾಲ ಅನ್ವಯಿಸಿ. ನಂತರ ತಣ್ಣಿರಿನಿಂದ ಮುಖ ತೊಳೆಯಿರಿ.

ಅಲೋವೆರಾ ಜೆಲ್​:
ಅಲೋವೆರಾ ಜೆಲ್ ಅನ್ನು ದಿನಕ್ಕೆ ಎರಡು ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಮುಖದ ಚರ್ಮ ಹೊಳೆಯುವುದರ ಜತೆ ಮೃದುವಾಗುತ್ತದೆ.

ಹಾಲು :
ಹಾಲಿನಿಂದ ಮುಖವನ್ನು ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಮೃದು ಚರ್ಮ ನಿಮ್ಮದಾಗುತ್ತದೆ.

ಮೊಸರು ಸೌತೆಕಾಯಿ:
ಮೊಸರಿನಲ್ಲಿ ಸೌತೆಕಾಯಿ ಚೂರುಗಳನ್ನು ಹಾಕಿ ಫೇಸ್ ಪ್ಯಾಕ್ ತಯಾರಿಸಿ, ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಗೆ ತಾಜಾತನ ಮರಳಿ ಬರುತ್ತದೆ. ಅಲ್ಲದೆ, ಇದರಲ್ಲಿರುವ ಮಾಯಿಶ್ಚರೈಸಿಂಗ್ ಏಜೆಂಟ್ ಚರ್ಮವನ್ನು ಮೃದುಗೊಳಿಸುತ್ತದೆ. ನಿಮ್ಮ ತ್ವಚೆಗೆ ಕೂಲಿಂಗ್ ಎಫೆಕ್ಟ್ ನೀಡುತ್ತದೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರಿಸುತ್ತದೆ.

 

ಇದನ್ನು ಓದಿ: Chandrayan-3: ‘ಶಿವಶಕ್ತಿ’ ಪಾಯಿಂಟ್ ಮೇಲೆ ಸಂಭವಿಸಿದೆ ಯಾರು ಊಹಿಸದ ಘಟನೆ- ಪ್ರಜ್ಞಾನ್, ವಿಕ್ರಮ್ ಎಚ್ಚರವಾಗದಿರಲು ರೋಚಕ ಕಾರಣ ಬಹಿರಂಗ !!

Leave A Reply

Your email address will not be published.