Meghana Raj: ಮತ್ತೆ ಪ್ರೀತಿಯಲ್ಲಿ ಚಿರು ಪತ್ನಿ ಮೇಘನಾ ರಾಜ್‌? ನಟಿ ಕೊಟ್ರು ಬಿಗ್ ಅಪ್ಡೇಟ್

Sandalwood news Meghana Raj revealed the answer for remarriage latest updates

Meghana Raj: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ(Chiranjeevi Sarja) ಅಗಲಿಕೆಯ ಬಳಿಕ ಮೇಘನಾ ರಾಜ್ (Meghana Raj)ಅವರಿಗೆ ಎರಡನೇ ಮದುವೆಯ ಕುರಿತಂತೆ ಪ್ರಶ್ನೆಗಳು ಎದುರಾಗುತ್ತಲೆ ಇದೆ.ಮೇಘನಾ ರಾಜ್ ಚಿರು ಬಿಟ್ಟು ಹೋದ ನೋವಿನಿಂದ ಆಚೆಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದೀಗ, ಮತ್ತೊಮ್ಮೆ ಮೇಘನಾ ರಾಜ್ ಮರು ಮದುವೆ ಕುರಿತ ಪ್ರಶ್ನೆ ಮುನ್ನಲೆಗೆ ಬಂದಿದೆ.ಇದಕ್ಕೆ ನಟಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಚಿರಂಜೀವಿ ಸರ್ಜಾ (Chiranjeevi Sarja)ಹಾಗೂ ಮೇಘನಾ ರಾಜ್‌ ಜೋಡಿಗೆ ಯಾರ ದೃಷ್ಟಿ ತಗುಲಿತೋ ಏನೋ? ಖುಷಿಯ ಅಲೆಯಲ್ಲಿದ್ದ ಜೋಡಿಗೆ ವಿಧಿಯ ಆಟದ ಅರಿವಿರಲಿಲ್ಲ. ಎರಡು ವರ್ಷ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದ ಸಂದರ್ಭ ಏಕಾಏಕಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿದರು. ಈ ಸಂದರ್ಭದಲ್ಲಿ ಮೇಘನಾ ರಾಜ್‌ 5 ತಿಂಗಳ ಗರ್ಭಿಣಿಯಾಗಿದ್ದರು. ಜೀವಕ್ಕೆ ಜೀವವಾಗಿದ್ದ ಚಿರುವನ್ನು ಕಳೆದುಕೊಂಡ ಬಳಿಕ ಮೇಘನಾ ಅವರಿಗೆ ಪೋಷಕರು, ಚಿರಂಜೀವಿ ಸರ್ಜಾ ಕುಟುಂಬ ಮತ್ತು ಸ್ನೇಹಿತರ ವರ್ಗ ಜೊತೆಯಾಗಿ ಬೆಂಬಲವಾಗಿ ನಿಂತರು. ಎಲ್ಲರೂ ನಿನ್ನ ಜೊತೆಗೆ ನಾವಿದ್ದೇವೆ ಎನ್ನುವಂತೆ ಅಭಯ ನೀಡಿದ್ದರು.

Meghana Raj

ಮೇಘನಾ ರಾಜ್ (Meghana Raj)ನಟನೆಯ ‘ತತ್ಸಮ ತದ್ಭವ’ ಸಿನಿಮಾ ಬಿಡುಗಡೆಯಾಗಿದೆ. ಹಲವು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸರ್ಜಾ ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯ ನಡುವೆ ಮತ್ತೊಂದು ಸಿನಿಮಾಗೆ ಕೂಡ ನಟಿ ಓಕೆ ಅಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಎರಡನೇ ಮದುವೆ ಕುರಿತು ನಟಿ ಮೇಘನಾ ರಾಜ್ ಉತ್ತರ ನೀಡಿದ್ದಾರೆ.

‘ತತ್ಸಮ ತದ್ಬವ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ರೇಡಿಯೋ ಸಿಟಿ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನ ನಡೆದಿದ್ದು, ಈ ಸಂದರ್ಭ ನಿರೂಪಕಿ ಮೇಘನಾ ರಾಜ್ಗೆ ಪ್ರಶ್ನೆ ಕೇಳಿದ್ದಾರೆ. “ನೀವು ಯಂಗ್ ಮದರ್ ಇದ್ದೀರಿ.. ನಿಮ್ಮ ಬದುಕಿನ ಯಾವುದೋ ಒಂದು ಕ್ಷಣದಲ್ಲಿ ಮತ್ತೆ ಪ್ರೀತಿ ಹುಟ್ಟಿದರೆ ನೀವು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದಾಗ ಇದಕ್ಕೆ ನಟಿ ನೇರವಾಗಿ ಉತ್ತರ ನೀಡಿದ್ದಾರೆ. ಮೇಘನಾ ರಾಜ್ ಕೊಟ್ಟ ಉತ್ತರ ಹೀಗಿತ್ತು.”ನಾನು ಓಪ್ಪಿಕೊಳ್ಳುತವೇನೋ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ಬಹುಶ: ಯಾರೋ ಇದ್ದಾಗ ಅದಕ್ಕೆ ಉತ್ತರ ಬರಬಹುದೇನೋ.. ನನಗೆ ಈಗ ನಿಜವಾಗಿಯೂ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾರೂ ಮಾತಾಡಿಸಿಯೇ ಇಲ್ಲ ಅಂದರೆ ನಾನು ಸುಳ್ಳು ಹೇಳಿದಂತೆ ಆಗುತ್ತೆ. ನನ್ನ ಸುತ್ತಮುತ್ತ ಇಂತಹದ್ದೊಂದು ಮಾತುಕತೆ ನಡೆಯುತ್ತಲೇ ಇರುತ್ತದೆ. ಆದರೆ, ಮಾನಸಿಕವಾಗಿ ಇದಕ್ಕೆ ನಾನು ತಯಾರಿಗಿಲ್ಲ. ಅಂತಹ ಸಂದರ್ಭ ಬಂದರೆ ಏನು ಸೂಕ್ತವೋ ಅದನ್ನು ಮಾಡುತ್ತೇನೆ.” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

 

ಇದನ್ನು ಓದಿ: NPS Pension Scheme: ಪಿಂಚಣಿದಾರರಿಗೆ ಗುಡ್ ನ್ಯೂಸ್ – ನಿಮಗಿನ್ನು ಇಲ್ಲೂ ಸಿಗಲಿದೆ ಬಂಪರ್ ಲಾಭ !!

Leave A Reply

Your email address will not be published.