Mangalore:ಮೀನುಗಾರರಿಗೆ ಭರ್ಜರಿ ಬೇಟೆ; ಭಾರೀ ಗಾತ್ರದ ಮುರು ಮೀನು ಬಲೆಗೆ, ತೂಕ ಎಷ್ಟು ಗೊತ್ತೇ?
mangalore heavy fish found muru fish weighing 350kg
Mangalore Heavy Fish: ನಿನ್ನೆ ತಾನೇ ಉಚ್ಚಿಲ ಮೀನುಗಾರರ ಬಲೆಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದ್ದು, ಈ ಮೀನು ಭರ್ಜರಿ 75 ಕೆಜಿ ತೂಕ ಎಂದು ಹೇಳಲಾಗಿತ್ತು. ಇದೀಗ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರರ ತಂಡಕ್ಕೆ ಭರ್ಜರಿ 350 ಕೆಜಿ ತೂಕದ ಮುರು ಮೀನೊಂದು ಬಲೆಗೆ ಬಿದ್ದಿದೆ. ಈ ಘಟನೆ ಮೂರು ದಿನಗಳ ಹಿಂದೆ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಒಂದು ಕೆಜಿ ಗೆ 200 ರೂಪಾಯಿ ಬೆಲೆಬಾಳುವ ಈ ಮುರು ಮೀನು ಕಂಡು ಮೀನುಗಾರರು ನಿಜಕ್ಕೂ ಆಶ್ಚರ್ಯಚಕಿತಗೊಂಡಿದ್ದಾರೆ. ಈ ಒಂದು ಮೀನು ಮೀನುಗಾರರ ಜೇಬು ತುಂಬಿಸಿದೆ ಎಂದು ಹೇಳಬಹುದು. ನೀವು ಸಣ್ಣ ಗಾತ್ರದ ಮುರು ಮೀನು ನೋಡಿರಬಹುದು, ಆದರೆ ಇಷ್ಟೊಂದು ದೊಡ್ಡ ಗಾತ್ರದ ಮುರು ಮೀನು ನೋಡಿರಲಿಕ್ಕಿಲ್ಲ. ಇಷ್ಟು ಗಾತ್ರದ ಮೀನು ಇದೇ ಮೊದಲ ಬಾರಿಗೆ ಸಿಕ್ಕಿರುವುದು ಎಂದು ಮೀನುಗಾರರು ಹೇಳಿದಾರೆ.
ಉಚ್ಚಿಲ ಮೀನುಗಾರರ ಬಲೆಗೆ ನಿನ್ನೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದ್ದು, ಈ ಮೀನು ಭರ್ಜರಿ 75 ಕೆಜಿ ತೂಕ ಎಂದು ಹೇಳಲಾಗಿದೆ. ಮೀನುಗಾರರದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಜ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವವರು ಹಾಕಿದ್ದ ಬಲೆಗೆ ಈ ಬೃಹತ್ ತೂಕದ ಮೀನು ಬಿದ್ದಿದೆ.
ಪ್ರತಿವರ್ಷದಂತೆ ಮೀನುಗಾರರಿಗೆ ಹಲವು ವಿಧದ ಮೀನು ದೊರಕುತ್ತದೆ. ಈ ಬಾರಿ ಇಷ್ಟು ದೊಡ್ಡ ಗಾತ್ರದ ಪಿಲಿತೊರಕೆ ದೊರಕಿರುವುದು ಉತ್ಸಾಹ ಮೂಡಿದೆ. ವ್ಯಾಪಾರ ಮಾಡುವುದಿದ್ದರೆ ಈ ಮೀನಿಗೆ ಸುಮಾರು ಕೆಜಿಗೆ 200ರೂ. ದೊರಕುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೇ ಈದ್ ಮಿಲಾದ ಹಬ್ಬದ ದಿನ ಇದನ್ನು ತಮ್ಮೊಳಗೆ ಮೀನುಗಾರರು ಹಂಚಿಕೊಂಡಿದ್ದಾರೆ.