New Rule: ದೇಶದ ಎಲ್ಲಾ ಹೊಟೇಲ್ ವ್ಯಾಪಾರಸ್ಥರಿಗೆ ಬಿಗ್ ಶಾಕ್- ಆಹಾರ ಪಾರ್ಸಲ್ ಬಗ್ಗೆ ಏಕಾಏಕಿ ಹೊಸ ರೂಲ್ಸ್ ತಂದ ಕೇಂದ್ರ !

central government suddenly made new rules about food parcels

New Rule: ಹೋಟೆಲ್ ಗಳಲ್ಲಿ (hotel) ಹೆಚ್ಚಾಗಿ ತಿಂಡಿ-ತಿನಿಸು ಪ್ಯಾಕ್ ಮಾಡಲು ದಿನಪತ್ರಿಕೆ ಬಳಸುತ್ತಾರೆ. ಆದರೆ, ಇದೀಗ ದೇಶದ ಎಲ್ಲಾ ಹೊಟೇಲ್ ವ್ಯಾಪಾರಸ್ಥರಿಗೆ ಬಿಗ್ ಶಾಕ್ ಇಲ್ಲಿದೆ. ಕೇಂದ್ರ ಸರ್ಕಾರ ಆಹಾರ ಪಾರ್ಸಲ್ (parcel) ಬಗ್ಗೆ ಏಕಾಏಕಿ ಹೊಸ ರೂಲ್ಸ್ (New Rule) ತಂದಿದೆ. ಏನು ಆ ರೂಲ್ಸ್ ಗೊತ್ತಾ? ಈ ಮಾಹಿತಿ ಓದಿ!!.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಮುಖ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಆಹಾರ ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು, ಬಡಿಸಲು ಮತ್ತು ಸಂಗ್ರಹಿಸಲು ಪತ್ರಿಕೆಗಳನ್ನು (News paper) ಬಳಸುವುದನ್ನು ತಕ್ಷಣವೇ ನಿಲ್ಲಿಸಲು ಹೇಳಿದೆ.

ಆಹಾರವನ್ನು ಸುತ್ತಲು ಅಥವಾ ಪ್ಯಾಕ್ ಮಾಡಲು ದಿನಪತ್ರಿಕೆಯನ್ನು ಬಳಸುವುದರಿಂದ ಹಲವು ಆರೋಗ್ಯದ ಅಪಾಯಗಳು ಎದುರಾಗುತ್ತದೆ ಎಂದು FSSAI ಸಿಇಒ ಜಿ ಕಮಲಾ ವರ್ಧನ್ ರಾವ್
ಹೇಳಿದ್ದಾರೆ. ಹಾಗಾಗಿ ತಕ್ಷಣವೇ ಪತ್ರಿಕೆ ಬಳಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಫ್‌ಎಸ್ಎಸ್‌ಐ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಾವಳಿಗಳು 2018 ಅನ್ನು ಸೂಚಿಸಿದೆ. ಈ ನಿಯಮದ ಪ್ರಕಾರ, ವಾರ್ತಾ ಪತ್ರಿಕೆಗಳನ್ನು ಆಹಾರ ಕಟ್ಟಲು, ಮುಚ್ಚಲು ಅಥವಾ ಬಡಿಸಲು ಅಥವಾ ಕರಿದ ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಬಳಸಬಾರದು ಎಂದು ಹೇಳಿದೆ.

ದಿನಪತ್ರಿಕೆಗಳಲ್ಲಿ ಬಳಸುವ ಶಾಯಿಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿವಿಧ ಜೈವಿಕ ಸಕ್ರಿಯ ವಸ್ತುಗಳನ್ನು ಒಳಗೊಂಡಿದೆ. ಇದು ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೆಚ್ಚುವರಿಯಾಗಿ, ಪ್ರಿಂಟಿಂಗ್ ಇಂಕ್‌ಗಳು ಸೀಸ ಮತ್ತು ಭಾರ ಲೋಹಗಳನ್ನು ಒಳಗೊಂಡಂತೆ ರಾಸಾಯನಿಕಗಳನ್ನು ಹೊಂದಿರಬಹುದು. ಇದು ಆಹಾರಕ್ಕೆ ಸೋರಿಕೆಯಾಗಬಹುದು. ಸಮಯ‌ ಕಳೆದಂತೆ ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು FSSAI ಹೇಳಿದೆ.

 

 

Leave A Reply

Your email address will not be published.