Home News Supreme Court:ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ಇತಿಹಾಸ ಬರೆದ ‘ಮೂಕ ವಕೀಲೆ’- ಕೋರ್ಟ್ ಒಳಗೆ...

Supreme Court:ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ಇತಿಹಾಸ ಬರೆದ ‘ಮೂಕ ವಕೀಲೆ’- ಕೋರ್ಟ್ ಒಳಗೆ ನಡೆದದ್ದೇನು ?!

Supreme Court

Hindu neighbor gifts plot of land

Hindu neighbour gifts land to Muslim journalist

Supreme Court Deaf Lawyer:ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಸುಪ್ರೀಂ ಕೋರ್ಟ್(Supreme Court)ಹೊಸ ಇತಿಹಾಸ ಸೃಷ್ಟಿ ಮಾಡಿದೆ. ವಾಕ್ ಶ್ರವಣ ದೋಷವುಳ್ಳ ಮೂಕ ವಕೀಲೆಯೊಬ್ಬರು ಸಂಕೇತ ಭಾಷೆಯನ್ನು ಬಳಕೆ ಮಾಡುವ ಮೂಲಕ ವಾದ (Supreme Court Deaf Lawyer)ಮಂಡಿಸಿದ ಅಪರೂಪದ ಘಟನೆ ನಡೆದಿದೆ.

ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಸಂದರ್ಭ ಸಾರಾ ಸನ್ನಿ ಎಂಬ ಮೂಕ ವಕೀಲೆ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ಮಂಡಿಸಿದ್ದು,ಈ ಮೂಲಕ ಸುಪ್ರೀಂ ಕೋರ್ಟ್ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಹೇಳುವ ಮುಖಾಂತರ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ವಿಚಾರವನ್ನು ಅರಹುವ ಪ್ರಯತ್ನ ಮಾಡಿದ್ದಾರೆ. ಅರ್ಜಿಯೊಂದರ ವಿಚಾರಣೆಯ ಪ್ರಾರಂಭದ ಸಂದರ್ಭ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾ ಅವರ ಬದಲಿಗೆ ಕೇವಲ ವ್ಯಾಖ್ಯಾನಕಾರ ಸೌರಭ್ ಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಾರಾ ತರೆಯ ಹಿಂದೆ ಸಂಜ್ಞೆಯ ಮೂಲಕ ಹೇಳುತ್ತಿದ್ದ ವಿವರವನ್ನು ಬಾಯಿ ಮಾತಿನ ಮೂಲಕ ಸೌರಭ್ ಅವರು ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ನಡುವೆ, ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ವಕೀಲೆ ಸಾರಾ ಅವರಿಗೂ ಕೂಡ ಸ್ಕ್ರೀನ್ ಮೇಲೆ ಬರಲು ಅನುವು ಮಾಡಿಕೊಟ್ಟಿದ್ದಾರೆ. ಆನಂತರ, ಸಾರಾ ಅವರು ಒಂದು ಸ್ಕ್ರೀನ್ ನಲ್ಲಿ ತಮ್ಮ ಸಂಜ್ಞೆ ವಾದವನ್ನು ಮಂಡಿಸಿದರೆ, ಅವರ ವ್ಯಾಖ್ಯಾನಕಾರ ಸೌರಭ್, ಅವರ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.ಸುಪ್ರೀಂ ಕೋರ್ಟಿನ ನೂತನ ಪ್ರಯತ್ನಕ್ಕೆ ಅನೇಕ ಗಣ್ಯರು, ಹಿರಿಯ ವಕೀಲರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Pooja Hegde getting marriage with cricketer:ಖ್ಯಾತ ಕ್ರಿಕೆಟಿಗನನ್ನು ವರಿಸಲು ರೆಡಿಯಾದ ಕರಾವಳಿ ಚೆಲುವೆ !! ಅಬ್ಬಾ.. ಪೂಜಾ ಹೆಗ್ಡೆ ಮದ್ವೆ ಆಗೋ ಹುಡ್ಗ ಇವರೆನಾ?!