Ayushman Card: ಆಯುಷ್ಮಾನ್ ಕಾರ್ಡ್ ಇದ್ರೆ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ ಉಚಿತ – ಕಾರ್ಡ್ ಪಡೆಯೋದು ಹೇಗೆ ಗೊತ್ತಾ ?!
Health care PMJAY free treatment for these diseases and details about Ayushman card
Ayushman Card: ಕೇಂದ್ರ ಸರ್ಕಾರವು ಜನರಿಗಾಗಿ ಜನಧನ ಯೋಜನೆ, ವಯವಂದನ ಯೋಜನೆ, ರೋಜ್‌ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ (PMJAY)ಅಥವಾ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಭಾರತದ ಸರ್ಕಾರದ ಅತೀ ದೊಡ್ಡ ಆರೋಗ್ಯ ಯೋಜನೆಯಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯು ಬಡವರಿಗೆ ಆರೋಗ್ಯ ಸೇವೆಯನ್ನು(Health Care)ಪಡೆಯಲು ನೆರವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದ್ದು, ನಗದುರಹಿತ ಆಸ್ಪತ್ರೆ ಸೌಲಭ್ಯವನ್ನು ಪಡೆಯುವ ಯೋಜನೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆ (Ayushman Card)ಅಥವಾ ಈಗಿನ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಕ್ಯಾನ್ಸರ್ ತನಕ ಅನೇಕ ಗಂಭೀರ ಕಾಯಿಲೆಗಳಿಗೆ 5ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಲಾಗಿದೆ. ಕ್ಯಾನ್ಸರ್ , ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ದುಬಾರಿ ವೆಚ್ಚದ ಚಿಕಿತ್ಸೆಗಳ ವೆಚ್ಚವನ್ನು ಕೂಡ ಈ ಯೋಜನೆಯಡಿ ಭರಿಸಬಹುದು. ಪ್ರತಿವರ್ಷ ಆರು ಕೋಟಿ ಜನರಿಗೆ ಈ ಯೋಜನೆ ನೆರವಾಗುತ್ತಿದೆ. ಇನ್ನು ಆಯುಷ್ಮಾನ್ ಕಾರ್ಡ್ ಹೊಂದಿರುವ ವ್ಯಕ್ತಿ ದೇಶಾದ್ಯಂತ ಪಟ್ಟಿಯಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಯಾವೆಲ್ಲ ಕಾಯಿಲೆಗಳಿಗೆ ಕವರೇಜ್ ಸಿಗಲಿದೆ ಗೊತ್ತಾ?
# ತೀವ್ರ ನಿಗಾ ಸೇವೆಗಳ ವೆಚ್ಚವನ್ನು ಪಿಎಂಜೆಎವೈ ಅಡಿಯಲ್ಲಿ ಭರಿಸಲು ಅವಕಾಶವಿದೆ.
ಹೃದ್ರೋಗ ಚಿಕಿತ್ಸೆಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯವರೆಗೆ ಈ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಯೋಜನೆ ಅಡಿ ಕವರೇಜ್ ಸಿಗುವ ಕೆಲವು ಕಾಯಿಲೆಗಳ ಪಟ್ಟಿ ಇಲ್ಲಿದೆ.
*ಆಂಟೀರಿಯರ್ ಸ್ಪೈನ್ ಫಿಕ್ಸೇಷನ್
*ಪ್ರೋಸ್ಟೇಟ್ ಕ್ಯಾನ್ಸರ್
*ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್
*ಕಾರ್ರೋಟಿಡ್ ಆಂಜಿಯೋಪ್ಲಾಸ್ಟಿ ವಿಥ್ ಸ್ಟಂಟ್
*ಸುಟ್ಟ ಗಾಯಕ್ಕೆ ಸಂಬಂಧಿಸಿ ಟಿಶ್ಯೂ ಎಕ್ಸ್ ಪ್ಯಾಂಡರ್ ಚಿಕಿತ್ಸೆ
*ಪಲ್ಮನರಿ ವಾಲ್ವ ರಿಪ್ಲೇಸ್ ಮೆಂಟ್
*ಸ್ಕಲ್ ಬೇಸ್ ಸರ್ಜರಿ
*ಡಬಲ್ ವಾಲ್ವ ರಿಪ್ಲೇಸ್ ಮೆಂಟ್
ಆಯುಷ್ಮಾನ್ ಭಾರತ ಯೋಜನೆಯ ಮೂರನೇ ಹಂತವನ್ನು ಸೆ. 17ರಿಂದ ಆರಂಭ ಮಾಡಲಾಗಿದೆ. ಹೀಗಾಗಿ ಇನ್ನೂ ಈ ಯೋಜನೆಗೆ ಸೇರ್ಪಡೆಗೊಳ್ಳದವರು ಆಯುಷ್ಮಾನ್ ಭಾರತ ಯೋಜನೆಗೆ ಸೇರ್ಪಡೆಗೊಳ್ಳುವುದು ಹೇಗೆ? ಎಂದು ಯೋಚಿಸುತ್ತಿದ್ದರೆ ಈ ಕುರಿತ ಮಾಹಿತಿ ಇಲ್ಲಿದೆ.
ಸೇರ್ಪಡೆ ಆಗುವ ವಿಧಾನ ಹೀಗಿದೆ;
ಪಿಎಂಜೆಎವೈ ಯೋಜನೆಗೆ ಸೇರ್ಪಡೆಗೊಂಡವರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ.
# ಆಯುಷ್ಮಾನ್ ಕಾರ್ಡ್ ಆಪ್ ಆಯುಷ್ಮಾನ್ ಭಾರತ (PM-JAY) ಡೌನ್ ಲೋಡ್ ಮಾಡಬೇಕು.
# ಈ ಯೋಜನೆಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಸೇರ್ಪಡೆಗೊಳ್ಳಬಹುದು.
# ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಬೇಕು.
# ಫಿಂಗರ್ ಪ್ರಿಂಟ್, ಒಟಿಪಿ ಹಾಗೂ ಮುಖ ಆಧಾರಿತ ನೋಂದಣಿ ಮಾಡಿಕೊಳ್ಳಿ.
# ಇದರ ಜೊತೆಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವಾಸ್ತವ್ಯ ಪ್ರಮಾಣ ಪತ್ರ ಮತ್ತು ಪಾಸ್ ಪೋರ್ಟ್ ಗಾತ್ರದ ಫೋಟೋ ಅಪ್ಲೋಡ್ ಮಾಡಿ.
# ಎಲ್ಲ ವಿವರಗಳನ್ನು ಸರಿಯಾಗಿವೆಯಾ ಎಂಬುದನ್ನು ಸರಿಯಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5ಲಕ್ಷ ರೂ. ತನಕ ಕವರೇಜ್ ಪಡೆಯಲು ಅವಕಾಶವಿದೆ.ಈ ಯೋಜನೆಯಡಿಯಲ್ಲಿ ಲಿಸ್ಟ್ ಮಾಡಲಾಗಿರುವ ಯಾವುದೇ ಆಸ್ಪತ್ರೆ ಮೂಲಕ ಚಿಕಿತ್ಸೆ (ಖಾಸಗಿ ಒಳಗೊಂಡು) ಪಡೆಯಬಹುದು. ಇನ್ನು ಈ ಕವರೇಜ್ 3 ದಿನಗಳ ಆಸ್ಪತ್ರೆ ಸೇರ್ಪಡೆ ಮತ್ತು 15 ದಿನಗಳ ಆಸ್ಪತ್ರೆ ಸೇರ್ಪಡೆ ಬಳಿಕದ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಮೂಲಕ ಬಡವರಿಗೆ ಆಸ್ಪತ್ರೆ ವೆಚ್ಚದ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಕೆ ಮಾಡುವುದು ಸುಳ್ಳಲ್ಲ.