Vijay Sethupathi: ಈಕೆ ಬೇಡ, ಬೇರೆ ಹೀರೋಯಿನ್ ಇದ್ರೆ ನೋಡಿ – ಡೈರೆಕ್ಟ್ ಕೃತಿ ಶೆಟ್ಟಿಯನ್ನೇ ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ !! ಕೊಟ್ಟ ರೀಸನ್ ಏನು ಗೊತ್ತಾ ?!

Tollywood News Vijay Sethupathi reveales reason for refusing to act opposite Kruthi Shetty news

Vijay Sethupathi: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ವಿಜಯ್ ಸೇತುಪತಿ (Vijay Sethupathi) ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅಭಿಮಾನೀ ಬಳಗವನ್ನು ಹೊಂದಿದ್ದಾರೆ. ತಮ್ಮ ಪ್ರತಿ ಸಿನೆಮಾದ ಮೂಲಕ ಜನರಿಗೆ ಒಳ್ಳೆಯ ಸಂದೇಶ ರವಾನೆಯಾಗಬೇಕು ಎಂಬ ಧ್ಯೇಯ ಉದ್ದೇಶದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಯಾವುದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸಿ ಪಾತ್ರಕ್ಕೆ ಜೀವಕ್ಕೆ ತುಂಬುವ ನಟ ವಿಜಯ್ ಸೇತುಪತಿ ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದ ಕೂಡ ಗುರುತಿಸಿಕೊಂಡಿದ್ದಾರೆ. ಹೀಗಿರುವ ನಟ ವಿಜಯ್ ಸೇತುಪತಿ ನಟಿ ಕೃತಿ ಶೆಟ್ಟಿ ಬೇಡ, ಬೇರೆ ಹೀರೋಯಿನ್ ಇದ್ರೆ ನೋಡಿ ಎಂದು ಹೇಳಿದ್ದರಂತೆ. ಸೇತುಪತಿ ನಟನೆಯ ‘ಲಾಭಂ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ. ವಿಜಯ್ ಸೇತುಪತಿ ಅವರು ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಹೊಗಳಿದ್ದರು. ಅಷ್ಟೆ ಅಲ್ಲದೆ ಕೃತಿಯೊಂದಿಗೆ ತಮಿಳು ಚಿತ್ರವೊಂದರಲ್ಲಿ ನಟಿಸದೆ ಇರಲು ಕಾರಣವೇನು ಎಂಬುದು ಕೂಡ ವೀಡಿಯೋ ಮೂಲಕ ವೈರಲ್ ಆಗಿದೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜವಾನ್ ಚಿತ್ರದ ಚರ್ಚೆ ಜೋರಾಗಿದ್ದು, ಇದರ ನಡುವೆ, ನಟನ ಆಲೋಚನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಉಪ್ಪೇನಾ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭ ನಟ ವಿಜಯ್ ಸೇತುಪತಿ ಕೃತಿ ಶೆಟ್ಟಿಗೆ, ” ನನ್ನ ಮಗನಿಗೆ ಸುಮಾರು 15 ವರ್ಷ, ಆತ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ ಎಂದಿದ್ದರು. ಹೀಗಾಗಿ, ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್ ಮಾಡಲು ಹೇಗೆ ಸಾಧ್ಯ. ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದಾಗಿ ನಟ ಹೇಳಿದ್ದಾರೆ.
“ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ ಎಂಬುದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್ ಮಾಡಲು ಸಾಧ್ಯ” ಎಂದು ಸೇತುಪತಿ ಹೇಳಿದ್ದರು.

ಇದನ್ನೂ ಓದಿ: Sri Ram Sena activitists:ಗೋಮಾಂಸ ಸಾಗಾಟ ತಡೆದು ಗೋವಿನ ತಲೆಯನ್ನೇ ಕಡುಕರ ಮೇಲಿಟ್ಟು, ಕಾರಿಗೆ ಬೆಂಕಿಹಚ್ಚಿದ ಶ್ರೀರಾಮಸೇನೆ – ನಂತರ ಆದದ್ದೇನು?

Leave A Reply

Your email address will not be published.