Congestion Tax In Bengaluru: ವಾಹನ ಸವಾರರಿಗೆ ಮತ್ತೊಂದು ಶಾಕ್ ! ಬರಲಿದೆ ಹೊಸ ತೆರಿಗೆ ನಿಯಮ!!!
Bengaluru news congestion tax proposed for nine roads leading into Bengaluru
Congestion Tax In Bengaluru : ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್!! ವಾಹನ ಸವಾರರ ಮೇಲೆ ಮತ್ತೊಂದು ಸುಂಕದ (Congestion Tax In Bengaluru)ಜವಾಬ್ದಾರಿಯನ್ನು ಹೊರಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.
ಈಗಾಗಲೇ ಹಲವು ರೀತಿಯ ಸುಂಕ ಪಾವತಿಸುತ್ತಿರುವ ವಾಹನ ಸವಾರರು ಮತ್ತೊಂದು ತೆರಿಗೆ(Tax)ಪಾವತಿಗೆ ರೆಡಿಯಾಗಬೇಕಾಗಿದೆ. ಬೆಂಗಳೂರನ್ನು ಪ್ರವೇಶಿಸುವ ವಾಹನಗಳಿಗೆ ದಟ್ಟಣೆ ಸುಂಕವನ್ನು ವಿಧಿಸಲು ಸರ್ಕಾರ ಯೋಜನೆ ಹಾಕಿದ್ದು, ಭಾರೀ ದಟ್ಟಣೆಯ ಅವಧಿಯಲ್ಲಿ 9 ರಸ್ತೆಗಳ ಮೂಲಕ ಬೆಂಗಳೂರಿಗೆ ಬರುವ ವಾಹನಗಳಿಗೆ ಈ ದಟ್ಟಣೆ ಸುಂಕ ಬೀಳಲಿದೆ. ಪ್ರತಿದಿನ 12 ಮಿಲಿಯನ್ ವಾಹನಗಳು ಎಂದರೆ 1.2 ಕೋಟಿ ವಾಹನಗಳು ಬೆಂಗಳೂರನ್ನು ಪ್ರವೇಶಿಸುತ್ತಿವೆ. ದಟ್ಟಣೆ ಶುಲ್ಕ ವಿಧಿಸಿದರೆ ಸರ್ಕಾರದ ಬೊಕ್ಕಸಕ್ಕೆ ಭಾರೀ ಆದಾಯ ಬರುವ ಸಂಭವವಿದೆ. ದಟ್ಟಣೆ ಅವಧಿಯಲ್ಲಿ ರಸ್ತೆಯಲ್ಲಿ ತಮ್ಮ ವಾಹನ ಇದ್ದರೆ ಸರ್ಕಾರ ವಿಧಿಸುವ ವೆಚ್ಚದ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸುವ ಸಲುವಾಗಿ ಈ ಸುಂಕದ ಪ್ರಸ್ತಾಪ ಮಾಡಲಾಗಿದೆ.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಇಂಡಿಯನ್ ಚೆಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಕರ್ನಾಟಕ ದಶಕ – 1 ಟ್ರಿಲಿಯನ್ ಆರ್ಥಿಕತೆಗೆ ನೀಲಿನಕ್ಷೆ ಎಂಬ ಸಮಗ್ರ ವರದಿಯಲ್ಲಿ ದಟ್ಟಣೆ ಸುಂಕ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಿನ್ನೆಲೆ ವರದಿಯಲ್ಲಿ ದಟ್ಟಣೆ ಸುಂಕ ವಿಧಿಸುವ ಅಂಶವನ್ನು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಪಾಲು 2007 ರಿಂದ 2020ರ ವೇಳೆಗೆ ಶೇ.280ರಷ್ಟು ಹೆಚ್ಚಳ ಮಾಡಲಾಗಿದೆ.
2.1 ಮಿಲಿಯನ್ ಇದ್ದ ವಾಹನಗಳ ಸಂಖ್ಯೆ 8 ಮಿಲಿಯನ್ ಹೆಚ್ಚಳ ವಾಗಿದೆ. ಸಾರ್ವಜನಿಕ ಸಾರಿಗೆ ಬಳಕೆಯ ಪ್ರಮಾಣ ಶೇ.48ರಷ್ಟು ಮಾತ್ರವಿದ್ದು, ಹೀಗಾಗಿ, ನಗರದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜನ ನೀಡಲು ಈ ಸುಂಕ ಅನಿವಾರ್ಯ ಎಂದು ವರದಿ ತಿಳಿಸಿದೆ. ಈ ಮೂಲಕ ಬಸ್‌ಗಳು, ಕಾರು ಮತ್ತು ಡೆಲಿವರಿ ವಾಹನಗಳ ಪ್ರಯಾಣದ ಅವಧಿ ಸುಧಾರಿಸುವ ಕುರಿತು ಅನಿಸಿಕೆ ವ್ಯಕ್ತಪಡಿಸಲಾಗಿದೆ. 2021ರಿಂದ ಫಾಸ್ಟ್‌ಟ್ಯಾಗ್ ಅನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದ್ದು,ಇದೆ ಮಾದರಿಯನ್ನು ದಟ್ಟಣೆ ಸುಂಕ ವಿಧಿಸಲು ಅಳವಡಿಸಿಕೊಳ್ಳಬಹುದು ಎಂಬ ಅಭಿಪ್ರಾಯ ನೀಡಲಾಗಿದೆ.
ಇದನ್ನೂ ಓದಿ: Girls Fight: ಸ್ಕೂಲ್ ಹುಡುಗಿಯರ ಬೀದಿ ಜಗಳ – ವೈರಲ್ ಆಯ್ತು ವಿಡಿಯೋ !! ಸಖತ್ತಾಗೆ ಕಮೆಂಟ್ ಮಾಡಿದ ನೆಟಿಜೆನ್ಸ್