PM Kusum Yojana: ರೈತರೇ ಗಮನಿಸಿ, ಕೇಂದ್ರದ ಈ ಯೋಜನೆ ಮೂಲಕ ನಿಮಗೆ ಸಿಗಲಿದೆ ಭರಪೂರ ಪ್ರಯೋಜನ !!
Agriculture news Central Government scheme formers will get these facilities under pm Kusum scheme
PM Kusum scheme : ಕೇಂದ್ರ ಸರ್ಕಾರ (Central Government)ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಅದರಲ್ಲಿಯೂ ವಿಶೇಷವಾಗಿ ಕೃಷಿಗೆ (Agriculture)ಬೆಂಬಲ ನೀಡುವ ನಿಟ್ಟಿನಲ್ಲಿ ಪಿಎಂ ಕುಸುಮ್ ಯೋಜನೆ(PM Kusum Yojana)ರೂಪಿಸಲಾಗಿದೆ. ಈ ಯೋಜನೆಯಡಿ, ಸೌರ ಶಕ್ತಿಯ ಬಳಕೆ ಮಾಡಲು ರೈತರಿಗೆ ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲವನ್ನು ನೀಡಲಾಗುತ್ತದೆ.
ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ ಸೌರಶಕ್ತಿ ಬಳಕೆಗೆ ಆರ್ಥಿಕ ನೆರವು ನೀಡಲಾಗುವ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಆರ್ಥಿಕ ಸ್ವಾವಲಂಬನೆ, ವಿದ್ಯುತ್ ಸರಬರಾಜು ಮತ್ತು ಮಾಲಿನ್ಯ ನಿಯಂತ್ರಣ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ರೈತರು ತಮ್ಮ ಕೃಷಿಯಲ್ಲಿ ನೀರನ್ನು ಕೊಯ್ಲು ಮಾಡುವ ಜೊತೆಗೆ ನೀರಾವರಿ ಮಾಡಲು ಸೌರ ಪಂಪ್ ಗಳು ಮತ್ತು ಸೌರ ಶಕ್ತಿ ವ್ಯವಸ್ಥೆಗಳನ್ನು ಬಳಕೆ ಮಾಡಬಹುದು. ಈ ಯೋಜನೆಯ ಮೂಲಕ, ಸೌರ ಪಂಪ್ ಗಳನ್ನು ರೈತರಿಗೆ ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆ(PM Kusum scheme) ಅಡಿಯಲ್ಲಿ, ರೈತರು ಸೌರ ಪಂಪ್ ಗಳನ್ನು ಶೇಕಡಾ 60 ರಷ್ಟು ಸಬ್ಸಿಡಿಯಲ್ಲಿ ಪಡೆಯಬಹುದು. ರೈತರೊಂದಿಗೆ, ಈ ಪಂಪ್ ಗಳನ್ನು ಪಂಚಾಯತ್ ಗಳು ಮತ್ತು ಸಹಕಾರಿ ಸಂಘಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಸರ್ಕಾರವು ತನ್ನ ಹೊಲಗಳ ಸುತ್ತ ಸೌರ ಪಂಪ್ ಸ್ಥಾವರಗಳನ್ನು ಸ್ಥಾಪಿಸಲು ವೆಚ್ಚದ ಶೇಕಡಾ 30 ರವರೆಗೆ ಸಾಲವನ್ನು ಒದಗಿಸಲಾಗುತ್ತದೆ.
ರೈತರು ಸೌರ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದು. ಇಲಾಖೆಯು 3.7 ಪೈಸೆ ದರದಲ್ಲಿ ವಿದ್ಯುತ್ ಖರೀದಿ ಮಾಡುತ್ತದೆ.ರೈತರು ಈ ಮೂಲಕ ಮನೆಯಲ್ಲಿ ಕುಳಿತು ವರ್ಷಕ್ಕೆ ನಾಲ್ಕರಿಂದ ಐದು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ರೈತರು pmkusum.mnre.gov.in ಭೇಟಿ ನೀಡುವ ಮೂಲಕ ಸಬ್ಸಿಡಿಯಲ್ಲಿ ಈ ಸೌರ ಪಂಪ್ ಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ರೈತರು ತಮ್ಮ ರಾಜ್ಯಗಳ ವಿದ್ಯುತ್ ಇಲಾಖೆಯಿಂದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಪಿಎಂ ಕುಸುಮ್ ಯೋಜನಾ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ರೈತರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳಬಹುದು. ರೈತರು ಈ ಯೋಜನೆಯ ಶೇಕಡಾ 10 ರಷ್ಟು ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಿಂದ ರೈತರ ನೀರಾವರಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅದೇ ಸಮಯದಲ್ಲಿ, ರೈತರು ವಿದ್ಯುತ್ ಅಥವಾ ಡೀಸೆಲ್ ಪಂಪ್ಗಳೊಂದಿಗೆ ನೀರಾವರಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಇದನ್ನೂ ಓದಿ: Chaitra Kundapura: ಸ್ವಾಮೀಜಿ ಬಳಿ ಸಿಕ್ಕ ಹಣಕ್ಕೆ ಬಿಗ್ ಟ್ವಿಸ್ಟ್ – ಚೈತ್ರಾ ಮಾತ್ರವಲ್ಲದೆ ಇದೆಯಾ ಬೇರೆಯದೇ ಲಿಂಕ್ ?