Mangalore Cooker Bomb Blast: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್.ಐ.ಎ!! ಭಯಾನಕ ಸತ್ಯಾಂಶ ಬಯಲು!!!
Mangalore cooker bomb blast case main accused arrested by NIA
Mangalore Cooker Bomb Blast: ಮಂಗಳೂರಿನಲ್ಲಿ ಉಗ್ರಪರ ಗೋಡೆಬರಹ, ಕದ್ರಿ ಮಂಜುನಾಥ ದೇಗುಲ ಸಮೀಪ ಬಾಂಬ್ ಬ್ಲಾಸ್ಟ್, ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಇವೆಲ್ಲ ಪ್ರಕರಣಗಳ ಹಿಂದಿರುವ ಮಾಸ್ಟರ್ ಮೈಂಡ್ ಒಬ್ಬನನ್ನು ಎನ್‌ಐಎ ತಂಡ ಬಂಧಿಸಿದೆ. ಈತನ ಬಂಧನ ಎನ್‌ಐಎ ಗೆ ಮಹತ್ವದ್ದಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ(Mangalore Cooker Bomb Blast) ಸಂಬಂಧಿಸಿ ಈತ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಈತನ ಹೆಸರೇ ಅರಾಫತ್ ಆಲಿ. ಮಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಸಂಚು ರೂಪಿಸುತ್ತಿದ್ದವರ ಪೈಕಿ ಮಾಸ್ಟರ್ ಮೈಂಡ್ ಒಬ್ಬನನ್ನು ಸೆರೆಹಿಡಿದಿದ್ದಾರೆ ಎನ್.ಐ.ಎ.
ಮಂಗಳೂರು ಕದ್ರಿ ಮಂಜುನಾಥ ದೇಗುಲ ಸಮೀಪ ಬಾಂಬ್ ಬ್ಲಾಸ್ಟ್ ಮಾಡುವ ಪ್ಲಾನ್, ಮಂಗಳೂರಿನಲ್ಲಿ ಹಾಗೂ ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರಿನಲ್ಲಿ ಉಗ್ರಪರ ಗೋಡೆಬರೆಹದ ಹಿಂದೆ ಈತನಿದ್ದ ಎನ್ನಲಾಗಿದೆ. ಅಲ್ಲದೆ, ವಿದೇಶದಲ್ಲಿ ಕುಳಿತುಕೊಂಡು ವಿಧ್ವಂಸಕ ಚಟುವಟಿಕೆ ನಡೆಸುವ ಸಂಚು ರೂಪಿಸುತ್ತಿದ್ದ ಆರೋಪ ಈತನ ಮೇಲಿದ್ದು, ಎನ್.ಐ.ಎ.ಗೆ ಈತನ ಬಂಧನ ಮಹತ್ವದ್ದಾಗಿದೆ.
2022ರ ನ.22 ರಂದು ಆಟೋ ಒಂದರಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದ ಮೊಹಮ್ಮದ್ ಶಾರೀಕ್. ಆದರೆ ಮಾರ್ಗಮಧ್ಯದಲ್ಲಿ ಇದು ಸ್ಫೋಟಗೊಂಡಿತ್ತು. ಅಂದಿನ ಘಟನೆಯಲ್ಲಿ ಈ ಶಾರಿಖ್ ಜೊತೆ ಈತ ಸಂಪರ್ಕದಲ್ಲಿದ್ದ ಎಂದು ಎನ್‌ಐಎ ತಿಳಿಸಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇಗುಲ ಬಾಂಬ್ ಸ್ಫೋಟ ಮಾಡುವ ಸಂಚು ಈತನದ್ದೇ ಆಗಿದ್ದು, ಈತನೇ ಈ ಯೋಜನೆ ತಯಾರಿಸಿಕೊಟ್ಟಿದ್ದ ಎಂದು ಎನ್‌ಐಎ ತಿಳಿಸಿದೆ.ಕೀನ್ಯಾದ ನೈರೋಬಿಯಿಂದ ವಾಪಸಾಗುವ ಸಂದರ್ಭ ಎನ್.ಐ.ಎ. ಅಧಿಕಾರಿಗಳು ಈತನನ್ನು ಸುತ್ತುವರಿದು ಹಿಡಿದಿದ್ದಾರೆ.
ಈತ ವಿದೇಶದಲ್ಲಿ ಕುಳಿತು ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಕೆಲವರನ್ನು ಗುರುತಿಸಿ, ಬ್ರೈನ್ ವಾಶ್ ಮಾಡಿ, ಜಾಗತಿಕ ಉಗ್ರಗಾಮಿ ಸಂಘಟನೆಗಳಿಗೆ ನೇಮ ಮಾಡುವ ಕೆಲಸ ಈತನದ್ದು. ವಿದೇಶಿಗರ ನೆರವು ಪಡೆದು ಭಾರತದಲ್ಲಿ ಉಗ್ರಕೃತ್ಯ ಎಸಗಲು ಈತ ನೆರವು ನೀಡುತ್ತಿದ್ದ ಇದರ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.