Home News ಉಡುಪಿ Chaitra Kundapur: Big Update; ವಂಚನೆ ಪ್ರಕರಣ; ಚೈತ್ರ ಕುಂದಾಪುರ ಅಸ್ವಸ್ಥ ಕಾರಣ ಬಹಿರಂಗ! ಇದು...

Chaitra Kundapur: Big Update; ವಂಚನೆ ಪ್ರಕರಣ; ಚೈತ್ರ ಕುಂದಾಪುರ ಅಸ್ವಸ್ಥ ಕಾರಣ ಬಹಿರಂಗ! ಇದು ಆತ್ಮಹತ್ಯೆ ಅಲ್ಲ, ಬೇರೇನು? ಕಾರಣ ರಿವೀಲ್‌!!!

Chaitra Kundapur

Hindu neighbor gifts plot of land

Hindu neighbour gifts land to Muslim journalist

Chaitra Kundapur: ಉದ್ಯಮಿ ಗೋವಿಂದ ಪೂಜಾರಿಗೆ (Govinda Poojari) ಕೋಟಿಗಟ್ಟಲೆ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapur) ಅವರ ಆರೋಗ್ಯ ಸ್ಥಿತಿ ಬಗ್ಗೆ ಬಿಗ್‌ ನ್ಯೂಸ್‌ ದೊರಕಿದೆ. ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದ ಚೈತ್ರಾ ಅವರು ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.

ವೈದ್ಯಕೀಯ ಪರೀಕ್ಷೆಯ ಬಳಿಕ ಚೈತ್ರಾ ಅವರು ಫಿಟ್ಸ್‌ಗೆ(Epilepsy) ಒಳಗಾಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಧ್ಯಮವೊಂದು ಪ್ರಕಟ ಮಾಡಿದೆ. ಇದೀಗ ಅವರ ರಕ್ತದ ಒತ್ತಡ, ಪಲ್ಸ್‌ರೇಟ್‌ ನಾರ್ಮಲ್‌ ಇರುವುದಾಗಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಚೈತ್ರಾ ಅವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ತಿಳಿದು ಬಂದಿದ್ದು, ಕರೆದೊಯ್ಯಬಹುದು ಎಂದು ಡಾಕ್ಟರ್‌ ಹೇಳಿದರೂ, ಸ್ವಲ್ಪ ಸಮಯ ಆಸ್ಪತ್ರೆಯಲ್ಲಿರಲಿ ಎಂದು ಪೊಲೀಸರು ಕಾಯುತ್ತಿದ್ದು, ಬಳಿಕ ಶಿಫ್ಟ್‌ ಮಾಡುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ.

ಸೆ.12ರಂದು ಬಂಧನಗೊಳಗಾದ ಚೈತ್ರ ಸರಿಯಾಗಿ ನಿದ್ದೆ ಮಾಡಿಲ್ಲ, ಜೊತೆಗೆ ವಿಪರೀತ ಒತ್ತಡಕ್ಕೆ ಒಳಗಾಗಿದ್ದ ಕಾರಣ ಊಟ ಕೂಡಾ ಮಾಡಿಲ್ಲ.  ಇದರ ಮಧ್ಯೆ ಹತ್ತಾರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಒತ್ತಡದಿಂದಾಗಿ ಫಿಟ್ಸ್‌ ಬಂದು ಪ್ರಜ್ಞಾಹೀನಳಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Road Accident: ಕ್ರೂಸರ್‌ ಲಾರಿ ನಡುವೆ ಭೀಕರ ಅಪಘಾತ! ತಿರುಪತಿ ದರ್ಶನ ಮಾಡಿ ವಾಪಸ್‌ ಬರುತ್ತಿದ್ದಾಗ ನಡೆದ ದುರ್ಘಟನೆ!!! ಒಂದೇ ಕುಟುಂಬದ ಐವರ ದಾರುಣ ಸಾವು!!!