Wheat Stocks: ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ – ಈ ಆಹಾರ ಪದಾರ್ಥದ ಬೆಲೆಯಲ್ಲಿ ಭಾರೀ ಇಳಿಕೆ
Agriculture news Central Government limits wheat stocks to control price rice
Wheat Stocks: ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇತ್ತೀಚೆಗಷ್ಟೇ ಮೋದಿ ಸರ್ಕಾರ LPG ಗ್ಯಾಸ್ ಸಿಲಿಂಡರ್ ದರ ಇಳಿಕೆ ಮಾಡಿ ರಾಜ್ಯದ ಜನತೆಗೆ ಕೊಂಚಮಟ್ಟಿಗೆ ರಿಲೀಫ್ ನೀಡಿತ್ತು. ಇದೀಗ, ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ.
2024ರ ಲೋಕಸಭೆ ಚುನಾವಣೆಗೆ ಭರದ ಸಿದ್ದತೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯ ಅಸ್ತ್ರ ಪ್ರಯೋಗ ಮಾಡಿ ಜನರನ್ನು ಸೆಳೆಯುವ ತಂತ್ರ ಬಳಕೆ ಮಾಡುತ್ತಿದ್ದಾರೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ, 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ, ಅಡುಗೆ ಅನಿಲ ಸಿಲಿಂಡರ್ ಬೆಲೆ 200 ರೂ. ಇಳಿಕೆ (LPG Price Cut) ಮಾಡಲಾಗಿದೆ.ದೇಶದಲ್ಲಿ ಗೋಧಿ ದಾಸ್ತಾನು ಮಿತಿಯನ್ನು (Wheat Stocks) ಇಳಿಕೆ ಮಾಡಿ ಗೋಧಿ ಬೆಲೆ ನಿಯಂತ್ರಣ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.
ದೇಶದಲ್ಲಿ ಮುಂಗಾರು ಹಿನ್ನಡೆಯ ಪರಿಣಾಮ ಕೆಲ ತಿಂಗಳಿಂದ ಗೋಧಿ ಬೆಲೆಯು ನಿರಂತರವಾಗಿ ಏರಿಕೆ ಕಾಣುತ್ತಿದೆ. ದೇಶದಲ್ಲಿ ಹೆಚ್ಚು ಗೋಧಿ ಬೆಳೆಯುವ ಪಂಜಾಬ್, ಗುಜರಾತ್, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಗೋಧಿ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಕಳೆದ ಒಂದು ತಿಂಗಳಲ್ಲಿ ಒಂದು ಕ್ವಿಂಟಾಲ್ ಗೋಧಿ ಬೆಲೆಯು ಶೇ.4ರಷ್ಟು ಏರಿಕೆ ಕಂಡಿದ್ದು,, ಒಂದು ಕ್ವಿಂಟಾಲ್ ಗೋಧಿಗೆ 2,550 ರೂ. ತಲುಪಿದೆ. ಅದೇ ರೀತಿ, ಚಿಲ್ಲರೆ ಮಾರುಕಟ್ಟೆ ಒಂದು ವರ್ಷದಲ್ಲಿ ಕೆ.ಜಿ ಗೋಧಿ ಬೆಲೆಯಲ್ಲಿ ಶೇ.10ರಷ್ಟು ಏರಿಕೆ ಕಂಡಿದೆ. ಹೀಗೆ ಏರಿಕೆ ಕಂಡಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಗೋಧಿ ದಾಸ್ತಾನು ಮಿತಿಯನ್ನು ಇಳಿಕೆ ಮಾಡಿದೆ.
ದೇಶದಲ್ಲಿ ಗೋಧಿ ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಗೋದಾಮುಗಳಲ್ಲಿ ಗರಿಷ್ಠ 3 ಸಾವಿರ ಟನ್ ಗೋಧಿ ದಾಸ್ತಾನು ಮಾಡುವ ಗರಿಷ್ಠ ಮಿತಿಯನ್ನು ಈಗ 2 ಸಾವಿರ ಟನ್‌ಗೆ ಇಳಿಕೆ ಮಾಡಲಾಗಿದೆ. ಈ ಕ್ರಮದಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಗೋಧಿ ಪೂರೈಕೆಯಾಗಲಿದ್ದು, ಗೋಧಿಯ ಬೆಲೆ ನಿಯಂತ್ರಣ ಮಾಡಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Big Update On 500 Rupees Note: ನಿಮ್ಮ ಕಿಸೆಯಲ್ಲಿರುವ 500 ರ ನೋಟು ಅಸಲಿಯೇ- ನಕಲಿಯೇ ? ಸರಕಾರ ನೀಡಿದೆ ಬಿಗ್ ಅಪ್ಡೇಟ್!