PPF Savings Account: ಕೇಂದ್ರದ ಈ ಯೋಜನೆಯಲ್ಲಿ ನೀವೂ ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮಗಿದೆ ಬಿಗ್ ಗುಡ್ ನ್ಯೂಸ್!
Business news small saving schemes intrest rate of PPF saving account hike
PPF Account Holders : ಪಿಪಿಎಫ್ ಖಾತೆದಾರರಿಗೆ(PPF Account Holders)ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ಕೇಂದ್ರ ಸರಕಾರದಿಂದ ಅನೇಕ ಉಳಿತಾಯ ಯೋಜನೆಗಳು (PPF Account Benefits) ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ಯೋಜನೆಗಳ ಮೂಲಕ ಜನರ ಆರ್ಥಿಕ ಸುಧಾರಣೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪಿಪಿಎಫ್(PPF) ಅಥವಾ ‘ಸಾರ್ವಜನಿಕ ಭವಿಷ್ಯ ನಿಧಿ ಖಾತೆ’ ಅನ್ನುವುದು ಜನಪ್ರಿಯ ಉಳಿತಾಯ ಯೋಜನೆಯಾಗಿದ್ದು,ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ (80C)ಅನ್ವಯ ಆದಾಯ ತೆರಿಗೆ ವಿನಾಯಿತಿಗೂ(Tax exemption) ಅವಕಾಶವಿದೆ.
ನೀವೇನಾದರೂ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ ಇಲ್ಲವೇ PPF ಖಾತೆ ತೆರೆಯುವ ಯೋಜನೆ ಹಾಕಿದ್ದರೆ, ನಿಮಗೆ ಗುಡ್ ನ್ಯೂಸ್ ಇಲ್ಲಿದೆ. ಇನ್ಮುಂದೆ ಪಿಪಿಎಫ್ ಯೋಜನೆಯಲ್ಲಿ ಪಡೆಯುವ ಬಡ್ಡಿಯನ್ನು ದ್ವಿಗುಣಗೊಳಿಸಲಾಗುವ ಕುರಿತು ಸರಕಾರವು ಮಾಹಿತಿ ನೀಡಿದೆ. ಹೀಗಾಗಿ,ಈ ಬದಲಾವಣೆಯ ಬಳಿಕ ಹೂಡಿಕೆಯ(Investment)ಮೇಲೆ ಬಂಪರ್ ರಿಟರ್ನ್ ಸಿಗುವುದಂತು ಗ್ಯಾರಂಟಿ!!. PPF, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ ಕಿಸಾನ್ ವಿಕಾಸ್ ಪತ್ರ ಮುಂತಾದ ಸರ್ಕಾರ ನಡೆಸುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.
ಸೆಪ್ಟೆಂಬರ್ 29 ಮತ್ತು 30 ರಂದು ಈ ಯೋಜನೆಯ ಹೂಡಿಕೆದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಲಿದ್ದು, ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಎಂಪಿಸಿಯಲ್ಲಿ ಯಾವುದೇ ರೀತಿಯ ಯೋಜನೆ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿಲ್ಲ. ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವು 2020-21 ರ ಎರಡನೇ ತ್ರೈಮಾಸಿಕದಿಂದ 2022-23 ರ ಎರಡನೇ ತ್ರೈಮಾಸಿಕದವರೆಗೆ ಸತತ 9 ತಿಂಗಳುಗಳವರೆಗೆ ಒಂದೇ ಮಟ್ಟದಲ್ಲಿದೆ. ಈಗ ಕಳೆದ ಕೆಲವು ದಿನಗಳಿಂದ ಸರ್ಕಾರವು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಬಾರಿ ಪಿಪಿಎಫ್ ಬಡ್ಡಿದರವನ್ನು ಸರ್ಕಾರ ಹೆಚ್ಚಳ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಾಗುವ ನಿರೀಕ್ಷೆಯಿದೆ. ಸಣ್ಣ ಉಳಿತಾಯ ಯೋಜನೆಯಲ್ಲಿ ನೀಡಲಾಗುವ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲನೆ ನಡೆಸುತ್ತದೆ. ಜೂನ್ ಬಳಿಕ ಸೆಪ್ಟೆಂಬರ್ ಅಂತ್ಯದಲ್ಲಿ ಪರಿಶೀಲನಾ ಕಾರ್ಯ ನಡೆಯಲಿದೆ. ಈ ವೇಳೆ, ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಮದುವೆ ಆಗಲು ಹುಡುಗ ಬೇಕೆಂದು ರಸ್ತೆಯಲ್ಲಿ ಬೋರ್ಡ್ ಹಿಡಿದ ಹುಡುಗಿ – ನಂತರ ಆದ ಅವಾಂತರ ಕೇಳಿದ್ರೆ ನೀವೇ ಹೌಹಾರುತ್ತೀರಾ!!