Shocking News: ರೈತರಿಗೆ ಮತ್ತೆ ಬಿಗ್ ಶಾಕ್ !! ಮತ್ತೆ ದುಬಾರಿಯಾದ ರಸಗೊಬ್ಬರ ?!

Agriculture news fertiliser price hike Russian sellers stop fertiliser discounts to India

Share the Article

 

Fertiliser price hike: ರೈತರೇ(Farmers)ಗಮನಿಸಿ, ನಿಮಗೊಂದು ಶಾಕಿಂಗ್ ನ್ಯೂಸ್ (Shocking News)ಇಲ್ಲಿದೆ ನೋಡಿ! ಕೃಷಿಯನ್ನು ನೆಚ್ಚಿಕೊಂಡು ಜೀವನ ನಡೆಸುವ ಅದೆಷ್ಟೋ ಮಂದಿ ರೈತರಿಗೆ ಒಂದೆಡೆ ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ, ಮತ್ತೊಂದೆಡೆ ಕೃಷಿಗೆ ನಾನಾ ಬಗೆಯ ರೋಗಗಳು ಕಾಣಿಸಿಕೊಂಡು ಕೈ ಸುಟ್ಟುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಡುವೆ, ಜಾಗತಿಕವಾಗಿ ರಸಗೊಬ್ಬರ ದರ ಏರಿಕೆ ಕಾಣುತ್ತಿದ್ದು, ದೇಶಿಯವಾಗಿಯೂ ರಸಗೊಬ್ಬರ ದರ ಹೆಚ್ಚಳವಾಗುವ( Fertiliser price hike) ಸಂಭವ ದಟ್ಟವಾಗಿದೆ.

2202- 23ನೇ ಆರ್ಥಿಕ ವರ್ಷದಲ್ಲಿ ರಷ್ಯಾದಿಂದ ಭಾರತಕ್ಕೆ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣ ಶೇಕಡ 246ರಷ್ಟು ಹೆಚ್ಚಳವಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳವಾದ ಹಿನ್ನೆಲೆ ರಷ್ಯಾ ರಸಗೊಬ್ಬರ ಕಂಪನಿಗಳು ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆದ ಪರಿಣಾಮ ಮಾರುಕಟ್ಟೆ ದರದಲ್ಲಿ ಗೊಬ್ಬರ ಖರೀದಿಗಿಂತ ಭಾರತಕ್ಕೆ ಆಮದು ವೆಚ್ಚ ಭಾರಿ ದುಬಾರಿ ಆಗಲಿದೆ.

ರಷ್ಯಾದ ರಸಗೊಬ್ಬರ ಕಂಪನಿಗಳು ಭಾರತಕ್ಕೆ ಇದುವರೆಗೆ ನೀಡುತ್ತಿದ್ದ ರಿಯಾಯಿತಿ ರದ್ದು ಮಾಡಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಂಭವವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಏರು ಗತಿಯಲ್ಲಿ ಸಾಗುತ್ತಿದ್ದು , ರಷ್ಯಾ ಕಂಪೆನಿಗಳು ರಿಯಾಯಿತಿ ಹಿಂಪಡೆಯುವ ಹಿನ್ನೆಲೆ ಭಾರತದಲ್ಲಿ ರಸಗೊಬ್ಬರ ಬೆಲೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್ !! ಇನ್ಮುಂದೆ ಕಬಾಬ್, ಸಮೋಸ ಬ್ಯಾನ್ !! ಅರೇ ಏನಿದು ಶಾಕಿಂಗ್ ನ್ಯೂಸ್

Leave A Reply