Tulasi Plant: ತುಳಸಿ ಗಿಡದ ಬಳಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಹಾಗಿದ್ರೆ ಇದು ದಾರಿದ್ರ್ಯ ಆಹ್ವಾನಕ್ಕೆ ದಾರಿ- ಈ ಕೂಡಲೇ ಎಚ್ಚೆತ್ತುಕೊಳ್ಳಿ

Astrology thulasi plant vastu tips if you have these things near a Tulasi plant remove them immediately

Tulasi Plant: ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಗಳಿಸಿರುವ ತುಳಸಿ ಸಸ್ಯವನ್ನು (Tulasi Plant) ಪ್ರತಿನಿತ್ಯ ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ. ತುಳಸಿಯನ್ನು ನಿತ್ಯ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಂಟಾಗಿ, ಅಲ್ಲಿ ಸುಖ-ಶಾಂತಿಗೆ ಕೊರತೆಯೇ ಇರುವುದಿಲ್ಲ ಎಂಬ ನಂಬಿಕೆ ಇದೆ. ಅದಲ್ಲದೆ ಔಷಧೀಯ ಗುಣಗಳಿಂದ ಕೂಡಿರುವ ತುಳಸಿ ಸಸ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ಉಲ್ಲೇಖಗಳಿವೆ.

 

ಅಂತೆಯೇ ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯದ ಬಳಿ ಕೆಲವು ವಸ್ತುಗಳನ್ನು ಇಡುವುದರಿಂದ ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಂತಹ ಜಾಗದಲ್ಲಿ ಸದಾ ನೋವು, ಸಂಕಷ್ಟಗಳು ಹೆಚ್ಚಾಗುತ್ತವೆ ಎಂತಲೂ ಹೇಳಲಾಗುತ್ತದೆ. ಹಾಗಿದ್ದರೆ, ತುಳಸಿ ಸಸ್ಯದ ಬಳಿ ಯಾವ ವಸ್ತುಗಳನ್ನು ಇಡಲೇಬಾರದು ಎಂದು ಇಲ್ಲಿ ಹೇಳಲಾಗಿದೆ.

ತುಳಸಿ ಸಸ್ಯದ ಬಳಿ ಈ ವಸ್ತುಗಳನ್ನು ಇಡಲೇಬಾರದು:
ಪಾದರಕ್ಷೆ ಅಥವಾ ಚಪ್ಪಲಿ:
ಮುಖ್ಯವಾಗಿ ತುಳಸಿ ಗಿಡದ ಪಕ್ಕದಲ್ಲಿ ಚಪ್ಪಲಿ ಇಡುವುದರಿಂದ ದಾರಿದ್ರ್ಯ ಮತ್ತು ಬಡತನ ನಿಮ್ಮನ್ನು ಸುತ್ತಿಕೊಳ್ಳುತ್ತವೆ ಆದ್ದರಿಂದ ಚಪ್ಪಲಿ ಮತ್ತು ಶೂ ಗಳನ್ನು ತುಳಸಿ ಗಿಡದಿಂದ ದೂರದಲ್ಲಿ ಇರಿಸಿ.

ಪೊರಕೆ ಅಥವಾ ಕಸದ ಬುಟ್ಟಿ:
ತುಳಸಿ ಸಸ್ಯದ ಸಮೀಪದಲ್ಲಿ ಎಂದಿಗೂ ಕೂಡ ಪೊರಕೆಯನ್ನಾಗಲಿ, ಇಲ್ಲವೇ, ಕಸದ ಬುಟ್ಟಿಯನ್ನಾಗಲಿ ಇಡಲೇಬಾರದು. ಗೊತ್ತೋ ಅಥವಾ ಗೊತ್ತಿಲ್ಲದೆಯೋ ತುಳಸಿ ಸಸ್ಯದ ಬಳಿ ಕಸ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ನಿಮ್ಮ ಮೇಲೆ ಮುನಿಸಿಕೊಳ್ಳಬಹುದು.

ಗಣೇಶನ ವಿಗ್ರಹ:
ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಘ್ನ ವಿನಾಶಕ ಗಣೇಶನೂ ಒಮ್ಮೆ ತುಳಸಿಗೆ ಅಸುರನನ್ನು ಮದುವೆ ಆಗುವಂತೆ ಶಪಿಸಿದ್ದನು ಎಂದು ನಂಬಲಾಗಿದೆ. ಅಂದಿನಿಂದ ತುಳಸಿ ದೇವಿಗೆ ಗಣೇಶನನ್ನು ಕಂಡರೆ ಕೋಪವಿರುವುದರಿಂದ ತುಳಸಿ ಸಸ್ಯದ ಬಳಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು. ಮಾತ್ರವಲ್ಲ, ಗಣೇಶನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸಬಾರದು ಎನ್ನಲಾಗುತ್ತದೆ.

ಶಿವಲಿಂಗ:
ತುಳಸಿ ವಿಷ್ಣು ಪ್ರಿಯೆ. ತುಳಸಿ ಗಿಡದ ಬಳಿ ಶಿವಲಿಂಗ ಅಥವಾ ಶಿವನ ಮೂರ್ತಿ ಇತ್ಯಾದಿಗಳನ್ನು ಇಡಬಾರದು. ಇದರ ಹಿಂದಿನ ನಂಬಿಕೆಯೆಂದರೆ ತುಳಸಿ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು. ಆಕೆಯ ಹೆಸರು ವೃಂದಾ. ಜಲಂಧರನ ಕ್ರೌರ್ಯ ಹೆಚ್ಚಾದಾಗ, ಶಿವನು ಅವನನ್ನು ಕೊಲ್ಲಬೇಕಾಯಿತು. ಆದ್ದರಿಂದ ಶಿವನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇರಲು ಇದೇ ಮುಖ್ಯ ಕಾರಣ.

ಮುಳ್ಳಿನ ಅಲಂಕಾರ ಗಿಡಗಳು:
ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ಇಡುವ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ. ಹಾಗಾಗಿ, ತುಳಸಿ ಸಸ್ಯದ ಬಳಿ ಯಾವುದೇ ಮುಳ್ಳಿನ ಗಿಡಗಳಿದ್ದರೆ ತಕ್ಷಣ ತೆಗೆಯಿರಿ.

ಇದನ್ನೂ ಓದಿ: ಕೃಷ್ಣನ ಭಕ್ತಿಯೊಂದಿಗೆ ದಾಖಲೆ ಬರೆದ ಕರಾವಳಿ ಮಹಿಳೆ !! ಈಕೆ ತಯಾರಿಸಿದ ಬಗೆ ಬಗೆಯ ಖಾದ್ಯಗಳ ಸಂಖ್ಯೆ ಕೇಳಿದ್ರೆ ನೀವೇ ಶಾಕ್ !!

Leave A Reply

Your email address will not be published.