Home Breaking Entertainment News Kannada Vijay Sethupathi: ಮೊದಲು ಸೇಲ್ಸ್ ಮ್ಯಾನ್ ಆಗಿ ಕೆಲ್ಸ, ನಂತ್ರ ಹೈಟ್ ಕಾರಣಕ್ಕೆ ನಟನೆಯಿಂದ ರಿಜೆಕ್ಟ್-...

Vijay Sethupathi: ಮೊದಲು ಸೇಲ್ಸ್ ಮ್ಯಾನ್ ಆಗಿ ಕೆಲ್ಸ, ನಂತ್ರ ಹೈಟ್ ಕಾರಣಕ್ಕೆ ನಟನೆಯಿಂದ ರಿಜೆಕ್ಟ್- ಆದ್ರೆ ಇಂದು ಇವರ ಸಂಭಾವನೆ ಕೇಳಿದ್ರೆ ನೀವೇ ಶಾಕ್ !!

Vijay Sethupathi

Hindu neighbor gifts plot of land

Hindu neighbour gifts land to Muslim journalist

Vijay Sethupathi : ಸಿನಿಮಾ ರಂಗದಲ್ಲಿ ನೆಲೆ ನಿಲ್ಲುವುದು ಸುಲಭದ ಮಾತಲ್ಲ. ಇದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ.ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಪ್ರವೇಶ ಪಡೆಯುವ ಮೊದಲು ಬೇರೆ ಬೇರೆ ವೃತ್ತಿ ಮಾಡಿ ಕೊನೆಗೆ ಬಣ್ಣ ಹಚ್ಚಿ ಜನ ಮಾನಸದಲ್ಲಿ ಹೆಸರು ಪಡೆದ ಅದೆಷ್ಟೋ ನಟ – ನಟಿಯರ ಯಶೋಗಾಥೆ ಹೆಚ್ಚಿನವರಿಗೆ ತಿಳಿದಿಲ್ಲ.

ದೂರದ ಬೆಟ್ಟಗೆ ನುಣ್ಣಗೆ ಎಂಬಂತೆ ದೂರದಿಂದ ನೋಡಿದಾಗ ಎಲ್ಲವೂ ಸುಂದರ.ಆದರೆ ಒಮ್ಮೆ ಸಿನಿಮಾ ರಂಗದ ಒಳಹೊಕ್ಕರೆ ಅಲ್ಲಿನ ಒಳಗಿನ ಗುಟ್ಟು ರಟ್ಟಾಗುತ್ತದೆ. ಬಣ್ಣದ ಲೋಕದಲ್ಲಿ ನೆಲೆ ಕಂಡ ಬಳಿಕ ಯಶಸ್ಸು ಅರಸಿಕೊಂಡು ಬರುವುದು ಗೊತ್ತೇ ಇದೆ. ಆದರೆ, ಈ ನಡುವೆ ಸಿನಿ ಲೋಕದಲ್ಲಿ ತೊಡಗಿಸಿಕೊಂಡಾಗ ನಟ ನಟಿಯರಿಗೆ ಎದುರಾಗುವ ಮತ್ತು ಅನುಭವಿಸುವ ಕಷ್ಟ ವಿವರಿಸಲಾಗದಂತದ್ದು. ಹಿಂದೊಮ್ಮೆ ಸೇಲ್ಸ್ ಮ್ಯಾನ್ ಆಗಿ ತಮ್ಮ ಹೈಟ್ ನಿಂದ ರಿಜೆಕ್ಟ್ ಆಗಿದ್ದ ನಟ ಈಗ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಮಿಂಚುತ್ತಿದ್ದಾರೆ. ಯಾರು ಎಂದು ಯೋಚಿಸುತ್ತಿದ್ದೀರಾ? ಅವರು ಬೇರೆ ಯಾರೂ ಅಲ್ಲ ವಿಜಯ್ ಸೇತುಪತಿ!(Vijay Sethupathi)

16ನೇ ವಯಸ್ಸಿನಲ್ಲಿ ನಮ್ಮವರ್ (1994) ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಅಭಿಲಾಷೆ ಹೊತ್ತ ನಟ ವಿಜಯ್ ಸೇತುಪತಿ ತಮ್ಮ ಹೈಟ್ ವೈಟ್ ಕಾರಣದಿಂದ ರಿಜೆಕ್ಟ್ ಆಗಿದ್ದರಂತೆ. ಹಣಕ್ಕಾಗಿ ಚಿಲ್ಲರೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್‌ನಿಂದ ಹಿಡಿದು, ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಕ್ಯಾಷಿಯರ್‌, ಫೋನ್ ಬೂತ್ ಆಪರೇಟರ್‌ವರೆಗೆ ಎಲ್ಲ ವೃತ್ತಿಯಲ್ಲಿ ನಟ ತೊಡಗಿಸಿಕೊಂಡಿದ್ದಾರೆ.

ಕೈ ತುಂಬಾ ಸಂಬಳ ಸಿಗುವಂತಹ ದುಬೈನ ಉದ್ಯೋಗ ಸಿಕ್ಕರೂ ಕೂಡ ಸಿನಿಮಾ ರಂಗದ ಮೇಲಿದ್ದ ಒಲವು, ಆಸಕ್ತಿ ಕಡಿಮೆಯಾಗಿರಲಿಲ್ಲ. 2012 ವಿಜಯ್ ಸೇತುಪತಿ ಪಾಲಿಗೆ ಅದೃಷ್ಟದ ವರ್ಷ ಎಂದರು ತಪ್ಪಾಗದು. ಈ ವರ್ಷ ಬಿಡುಗಡೆಯಾದ ಮೂರು ಚಲನಚಿತ್ರಗಳು ಸುಂದರಪಾಂಡಿಯನ್, ಕಾರ್ತಿಕ್ ಸುಬ್ಬರಾಜ್, ಮತ್ತು ಬಾಲಾಜಿ ಥರಣೀಧರನ್ ಹಿಟ್ ಆಗಿ ಹೆಚ್ಚು ಸಂಭಾವನೆ ಕೂಡ ತಂದುಕೊಟ್ಟಿತು.

ಸೂಪರ್ ಡಿಲಕ್ಸ್ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ನಟನು ಅತ್ಯುತ್ತಮ ಪೋಷಕ ನಟನಿಗಾಗಿರುವ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದಾರೆ. ಪ್ರಸ್ತುತ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರಾಗಿದ್ದು, ನಟ ಶಾರುಖ್ ಖಾನ್ ಅಭಿನಯದ ಜವಾನ್‌ಗೆ ವಿಲನ್ ಪಾತ್ರಕ್ಕಾಗಿ 21 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಸೇತುಪತಿ ಅಟ್ಲಿ ನಿರ್ದೇಶನದ ಜವಾನ್‌ನಲ್ಲಿ ಖಳನಾಯಕನಾಗಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದು, ಈ ಚಿತ್ರದಲ್ಲಿ ಶಾರುಖ್ ಖಾನ್ ,ನಯನತಾರಾ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Sandalwood News: ನೀಲಿ ಚಿತ್ರ ನೋಡಿ ಎಲ್ಲಾ ಕಲಿತೆ, ನನ್ನ ಆ ಟೈಪ್ ಫೋಟೋ ಸೆಂಡ್ ಮಾಡಲು ಅದೇ ಕೊಡ್ತು ಐಡಿಯಾ- ಕನ್ನಡದ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ