Free Poultry Training: ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ ಮಾಡಲು ಬಯಸುವವರಿಗೆ ಸುವರ್ಣಾವಕಾಶ !
Agriculture news free poultry training accommodation food free rudset institute
Free Poultry Training : ಸ್ವಂತ ಉದ್ಯೋಗ ಮಾಡಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಅಲ್ಲದೆ ಸಾಕಷ್ಟು ಜನರು ಸ್ವಂತ ಉದ್ಯೋಗವನ್ನು ಮಾಡಿ ಲಕ್ಷಾಂತರ ರೂ.ಗಳಿಸಿರುವ ಪ್ರಕರಣಗಳೂ ಇವೆ. ಸದ್ಯ ಸ್ವ ಉದ್ಯೋಗವಾಗಿ ಕೋಳಿ ಸಾಕಾಣಿಕೆ (Free Poultry Training) ಮಾಡಲು ಬಯಸುವವರಿಗೆ ಸುವರ್ಣಾವಕಾಶ ಇಲ್ಲಿದೆ.
ಹಳ್ಳಿಗಳಲ್ಲಿ ಕೋಳಿ ಸಾಕುತ್ತಾರೆ. ಇದರಿಂದ ಹಣವೂ ಗಳಿಸುತ್ತಾರೆ. ಹಲವಾರು ಜನರು ಕೋಳಿ ಸಾಕಾಣೆ ಆರಂಭಿಸಿ ವೃತ್ತಿ ಜೀವನದಲ್ಲಿ ಮೆಲುಗೈ ಸಾಧಿಸಿರುವ ಘಟನೆಗಳು ಸಾಕಷ್ಟು ಕೇಳಿ ಬಂದಿವೆ. ನೀವು ಕೂಡ ಸಣ್ಣ ಬಂಡವಾಳದೊಂದಿಗೆ ವಿವಿಧ ತಳಿಯ ನಾಟಿ ಕೋಳಿ ಸುಧಾರಿತ ಮಾಂಸದ ಕೋಳಿ ಮತ್ತು ಮೊಟ್ಟೆ ಕೋಳಿಗಳನ್ನು ಸಾಕಣೆ ಮಾಡಿ ಕೈ ತುಂಬ ಹಣ ಗಳಿಸಬಹುದು. ಇದಕ್ಕಾಗಿ ಸರಕಾರ ಮತ್ತು ವಿವಿಧ ಸಂಘ-ಸಂಸ್ಥೆಗಳು ಸಾಲ, ಸಹಾಯಧನ ಸೌಲಭ್ಯ ನೀಡುತ್ತವೆ.
ಆದರೆ, ಬಡ್ಡಿದರದ ಸಾಲ (Loan) ಹಾಗೂ ಸಹಾಯಧನದ ಸೌಲಭ್ಯ ಸುಲಭದಲ್ಲಿ ಸಿಗಬೇಕೆಂದರೆ ಕೋಳಿ ಸಾಕಣೆ ಕುರಿತು ತರಬೇತಿ ಪಡೆದಿರಬೇಕು. ಸರಕಾರ (government) ಹಾಗೂ ವಿವಿಧ ಸಂಘ-ಸ೦ಸ್ಥೆಗಳು ಉಚಿತ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ನಿಮ್ಮಲ್ಲಿ ತರಬೇತಿ ಪಡೆದ ಅನುಭವ ಮತ್ತು ಸರ್ಟಿಫಿಕೇಟ್ ಇದ್ದರೆ ಸಾಲ ಮತ್ತು ಸಹಾಯಧನ ಸೌಲಭ್ಯ ಸುಲಭದಲ್ಲಿ ಸಿಗುತ್ತದೆ.
ರುಡ್‌ಸೆಟ್ ತರಬೇತಿ : ರುಡ್ ಸೆಟ್ (Rudset) ಸಂಸ್ಥೆಯಲ್ಲಿ ಹಲವಾರು ಜನರು ಉದ್ಯೋಗ ತರಬೇತಿ ಪಡೆಯುತ್ತಾರೆ. ಸಾಕಷ್ಟು ಜನ ಯುವಕ, ಯುವತಿಯರು ಇಲ್ಲಿ ತರಬೇತಿ ಪಡೆದು ಸ್ವಂತ ಉದ್ಯೋಗ ನಡೆಸುತ್ತಾರೆ. ಸದ್ಯ ರುಡ್‌ಸೆಟ್ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಸ್ವಉದ್ಯೋಗ ಮಾಡಲು ಸೆಪ್ಟೆಂಬರ್ 4ರಿಂದ 13ರ ವರೆಗೆ ಕೋಳಿ ಸಾಕಾಣಿಕೆ ತರಬೇತಿ ಪ್ರಾರಂಭಿಸುತ್ತಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಆಸಕ್ತರು ಅಗತ್ಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
18 ರಿಂದ 45 ವರ್ಷ ವಯೋಮಾನದ, ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಹೊಂದಿದ ಅಭ್ಯರ್ಥಿಗಳು ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಸರು ನೋಂದಣಿ ಹಾಗೂ ಮಾಹಿತಿಗೆ ದೂರವಾಣಿ ಸಂಖ್ಯೆ 98440 13948, 9880196581 ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ:
ರುಡ್‌ಸೆಟ್ ಸಂಸ್ಥೆ,
ಅರಿಶಿನಕುಂಟೆ,
ನೆಲಮಂಗಲ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ದೂರವಾಣಿ ಸಂಖ್ಯೆ: 9241482541, 8884554510, 9113880324, 9740982585
ಇದನ್ನೂ ಓದಿ: DA Hike: ಸರಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್! ತುಟ್ಟಿಭತ್ಯೆ ಹೆಚ್ಚಿಸಲು ಸರಕಾರದಿಂದ ಹೊಸ ಸೂತ್ರ!