Home Breaking Entertainment News Kannada Sanadalwood News: ಧ್ರುವ ಸರ್ಜಾ ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ಇಲ್ಲ! ಹಿಂಗ್ಯಾಕಂದ್ರು ಮೇಘನಾ?

Sanadalwood News: ಧ್ರುವ ಸರ್ಜಾ ನನ್ನನ್ನು ನೋಡಿಕೊಳ್ಳುವ ಅವಶ್ಯಕತೆ ಇಲ್ಲ! ಹಿಂಗ್ಯಾಕಂದ್ರು ಮೇಘನಾ?

Meghana Raj
Image source: India Today

Hindu neighbor gifts plot of land

Hindu neighbour gifts land to Muslim journalist

Meghana Raj: ಮೇಘನಾ ರಾಜ್ (Meghana Raj)ನಟನೆಯ ‘ತತ್ಸಮ ತದ್ಭವ’ ಸಿನಿಮಾ ಬಿಡುಗಡೆಗೆ ಭರದ ತಯಾರಿ ನಡೆಯುತ್ತಿದೆ. ಹಲವು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸರ್ಜಾ ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಜೋರಾಗಿ ಸದ್ದು ಮಾಡುತ್ತಿದೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಮೇಘನಾ ರಾಜ್‌ ಅಭಿನಯದ ‘ತತ್ಸಮ ತದ್ಭವ’ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದ್ದು, ಈ ವೇಳೆ, ಮೇಘನಾ ರಾಜ್ ಮತ್ತು ದ್ರುವ ಸರ್ಜಾ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಚಿರಂಜೀವಿ ಸರ್ಜಾ (Chiranjeevi Sarja)ಹಾಗೂ ಮೇಘನಾ ರಾಜ್‌ ಜೋಡಿಗೆ ಯಾರ ದೃಷ್ಟಿ ತಗುಲಿತೋ ಏನೋ? ಖುಷಿಯ ಅಲೆಯಲ್ಲಿದ್ದ ಜೋಡಿಗೆ ವಿಧಿಯ ಆಟದ ಅರಿವಿರಲಿಲ್ಲ. ಎರಡು ವರ್ಷ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದ ಸಂದರ್ಭ ಏಕಾಏಕಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿದರು. ಈ ಸಂದರ್ಭದಲ್ಲಿ ಮೇಘನಾ ರಾಜ್‌ 5 ತಿಂಗಳ ಗರ್ಭಿಣಿಯಾಗಿದ್ದರು. ಜೀವಕ್ಕೆ ಜೀವವಾಗಿದ್ದ ಚಿರುವನ್ನು ಕಳೆದುಕೊಂಡ ಬಳಿಕ ಮೇಘನಾ ಅವರಿಗೆ ಪೋಷಕರು, ಚಿರಂಜೀವಿ ಸರ್ಜಾ ಕುಟುಂಬ ಮತ್ತು ಸ್ನೇಹಿತರ ವರ್ಗ ಜೊತೆಯಾಗಿ ಬೆಂಬಲವಾಗಿ ನಿಂತರು. ಎಲ್ಲರೂ ನಿನ್ನ ಜೊತೆಗೆ ನಾವಿದ್ದೇವೆ ಎನ್ನುವಂತೆ ಅಭಯ ನೀಡಿದ್ದರು. ಈ ನಡುವೆ, ಚಿರು ನಿಧನದ ಬಳಿಕ ಧ್ರುವ ಸರ್ಜಾ ಅವರೇ ಮೇಘನಾ ರಾಜ್‌ ಅವರನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಸದ್ಯ, ಈ ಕುರಿತು ಮೇಘನಾ ರಾಜ್‌ ಪ್ರತಿಕ್ರಿಯೆ ನೀಡಿದ್ದು, ಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಫಿಲ್ಮಿ ಬೀಟ್‌ ಜೊತೆ ಮಾತನಾಡಿರುವ ಮೇಘನಾ ರಾಜ್‌ ತಮ್ಮ ಹಾಗೂ ಧ್ರುವಾ ಸರ್ಜಾ ಜೊತೆಗಿನ ಒಡನಾಟದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

”ನಾವೆಲ್ಲರೂ ದೊಡ್ಡವರು, ನಾನು ಧ್ರುವ ಸರ್ಜಾನನ್ನಾಗಲೀ, ಧ್ರುವ, ನನ್ನನ್ನಾಗಲೀ ನೋಡಿಕೊಳ್ಳುವ ಅವಶ್ಯಕತೆಯಿಲ್ಲ. ಇಬ್ಬರಿಗೂ ತಮ್ಮದೇ ಆದ ಕೆಲಸವಿದೆ. ಯಾರೂ ಯಾರನ್ನೂ ನೋಡಿಕೊಳ್ಳುವ ಅನಿವಾರ್ಯತೆ ಇಲ್ಲ. ನೋಡಿಕೊಳ್ಳೋದು, ಮಾಡುವುದು ಅನ್ನೋ ಪದ ಯಾರೂ ಬಳಕೆ ಮಾಡಬಾರದು. ಧ್ರುವ ನನ್ನ ತಮ್ಮನಿದ್ದ ಹಾಗೆ!! ಮೊದಲು ನಾವು ಹೇಗಿದ್ದೆವೋ ಈಗಲೂ ಅದೇ ರೀತಿ ಇದ್ದೇವೆ. ನನಗೆ ಧ್ರುವ ಜೊತೆ ಏನಾದರೂ ಹಂಚಿಕೊಳ್ಳಬೇಕು ಎಂದೇನಿಸಿದರೆ ಅವನಿಗೆ ಕರೆ ಮಾಡಿ ಮಾತಾಡುತ್ತೇನೆ . ಅದೇ ರೀತಿ, ಅವನಿಗೆ ನನ್ನ ಬಳಿ ಮಾತನಾಡಬೇಕೆಂದೆನಿಸಿದಾಗ ಅವನು ಕರೆ ಮಾಡುತ್ತಾನೆ.”

“ಧ್ರುವ ಸರ್ಜಾ ನನಗೆ ಬ್ಯಾಕ್‌ ಬೋನ್‌ ಇದ್ದ ಹಾಗೆ!!ನಾವು ಕರೆಯಲ್ಲಿ ಮಾತಾಡುವ ಸಂದರ್ಭ ಮಕ್ಕಳ ಬಗ್ಗೆಯೇ ಹೆಚ್ಚು ಮಾತಾಡುತ್ತೇವೆ. ಶಿಷ್ಯ ಸ್ಕೂಲ್‌ಗೆ ಹೋಗುತ್ತಿದ್ದಾನಾ ಎಂದು ಧ್ರುವ ರಾಯನ್‌ ಬಗ್ಗೆ ಕೇಳಿದರೆ, ನಿನ್ನ ಮಗಳು ರಾತ್ರಿ ಸುಮ್ಮನೆ ಮಲಗುತ್ತಾಳಾ ಎಂದು ನಾನು ಕೇಳುತ್ತೇನೆ. ಇದನ್ನು ಹೊರತುಪಡಿಸಿ ಏನಾದರೂ ಫನ್ನಿ ಮಾತುಕತೆ ಇರುತ್ತದೆ” ಎಂದು ಮೇಘನಾರವರು ಧ್ರುವ ಸರ್ಜಾ ಬಗ್ಗೆ ತಮಗಿರುವ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ! ನಡೆಯಲಿದೆ ನೇರ ಸಂದರ್ಶನ, ಮಾಸಿಕ ರೂ.15 ಸಾವಿರ!!!