Tomato Price: ಭಾರೀ ಇಳಿಕೆ ಕಂಡ ಟೊಮೆಟೋ ದರ ; ಗ್ರಾಹಕರ ಮುಖದಲ್ಲಿ ಸಂತಸ !!!
Agriculture news tomato price update tomato price reduced in Bengaluru
Tomato Price: ಈ ಹಿಂದೆ ಟೊಮೆಟೊ ಬೆಲೆ (Tomato Price) ಭಾರೀ ಏರಿಕೆಯಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ 100ರ ಗಡಿ ದಾಟಿತ್ತು. ಇದರಿಂದ ಕೊಳ್ಳುವ ಜನರಿಗೆ ಬರೆ ಎಳೆದಂತಾಗಿತ್ತು. ಅಲ್ಲದೆ, ಟೊಮೆಟೋ ಬೆಲೆಯು ಭಾರತೀಯ ಅಡುಗೆ ಮನೆಗಳ (Indian kitchen) ಮೇಲೆ ತೀವ್ರ ಪರಿಣಾಮ ಬೀರಿತ್ತು. ಆದರೆ, ಇದೀಗ ಗ್ರಾಹಕರಿಗೆ ಅದರಲ್ಲೂ ಗೃಹಿಣಿಯರಿಗೆ ಸಿಹಿಸುದ್ದಿ ಇಲ್ಲಿದೆ.
ಈಗಾಗಲೇ ಟೊಮೆಟೊ ದರ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆಯೂ ಕುಸಿತ ಕಂಡಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮೊದಲು ಟೊಮೆಟೊ ಬೆಲೆ ಗಗನಕ್ಕೇರಿತ್ತು. ಇದೀಗ ಭೂಮಿಗೆ ಇಳಿದಿದೆ, ಇನ್ನೂ ಪಾತಾಳಕ್ಕೆ ಇಳಿಯಲಿದೆ.
ಹೌದು, ದೇಶದ ಕೆಲವು ಕಡೆ ಪ್ರತಿ ಕೆಜಿ 250-300 ರೂ.ವರೆಗೆ ಮಾರಾಟವಾಗುತ್ತಿದ್ದ ಟೊಮೊಟೊ ಭರ್ಜರಿ ಡಿಮ್ಯಾಂಡ್ ಸೃಷ್ಟಿಸಿಕೊಂಡಿತ್ತು. ಇದೀಗ ಕರ್ನಾಟಕ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಲೆ ಕುಸಿತ ಕಂಡಿದೆ. ಉತ್ತರ ಭಾರತದಲ್ಲಿ ಟೊಮೇಟೊ ಪೂರೈಕೆ ಹೆಚ್ಚಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಇದು ಹೀಗೇ ಮುಂದುವರೆದರೆ ಸಗಟು ದರ ಪ್ರತಿ ಕೆಜಿಗೆ 5-10 ರೂ.ಗೆ ಕುಸಿತವಾಗಬಹುದು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ಸದ್ಯ ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತವಾಗುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ. ಕರಾವಳಿ ಭಾಗದಲ್ಲೂ ಟೊಮೆಟೊ ದರ ಕಡಿಮೆಯಾಗಿದೆ. ಇದರಿಂದ ಜನರಿಗೆ ಸಂತಸ ಉಂಟಾಗಿದೆ.
ಇದನ್ನೂ ಓದಿ: ರೂಪೇಶ್ ಶೆಟ್ಟಿ ಹೊಸ ಸಿನಿಮಾದಲ್ಲಿ ಹೀರೋಯಿನ್ ಜಾಹ್ನವಿ; ಸಾನ್ಯ ಳನ್ನು ರಿಜೆಕ್ಟ್ ಮಾಡ್ಬಿಟ್ರ ರೂಪೇಶ್?