Dharmasthala Sowjanya case: ಧರ್ಮಸ್ಥಳ ಸೌಜನ್ಯಾ ಪ್ರಕರಣ ತನಿಖೆಗೆ ಕೇಂದ್ರವನ್ನು ಒತ್ತಾಯಿಸಲು ಸಿದ್ಧ – ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್! ಆದರೆ ಮೊದಲು ಅದೊಂದು ಕೆಲಸ ಆಗ್ಬೇಕು, ಏನದು ??
Sowjanya murder case Karnataka CM Siddaramaiah's big statement about Dharmasthala Soujanya case
Dharmasthala Sowjanya case : ಧರ್ಮಸ್ಥಳದಲ್ಲಿ ಅತ್ಯಾಚಾರ ಹತ್ಯೆಗೆ ಒಳಗಾಗಿ ಕಳೆದ 11 ವರ್ಷಗಳಿಂದ ತನಿಖೆ ನಡೆದರೂ ಇವತ್ತಿಗೂ ಆರೋಪಿಯನ್ನು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿ ನೋವು ಪಡುತ್ತಿರುವ ಸೌಜನ್ಯ ಕುಟುಂಬಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣವನ್ನು( Dharmasthala Sowjanya case) ಕೇಂದ್ರ ತನಿಖೆಗೆ ಕೊಡಲು ಸಿದ್ದ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಕೇಂದ್ರ ಸಕಾ೯ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಒಂದು ದೊಡ್ಡ ಕೆಲಸ ಆಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಅದೇನು ಹಾಗಾದರೆ ದೊಡ್ಡ ಕೆಲಸ ?
ನಿನ್ನೆ, ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ. ಈ ವೇಳೆ ಸಾಹಿತಿಗಳು, ಸೌಜನ್ಯ ಪ್ರಕರಣ ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಆಗ ಹೇಳಿಕೆ ನೀಡಿದ ಸಿದ್ದರಾಮಯ್ಯನವರುಸೌಜನ್ಯ ಪೋಷಕರು ಮರು ತನಿಖೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿದೆ ಎಂದಿದ್ದಾರೆ.
“ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ನಡೆಸುವಂತೆ ಆಕೆಯ ಪೋಷಕರು ಕೇಂದ್ರ ಸರ್ಕಾರವನ್ನು ಕೋರಬೇಕಿದೆ. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಮರುತನಿಖೆ ನಡೆಸಲು ಪತ್ರ ಬರೆಯಲಿದೆ. ಅಲ್ಲದೆ, ಪ್ರಕರಣ ಕುರಿತು, ಮರುತನಿಖೆ ನಡೆಸಲು ಕೇಂದ್ರದ ಮೇಲೆ ಒತ್ತಡ ತರುವ ಬಗ್ಗೆ ಅಡ್ವಕೇಟ್ ಜನರಲ್ ಆವರೊಂದಿಗೆ ಚರ್ಚಿಸುತ್ತೇನೆ ” ಎಂದು ಹೇಳಿದರು. ವಿಚಾರವಾದಿಗಳ ಸಾಹಿತಿಗಳ ಮಧ್ಯಪ್ರವೇಶದಿಂದ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಿದ್ದು ಇದು ಸೌಜನ್ಯ ಕುಟುಂಬದವರು ಮತ್ತು ಹೋರಾಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಇಂದು ಈ ರಾಶಿಯ ವಿದ್ಯಾರ್ಥಿಗಳ ನಿರೀಕ್ಷೆ ಈಡೇರುತ್ತದೆ; ಹೊಸ ವಾಹನ ಖರೀದಿ ಭಾಗ್ಯ!!!