Senior Citizens Schemes: ಕೇಂದ್ರ ಸರ್ಕಾರದ ಈ ಅದ್ಭುತ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಸಿಗಲಿದೆ ಮಾಸಿಕ 10ಸಾವಿರ!
Central Government news 10000 rupees pension for senior citizen bumper income scheme
Senior Citizens Schemes:ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ(Future) ಬಗ್ಗೆಚಿಂತಿಸುವುದಲ್ಲದೆ ಮುಂದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ತಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ನಿಶ್ಚಿಂತೆಯಿಂದ ಕಳೆಯಲು ಬಯಸುವುದು ಸಹಜ. ಅದೇ ರೀತಿ ದೇಶದ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ(Senior Citizens Schemes) ಸರ್ಕಾರವು ಹಲವಾರು ಪಿಂಚಣಿ ಯೋಜನೆಗಳನ್ನು ನೀಡುತ್ತದೆ.
ಕೇಂದ್ರ ಸರ್ಕಾರ( Central Government)ಹಿರಿಯ ನಾಗರಿಕರಿಗೆ ಉಳಿತಾಯವನ್ನು ಹೆಚ್ಚಿಸಲು ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸಲು ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ.ನಿವೃತ್ತ ಹಿರಿಯ ನಾಗರಿಕರೂ ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲವು ವಿಶೇಷ ಪಿಂಚಣಿ ಯೋಜನೆಗಳ ಕುರಿತ ಡೀಟೈಲ್ಸ್ ಇಲ್ಲಿದೆ.
ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದೆ. ಈಗ ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹೆಚ್ಚಿನ ಬ್ಯಾಂಕುಗಳು ಆಗಸ್ಟ್‌ನಲ್ಲಿ ಬಡ್ಡಿದರಗಳನ್ನು ಬದಲಾಯಿಸಿದ್ದು, ಹೀಗಾಗಿ, ಹಿರಿಯ ನಾಗರಿಕರು 9% ವರೆಗೆ ಬಡ್ಡಿಯನ್ನು ಪಡೆಯಬಹುದು.
ಇದಲ್ಲದೆ, ಹಿರಿಯ ನಾಗರಿಕರಿಗೆ ಪ್ರಯೋಜನ ನೀಡುವ ಉಳಿತಾಯ ಯೋಜನೆಗಳು ಹೀಗಿವೆ:
# ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ :
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ, 18 ರಿಂದ 70 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಹಣವನ್ನು ಠೇವಣಿ ಮಾಡಲು ಅವಕಾಶವಿದೆ. ಈ ವ್ಯಕ್ತಿಗೆ 60 ವರ್ಷಗಳು ಪೂರ್ಣಗೊಂಡ ಬಳಿಕ, ಹೂಡಿಕೆಯ ಒಟ್ಟು ಮೊತ್ತದ ನಗದು ಮತ್ತು ಮಾಸಿಕ ಪಿಂಚಣಿ ಪಡೆಯಬಹುದಾಗಿದ್ದು, ಈ ಯೋಜನೆಯಡಿಯಲ್ಲಿ10,000 ರೂ.ವರೆಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ.
# ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ :
ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ 70 ರಿಂದ 79 ವರ್ಷದೊಳಗಿನ ಪಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ಮಾಸಿಕ 200 ರೂ. ಪಿಂಚಣಿ ಸೌಲಭ್ಯ ಸಿಗಲಿದೆ.
# ಅಟಲ್ ಪಿಂಚಣಿ ಯೋಜನೆ :
ವಿಶೇಷವಾಗಿ ಬಡವರು ಮತ್ತು ಹಿಂದುಳಿದವರ ಆರ್ಥಿಕ ಭದ್ರತೆಗಾಗಿ ಭಾರತ ಸರ್ಕಾರವು 2015 ರಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, 18 ರಿಂದ 40 ವರ್ಷದೊಳಗಿನವರು ತಮ್ಮ ಹಣವನ್ನು ಠೇವಣಿ ಮಾಡಲು ಅವಕಾಶವಿದ್ದು, 60 ವರ್ಷ ಪೂರ್ಣಗೊಂಡ ಬಳಿಕ ಹೂಡಿಕೆ ದಾರರಿಗೆ 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ದೊರೆಯಲಿದೆ.
# ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ :
ಕೇಂದ್ರ ಸರಕಾರದ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಮಾಸಿಕ 200 ರಿಂದ 500 ರೂ.ವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದರ ಜೊತೆಗೆ ಈ ಯೋಜನೆಯಲ್ಲಿ ದಾಖಲಿಸಿಕೊಂಡ ವ್ಯಕ್ತಿ ಮರಣ ಹೊಂದಿದ ಸಂದರ್ಭ ಈ ಕುಟುಂಬಕ್ಕೆ ಒಂದು ಬಾರಿ 20,000 ರೂ. ನೀಡಲಾಗುತ್ತದೆ.
ಇದನ್ನೂ ಓದಿ: Viral Video: ‘ಮಯೂರ’ ದ ಜೊತೆ ವಿಮಾನದಲ್ಲಿ ಮಹಿಳೆಯ ಪ್ರಯಾಣ! ಅಚ್ಚರಿಗೊಂಡ ಪ್ರಯಾಣಿಕರು!!! ವೀಡಿಯೋ ವೈರಲ್
Comments are closed.