Crime News: ನೈಟ್‌ಶಿಫ್ಟ್ ಮುಗಿಸಿ ಮನೆಗೆ ಬರುತ್ತಿದ್ದ ಯುವತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಸುಳಿಗೆ! ಜೀವ ಉಳಿಸಲು ಬೇರೆಯವರ ಮನೆ ಬಾಗಿಲು ತಟ್ಟಿದ ಯುವತಿ!!!
Bengaluru news a young woman coming home after night shift was assulted with a Talwar in Bengaluru
Bengaluru: ಯುವತಿ ನೈಟ್‌ಶಿಫ್ಟ್ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು (Crime News) ಯುವತಿಯ ಮೇಲೆ ಹಲ್ಲೆ, ಸುಳಿಗೆ ನಡೆಸಿರುವ ಘಟನೆ ಆಗಸ್ಟ್ 18ರ ನಸುಕಿನ ಜಾವ ಬೆಂಗಳೂರಿನ (Bengaluru) ಆರ್.ಎಸ್.ಪಾಳ್ಯದ ಕುವೆಂಪು ರಸ್ತೆಯಲ್ಲಿ ನಡೆದಿದೆ. ಯುವತಿಯನ್ನು ನಾಗಾಲ್ಯಾಂಡ್ ಮೂಲದವರು ಎನ್ನಲಾಗಿದೆ. ಈಕೆ ಪ್ರಾಣ ಉಳಿಸಿಕೊಳ್ಳಲು ಬೇರೆಯವರ ಮನೆ ಬಾಗಿಲು ತಟ್ಟಿದ್ದು, ಅದೃಷ್ಟವಶಾತ್ ಸ್ಥಳೀಯ ನಿವಾಸಿಯೊಬ್ಬರು ಯುವತಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
26 ವರ್ಷದ ಯುವತಿ ಸಾಫ್ಟ್‌ವೇರ್ ಕಂಪೆನಿಯೊಂದರ (software company) ಉದ್ಯೋಗಿಯಾಗಿದ್ದು, ಆಗಸ್ಟ್ 18ರಂದು ಯುವತಿ ನೈಟ್‌ಶಿಫ್ಟ್ ಕೆಲಸ (night shift work) ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಸುಮಾರು 3.30ರ ಹೊತ್ತಿಗೆ ಕಚೇರಿ ಕ್ಯಾಬ್‌ನಲ್ಲಿ ಮೂವರು ಸಹದ್ಯೋಗಿಗಳೊಂದಿಗೆ ಕುವೆಂಪು ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ (bike) ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ, ಮಚ್ಚು ತೋರಿಸಿ ಯುವತಿಯನ್ನು ಕಾರಿನಿಂದ ಹೊರಗೆಳೆದ. ಈ ವೇಳೆ ಆಕೆಯ ಟೀ ಶರ್ಟ್ ಹರಿದು ಹೋಗಿದ್ದು, ಯುವತಿ ಕಿರುಚಿಕೊಂಡಾಗ ಆಕೆಯ ರಕ್ಷಣೆಗೆ ಸಹೋದ್ಯೋಗಿ ಧಾವಿಸಿದ್ದಾನೆ. ನಂತರ ಯುವತಿ ಹಾಗೂ ಸಹೋದ್ಯೋಗಿ ಯುವಕ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದು, ಆಗ ದುಷ್ಕರ್ಮಿಯು ಮುಚ್ಚು ಹಿಡಿದು ಇಬ್ಬರನ್ನೂ ಬೆನ್ನಟ್ಟಿದ್ದಾನೆ.
ಯುವಕನು ಮನೆಯೊಂದರ ಕಾಂಪೌಂಡ್ ಹಾಕಿ ಒಳಗಡೆ ಹೋಗಿ ಅವಿತು ಕುಳಿತುಬಿಟ್ಟ. ಈ ವೇಳೆ ಯುವತಿ ಮನೆಯೊಂದರ ಬಾಗಿಲು ಬಡಿದಿದ್ದು, ಇದನ್ನು ನೋಡಿದ ದುಷ್ಕರ್ಮಿ ಆಕೆಯ ಕೂದಲು ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ. ಯುವತಿಯ ಕಿರುಚಾಟ ಹೇಳಿ ಮನೆಯೊಳಗಿದ್ದ ಲಾರೆನ್ಸ್ ಎಂಬುವವರು ಬಾಗಿಲು ತೆಗೆದು ಅವರನ್ನು ಒಳಗಡೆ ಕರೆಸಿಕೊಂಡು ಡೋರ್‌ಲಾಕ್ ಮಾಡಿದ್ದರು ಎನ್ನಲಾಗಿದೆ.
ಆದರೂ ಬಿಡದ ದುಷ್ಕರ್ಮಿ ಮನೆಯ ಬಾಗಿಲಿಗೆ ಮಚ್ಚಿನಿಂದ ಹೊಡೆಯುತ್ತಿದ್ದ. ಹೀಗಾಗಿ, ಲಾರೆನ್ಸ್ ಬಾಗಿಲು ತೆರೆದು ಪ್ರಶ್ನಿಸಿದ್ದು, ಅವರ ಕೈಗೂ ಮಚ್ಚಿನಿಂದ ದುಷ್ಕರ್ಮಿ ಹಲ್ಲೆ ಮಾಡಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆಯೇ ದುಷ್ಕರ್ಮಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.
ನಂತರ ಇಬ್ಬರೂ ಅಲ್ಲಿಂದ ತೆರಳಿದ್ದು, ಹಲ್ಲೆಗೊಳಗಾಗಿದ್ದ ಲಾರೆನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಲಾರೆನ್ಸ್ ದೂರು ನೀಡಿದ್ದಾರೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Comments are closed.