Married Women: ಹೆಂಡತಿಯಾದವಳು ಪ್ರತಿದಿನ ಈ 4 ಕೆಲಸ ಮಾಡಿದರೆ ಬಹಳ ಉತ್ತಮ!!!

Vastu tips married women should do these four things daily for her husband goodness

Married women Tips: ವಿವಾಹದ ನಂತರ ಮಹಿಳೆಯು ಹೇಗೆಲ್ಲಾ ಇರಬೇಕು , ಪತಿಯ ಮನೆಯಲ್ಲಿ ಯಾವ ರೀತಿ ವರ್ತಿಸಬೇಕೆಂಬುದು ಮುಖ್ಯವಾಗುತ್ತದೆ. ಯಾಕೆಂದರೆ ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಹೇಳಲಾಗುತ್ತದೆ. ಮಹಿಳೆ ಬಯಸಿದರೆ ಯಾವ ಮನೆಯನ್ನೂ ಕೂಡ ಖುಷಿಯಾಗಿ ಇರಿಸಬಹುದು.ಪತಿಯ ಆಯಸ್ಸು, ಆರೋಗ್ಯ, ಐಶ್ವರ್ಯ ಎಲ್ಲವೂ ಪತ್ನಿ ಹಾಗೂ ಆಕೆ ಮನೆಯನ್ನು ನಿರ್ವಹಿಸುವ ಮೇಲೆ ಅವಲಂಭಿತವಾಗಿರುತ್ತದೆ. ಮುಖ್ಯವಾಗಿ ವಿವಾಹದ ನಂತರ ಮಹಿಳೆಯರು ಇಡೀ ಕುಟುಂಬದ ಮೇಲೆ ಗಮನಹರಿಸಬೇಕು (Married women Tips).

ಪತ್ನಿಯಾದವಳು ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಸ್ಥಳವನ್ನು, ಮತ್ತು ಮನೆಯನ್ನು ಶುದ್ಧಗೊಳಿಸಿ, ನಂತರ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗದುಕೊಂಡು, ಆ ನೀರನ್ನು ಮನೆಯಲ್ಲೆಲ್ಲಾ ಸಿಂಪಡಿಸಿ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ನೆಲೆಸಲು ಪ್ರಾರಂಭವಾಗುತ್ತದೆ.

ವಿವಾಹಿತ ಮಹಿಳೆ ಬೆಳಗ್ಗೆ ಸ್ನಾನ ಮಾಡಿ ತುಳಸಿಯ ಮುಂದೆ, ದೇವರ ಕೋಣೆಯಲ್ಲಿ ಹಾಗೂ ಮನೆಯ ಮುಖ್ಯ ಬಾಗಿಲಿನ ಬಳಿ ದೀಪವನ್ನು ಬೆಳಗಬೇಕು. ಪ್ರತಿದಿನ ಸಂಜೆ ಮನೆಯಲ್ಲಿ ದೀಪ ಬೆಳಗುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ.

ಇನ್ನು ಪತ್ನಿ ತನ್ನ ಗಂಡನ ಮನೆಯಲ್ಲಿ ಬೆಳಗ್ಗೆ ಎದ್ದು ಶುದ್ಧಳಾಗಿ, ತುಳಸಿ ಪೂಜೆಯನ್ನು ಮಾಡಬೇಕು ಮತ್ತು ತುಳಸಿಗೆ ನೀರನ್ನು ಅರ್ಪಿಸಬೇಕು. ತುಳಸಿ ಗಿಡಕ್ಕೆ ಮುಂಜಾನೆ ಪೂಜೆ ಮಾಡಿ ನೀರು ಹಾಕುವುದರಿಂದ ಲಕ್ಷ್ಮಿ ದೇವಿಯ ರೂಪವಾದ ತುಳಸಿಯು ಕುಟುಂಬಕ್ಕೆ ಸಂತೋಷ, ಸಮೃದ್ಧಿಯನ್ನು ನೀಡುತ್ತದೆ.

ಮದುವೆಯಾದ ನಂತರ ಮಹಿಳೆಯರು ಏಕಾದಶಿಗಳಂತಹ ಪೌರ್ಣಮಿಯಂತಹ ವ್ರತಗಳನ್ನು ಆಚರಿಸಬೇಕು. ಈ ದಿನಗಳಲ್ಲಿ ಆಯಾ ದೇವರನ್ನು ಶ್ರದ್ಧಾ – ಭಕ್ತಿಯಿಂದ ಆರಾಧಿಸಿ ಉಪವಾಸವ ವ್ರತವನ್ನು ಆಚರಿಸಬೇಕು. ಇದರಿಂದ ಅವರ ವೈವಾಹಿಕ ಜೀವನವು ಖುಷಿಯಿಂದ ಕೂಡಿರುತ್ತದೆ.

ಇದನ್ನೂ ಓದಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

Comments are closed.