Home Breaking Entertainment News Kannada Kirik Keerthi: I want to come back… ನೀವು ಜೊತೇಲಿರಿ ಅಷ್ಟು ಸಾಕು, ಶೀಘ್ರದಲ್ಲೇ...

Kirik Keerthi: I want to come back… ನೀವು ಜೊತೇಲಿರಿ ಅಷ್ಟು ಸಾಕು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುವೆ- ಕಿರಿಕ್ ಕೀರ್ತಿ ಹೊಸ ಪೋಸ್ಟ್ ವೈರಲ್ !

Kirik Keerthi
Image credit: The times of india

Hindu neighbor gifts plot of land

Hindu neighbour gifts land to Muslim journalist

Kirik Keerthi: ಕನ್ನಡಪರ ಹೋರಾಟಗಾರನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿ, ನಂತರದ ದಿನಗಳಲ್ಲಿ ಬಿಗ್ ಬಾಸ್ ಗೆ (Biggboss) ಹೋಗಿ ಅಲ್ಲಿಂದಲೂ ಕೂಡ ಸಾಕಷ್ಟು ಜನಪ್ರಿಯತೆ ಹಾಗೂ ಜನಮನ್ನಣೆಯನ್ನು ಪಡೆದ ಕಿರಿಕ್ ಕೀರ್ತಿ (Kirik Keerthi) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ (Social Media) ತಮ್ಮ ಮಾತಿನ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟು, ಬಿಗ್ ಬಾಸ್’ ಸೀಸನ್ 4, ‘ಜೋಡಿ ನಂಬರ್ 1’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಪತ್ನಿಯಿಂದ ವಿಚ್ಛೇದನ (kirik Keerthi divorce) ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಕೀರ್ತಿ ಹೇಳಿಕೊಂಡಿದ್ದಾರೆ. ತಮ್ಮ ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿರುವ ಕಿರಿಕ್ ಕೀರ್ತಿ ಇದೀಗ ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುವೆ ಎಂದು ಪೋಸ್ಟ್ ಮಾಡಿದ್ದು, ಕಿರಿಕ್ ಕೀರ್ತಿ ಹೊಸ ಪೋಸ್ಟ್ ವೈರಲ್ ಆಗಿದೆ.

ಕೆಲ ಕಾಲ ಸೋಶಿಯಲ್ ಮೀಡಿಯಾದಿಂದ (Social Media Post) ದೂರ ಉಳಿದಿದ್ದ ಕಿರಿಕ್ ಕೀರ್ತಿ ಇದೀಗ ಪೋಸ್ಟ್ ಮಾಡಿದ್ದು, ನಾನು ಮತ್ತೆ ಹೊಸ ಹುರುಪಿನೊಂದಿಗೆ ಬರ್ತಿದ್ದೇನೆ. ಶೀಘ್ರದಲ್ಲೇ ಗುಡ್​ ನ್ಯೂಸ್ ಕೂಡ ಕೊಡ್ತೀನಿ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಕೆಲ ತಿಂಗಳು ಕಷ್ಟದಲ್ಲಿದ್ದೆ. ವೈಯಕ್ತಿಕ ಕಾರಣಗಳು ಕೈಕಟ್ಟಿ ಹಾಕಿತ್ತು. ಯಾವುದರಲ್ಲೂ ಆಸಕ್ತಿ ಇಲ್ಲದ ಮನಸ್ಥಿತಿ ನಿರ್ಮಾಣ ಆಗಿತ್ತು. ಈಗ ನಾನು ಎಲ್ಲದರಿಂದ ಹೊರಬಂದು ಮತ್ತೆ ಆಕ್ಟೀವ್ ಆಗಬೇಕು ಅಂತ ಡಿಸೈಡ್ ಮಾಡಿದೀನಿ. ನನ್ನನ್ನು ನಂಬಿ ನನ್ನ ಮೇಲೆ ಹೂಡಿಕೆ ಮಾಡಿದವರಿಗೆ ಏನಾಗುತ್ತೋ ಅನ್ನೋ ಆತಂಕ ಇತ್ತು. ಅದಕ್ಕೆಲ್ಲಾ ಈಗ ಪೂರ್ಣ ವಿರಾಮ. ಇನ್ನು ನಾನು ನಿಮ್ಮೊಡನೆ ಇರ್ತೀನಿ ಎಂದಿದ್ದಾರೆ.

ನಾನು ಹೊಸ ರೂಪದಲ್ಲಿ ನಿಮಗೆ ಕಾಣಲು ಸಿಗುತ್ತೇನೆ. ನಿಮ್ಮೆಲ್ಲರ ಆತಂಕಕ್ಕೆ ಫುಲ್ ಸ್ಟಾಪ್ ಇಡ್ತೀನಿ, ನಂಬಿದವರ ನಂಬಿಕೆ‌ ಉಳಿಸಿಕೊಳ್ತೀನಿ. ನನಗಾಗಿ ಬೇಸರಿಸಿಕೊಂಡವರಿಗೂ, ನನ್ನಿಂದ ಬೇಸರಗೊಂಡವರಿಗೂ ಖುಷಿ ಹಂಚ್ತೀನಿ. ಕೆಲವೇ ದಿನಗಳಲ್ಲಿ ನಿಮ್ಮೊಂದಿಗೆ ಖುಷಿ ವಿಷಯ ಹಂಚಿಕೊಳ್ತೀನಿ. ನನ್ನನ್ನು ಮನೆ ಮಗನ‌ ಹಾಗೆ , ಸಹೋದರನ ಹಾಗೆ ಸಮಾಧಾನ ಮಾಡಿದ ನಿಮ್ಮ‌ ಪ್ರೀತಿಗೆ ನಾನು ಋಣಿ, ಮತ್ತೆ ನನ್ನ ದಿನಗಳು ಮರಳಿ ಬರಲಿ ಅಂತ ನಿಮ್ಮದೊಂದು ಹಾರೈಕೆ ಇರಲಿ, I want to come back. ನೀವು ಜೊತೇಲಿರಿ ಅಷ್ಟು ಸಾಕು ಧನ್ಯವಾದ ಎಂದು ಕಿರಿಕ್ ಕೀರ್ತಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Election: ಶತಾಯ ಗತಾಯ ಪುನಃ ಅಧಿಕಾರಕ್ಕೆ ಬರಲು ಬಿಜೆಪಿ ರಣನೀತಿ! ‘ಕ್ಲಸ್ಟರ್ ಬಾಂಬಿಂಗ್’ ಗೆ ಮೊರೆ! ಏನಿದು?