Election: ಶತಾಯ ಗತಾಯ ಪುನಃ ಅಧಿಕಾರಕ್ಕೆ ಬರಲು ಬಿಜೆಪಿ ರಣನೀತಿ! ‘ಕ್ಲಸ್ಟರ್ ಬಾಂಬಿಂಗ್’ ಗೆ ಮೊರೆ! ಏನಿದು?

Political news BJP cluster bombing strategy to win Madhya Pradesh assembly elections

Madhya Pradesh Election : ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಮಧ್ಯಪ್ರದೇಶ ಚುನಾವಣೆ (Madhya Pradesh Election) ವರ್ಷಾಂತ್ಯದಲ್ಲಿ ನಡೆಯಲಿದ್ದು, ಈ ಚುನಾವಣೆಯಲ್ಲಿ ಗೆದ್ದು ಪುನಃ ಅಧಿಕಾರಕ್ಕೆ ಬರಲು ಬಿಜೆಪಿ ‘ಕ್ಲಸ್ಟರ್‌ ಬಾಂಬಿಂಗ್‌’ ರಣನೀತಿ ಮೊರೆ ಹೋಗಿದೆ.

ಅಂದಹಾಗೆ ಕ್ಲಸ್ಟರ್‌ ಅಂದ್ರೆ ಏನು?! ಬಿಜೆಪಿಯ (bjp) ಏನೀ ಹೊಸ ರೀತಿನೀತಿ?! ಕ್ಲಸ್ಟರ್‌ ಅಂದ್ರೆ ಸ್ಥಳೀಯ ಮಟ್ಟದಲ್ಲಿ ಇರುವ ಜನಾಶಯವನ್ನು ಆಧರಿಸಿ ಚುನಾವಣೆಯಲ್ಲಿ (election) ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡಲು ಹಾಗೂ ಗೆಲುವಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ರಾಜ್ಯದಲ್ಲಿ 230 ವಿಧಾನಸಭೆ ಕ್ಷೇತ್ರಗಳಿವೆ. ಇದರಲ್ಲಿ ಈಗಾಗಲೇ 39 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿಯಾಗಿದೆ. ಈ ಮಧ್ಯೆ ಚುನಾವಣಾ ಸಿದ್ಧತೆಗಾಗಿ ಮಧ್ಯಪ್ರದೇಶದ ಅಕ್ಕಪಕ್ಕದ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್‌ (gujrat) ಹಾಗೂ ಮಹಾರಾಷ್ಟ್ರದ 230 ಶಾಸಕರನ್ನು ಪ್ರತಿಯೊಂದು ಕ್ಷೇತ್ರಕ್ಕೂ ತಲಾ ಒಬ್ಬೊಬ್ಬರಂತೆ ನಿಯೋಜಿಸಲಾಗುತ್ತದೆ. ಇಲ್ಲಿ ಅವರು ಆಯಾ ಕ್ಷೇತ್ರಗಳ ಗಣ್ಯರು, ತಜ್ಞರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಹಾಗೂ ಜನಸಾಮಾನ್ಯರನ್ನು ಭೇಟಿ ಮಾಡಿ ಸಂವಹನ ಮಾಡಲಿದ್ದಾರೆ.

ನಂತರ ಒಂದು ವರದಿ ಸಿದ್ಧಪಡಿಸಲಿದ್ದು, ಆ ಕ್ಷೇತ್ರದ ಜನರ ಬೇಕು-ಬೇಡಗಳು ಏನು? ಪಕ್ಷ ಗೆಲ್ಲಲು ರೂಪಿಸಬೇಕಾದ ತಂತ್ರಗಳೇನು? ಅಲ್ಲಿನ ಹಾಲಿ ಬಿಜೆಪಿ ಶಾಸಕ ಅಥವಾ ಅಭ್ಯರ್ಥಿಯಾಗಲು ಯತ್ನಿಸುತ್ತಿರುವವರ ಬಗ್ಗೆ ಜನರು ಏನು ಹೇಳಿದ್ದಾರೆ? ಎಂಬುದನ್ನು ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ. ಇದನ್ನಾಧರಿಸಿ, ಹೈಕಮಾಂಡ್‌ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧರಿಸಲಿದೆ ಎನ್ನಲಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 109 ಹಾಗೂ ಕಾಂಗ್ರೆಸ್‌ 114 ಸ್ಥಾನ ಗೆದ್ದಿದ್ದವು. ಕಾಂಗ್ರೆಸ್ ನಾಯಕರು ಬಿಜೆಪಿ ಕಡೆಗೆ ಸೇರ್ಪಡೆಗೊಂಡರು. ಹೀಗಾಗಿ ನಂತರದಲ್ಲಿ ಶಿವರಾಜ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಇದೀಗ ಬಿಜೆಪಿಗೆ ಗೆಲುವು ಕಷ್ಟಕರವಾಗಿದೆ. ಹೀಗಾಗಿ ‘ಕ್ಲಸ್ಟರ್‌ ಬಾಂಬಿಂಗ್‌ ತಂತ್ರ’ಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Sexual Harassment : ಗಗನಸಖಿಗೆ ನಿನ್ನ ರೇಟ್ ಎಷ್ಟು? ಡಾಲರ್ ಎಷ್ಟು ಬೇಕು ಎಂದು ಕೇಳಿದವನಿಗೆ, ಕೊನೆಗೆ ಏನಾಯ್ತು?

Comments are closed.