Dulquer Salmaan: ಆ ಮಹಿಳೆ ನಟ ದುಲ್ಕರ್‌ನ ಮೈಮೇಲಿನ ಆ ಭಾಗಕ್ಕೆ ಕೈ ಹಾಕಿ ಮಾಡಿದ್ದೇನು?

Entertainment mollywood news actor dulquar Salman says a woman once touched me inappropriate way

Dulquer Salmaan: ಮಲಯಾಳಂ, ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ನಟಿಸಿರುವ ಮಾಲಿವುಡ್​ ನಟ ಮಮ್ಮುಟ್ಟಿ ಅವರ ಪುತ್ರ ದುಲ್ಕರ್ ಸಲ್ಮಾನ್ ಸೌತ್​ನ ಯಂಗ್ ಆ್ಯಕ್ಟರ್​ಗಳಲ್ಲಿ ಒಬ್ಬರು. ತೆಲುಗಿನಲ್ಲಿ ಮಹಾನಟಿ, ಓಕೆ ಕಣ್ಮಣಿ, ಸೀತಾ ರಾಮಂ ಸಿನಿಮಾಗಳಲ್ಲಿ ನಟಿಸಿ ದುಲ್ಕರ್ (Dulquer Salmaan) ಅವರು ಸೌತ್​ ಪ್ರೇಕ್ಷಕರಿಗೆ ಇದೀಗ ಆಪ್ತ ನಟನಾಗಿಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

 

ದುಲ್ಕರ್ ಸಲ್ಮಾಣ್ ಮೃಣಾಲ್ ಠಾಕೂರ್ ಜೊತೆ ಸೀತಾ ರಾಮಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ರಶ್ಮಿಕಾ ಕೂಡಾ ನಟಿಸಿದ್ದರು. ಮೂವಿ ಸೂಪರ್ ಹಿಟ್ ಆಯಿತು.

ಇದರಲ್ಲಿ ದುಲ್ಕರ್ ಅವರು ಹಿಂದೂ ಯುವಕನಾಗಿ ಹಾಗೂ ಮೃಣಾಲ್ ಮುಸ್ಲಿಂ ರಾಜಕುಮಾರಿಯಾಗಿ ನಟಿಸಿ ಮಿಂಚಿದ್ದಾರೆ. ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದಲ್ಲದೆ ಇಬ್ಬರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ ಇತ್ತೀಚೆಗೆ ದುಲ್ಕರ್ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಹೌದು, ತಮಗಾದ ಒಂದು ಅನುಭವವನ್ನು ಅವರು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ಯೂಟ್ಯೂಬರ್ ರಣವೀರ್ ಅಲ್ಲಾಬದಿಯಾ ಅವರೊಂದಿಗೆ ತನ್ನ ಇತ್ತೀಚಿನ ಶೋ ಗನ್ಸ್ & ಗುಲಾಬ್ಸ್ ಅನ್ನು ಪ್ರಚಾರ ಮಾಡುವಾಗ ತಮ್ಮ ಅನುಭವಗಳನ್ನು ಮಾತನಾಡಿದ ನಟ ದುಲ್ಕರ್, “ನನ್ನ ಜೊತೆ ಒಬ್ಬರು ಫೋಟೋ ಕ್ಲಿಕ್ಕಿಸುವಾಗ ತನ್ನ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆದರೆ ಇದು ಕಂಫರ್ಟಬಲ್ ಅಥವಾ ಉತ್ತಮ ವರ್ತನೆ ಅಲ್ಲ ಎಂದು ಅವರು ತಿಳಿಸಿದ್ದಾರೆ”.

“ಇನ್ನು ಒಬ್ಬ ಮಹಿಳೆ ನನ್ನ ಹಿಂಭಾಗ ಟಚ್ ಮಾಡಿದ್ದರು. ಅಲ್ಲದೇ ಆಕೆ ನನ್ನ ಹಿಂಭಾಗ ಮುಟ್ಟಿ ಕಿವುಚಿದ್ದರು. ನನಗೆ ತುಂಬಾ ನೋವಾಗಿತ್ತು. ಅದರ ಅರ್ಥವೇನೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಅದು ತುಂಬಾ ವಿಚಿತ್ರ ಅನುಭವ ಎಂದಿದ್ದಾರೆ ”

ಇದನ್ನೂ ಓದಿ: Chandrayaan-3: ಸುರ್ಯೋದಯಕ್ಕಾಗಿ ಕಾಯುತ್ತಿರುವ ಚಂದ್ರಯಾನ-3! ಈ ಕಾಯುವಿಕೆಯಲ್ಲೂ ಒಂದು ಅರ್ಥವಿದೆ!

Comments are closed.