Garlic Onion Price Hike: ಕೆಂಪು ಸುಂದರಿ ಕಾಟ ಕೊಟ್ಟ ಬೆನ್ನಲ್ಲೇ ಈರುಳ್ಳಿ, ಬೆಳ್ಳುಳ್ಳಿ ಕಾಟ ಶುರು ; ಹಬ್ಬದ ಸಮ್ಮುಖದಲ್ಲಿ ಗೃಹಿಣಿಯರಿಗೆ ಮನೆ ಬಜೆಟ್ ತೂಗಿಸೋ ಟೆನ್ಶನ್ !!
Agriculture news vegetable price in Karnataka garlic and onion price hike after tomato price hike
Garlic Onion Price Hike: ಜನರು ಟೊಮ್ಯಾಟೋ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಟೊಮೆಟೊ ಕೊಳ್ಳಲು ಕೈ ಹಾಕಿದರೆ ಕೈ ಸುಡುವಂತಾಗಿದೆ. ಈ ವಿಚಾರ ಎಲ್ಲರಿಗೂ ತಿಳಿದಿರುವಂತೆ. ಆದರೆ ಈಗ ಗೃಹಿಣಿಯರಿಗೆ ಮತ್ತೊಂದು ಶಾಕ್ ಇಲ್ಲಿದೆ. ಹೌದು, ಈರುಳ್ಳಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ (Garlic Onion Price Hike). ಇದರಿಂದ ಗೃಹಲಕ್ಷ್ಮಿಯರು ಟೆನ್ಶನ್ ಮಾಡಿಕೊಂಡಿದ್ದಾರೆ.
ಇದೀಗ ಕೆಂಪು ಸುಂದರಿಯ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗ್ತಿದೆ. ಜನರು ಕೊಂಚ ನಿಟ್ಟುಸಿರು ಬಿಡ್ತಿದ್ದಾರೆ. ಈ ಮಧ್ಯೆ ಮಾರ್ಕೆಟ್ನಲ್ಲಿ ಈರುಳ್ಳಿ (Onion) ಹಾಗೂ ಬೆಳ್ಳುಳ್ಳಿ (Garlic) ಬೆಲೆ ದುಬಾರಿಯಾಗ್ತಿದೆ. ಮುಂದಿನ ದಿನದಲ್ಲಿ ಈರುಳ್ಳಿ ಕೆ.ಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ವಾರದ ಹಿಂದೆ ಕೆಜಿ ಈರುಳ್ಳಿ, 25 ರೂ. ಇತ್ತು. ಈಗ 30 ರಿಂದ 40 ರೂ. ಆಗಿದೆ. ಬೆಳ್ಳುಳ್ಳಿ ಬೆಲೆ 80 ರಿಂದ 100 ರೂಪಾಯಿ ಇತ್ತು, ಈಗ 200 ರೂ.ಗೆ ಏರಿಕೆಯಾಗಿದೆ. ಇದು ಶ್ರಾವಣ ಮಾಸದ (Shravana Masa) ಆರಂಭದಲ್ಲಿ ಗ್ರಾಹಕರನ್ನು ಕಂಗಾಲಾಗಿಸಿದೆ.
ಸದ್ಯ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆ ಕೊರತೆ ಇದೆ. ಮಳೆ ವಿಳಂಬ ಆಗಿರೋದ್ರಿಂದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗ್ತಿದೆ. ಹೀಗಾಗಿ ಈರುಳ್ಳಿ ಕೊರತೆಯಿದ್ದು, ಈರುಳ್ಳಿಗೆ ದಿನ ದಿನಕ್ಕೂ ಡಿಮ್ಯಾಂಡ್ ಹೆಚ್ಚಾಗ್ತಿದೆ. ಬೆಲೆ ದುಬಾರಿಯಾಗ್ತಿದೆ. ಈ ಹಿನ್ನೆಲೆ ಮುಂದಿನ ದಿನದಲ್ಲಿ ಈರುಳ್ಳಿ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ 2000 ರೂ. ನಿಮ್ಮ ಖಾತೆಗೆ ಬೀಳೋ ದಿನಾಂಕ ಫಿಕ್ಸ್ ; ಸರ್ಕಾರದ ಆದೇಶ !
Comments are closed.