ಕರಾವಳಿ: ಅಡಿಕೆ ಬೆಲೆಯಲ್ಲಿ ಭಾರೀ ಹೆಚ್ಚಳ ; 500 ಗಡಿಯಲ್ಲಿ ಹೊಳೆಯುತ್ತಿರುವ ಗೊಲ್ಡನ್ ನಟ್ !
Agriculture news arecanut price in Karnataka Dakshina Kannada Mangaluru arecanut price hike
Arecanut Rate: ರಾಜ್ಯದಲ್ಲಿ ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಿಂದೆ ಟೊಮೆಟೋ ಬೆಲೆ (tomato price) ಭಾರೀ ಏರಿಕೆಯಾಗಿತ್ತು. ಜೊತೆಗೆ ಹಾಲಿನ ದರ, ಗೋಧಿ ಹಾಗೂ ಅಕ್ಕಿ (Rice Price) ಸೇರಿದಂತೆ ಹಲವು ಉಪಯುಕ್ತ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಎಲ್ಲಾ ಬೆಳೆ ಏರಿಕೆಯಿಂದ ಚಿಂತೆಗೀಡಾಗಿರುವ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಹೌದು, ಇದೀಗ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ ಬೆಲೆಯಲ್ಲಿ (Arecanut Rate) ಏರಿಕೆ ಕಂಡಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಹರ್ಷ ಮೂಡಿದೆ.
ಅಡಿಕೆ ಬೆಲೆಯಲ್ಲಿ ಪ್ರತಿದಿನ ಏರಿಳಿತ ಆಗುತ್ತಲೇ ಇರುತ್ತದೆ. ಅಂತೆಯೇ ಇದೀಗ ಅಡಿಕೆ ಬೆಲೆ ಏರಿಕೆಯಾಗಿದೆ. ಇದೀಗ ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿದೆ. ಕಳೆದ ಬಾರಿ ಅಡಿಕೆ ದರ ಕೆ.ಜಿ.ಗೆ ₹370 ಇತ್ತು. ಪ್ರಸ್ತುತ ದರ ₹487ಇದೆ. ದರದಲ್ಲಿ ಒಟ್ಟು ₹80 ಏರಿಕೆಯಾಗಿದೆ.
ಅಡಿಕೆ ಧಾರಣೆ :-
ಮಂಗಳೂರು ಚಾಲಿ ಹೊಸ ಅಡಿಕೆ ದರ – ಕೆ.ಜಿ.ಗೆ ₹447
ಹಳೆ ಅಡಿಕೆ ಧಾರಣೆ – ಕೆ.ಜಿ.ಗೆ ₹485ರಿಂದ ₹487
ಪಟೋರ ಅಡಿಕೆ ದರ – ಕೆ.ಜಿ.ಗೆ ₹400
ಕರಿಗೋಟು ದರ – ಕೆ.ಜಿ.ಗೆ ₹340
ಚೆಪ್ಪುಗೋಟು – ₹325–₹330
ಕ್ಯಾಂಪ್ಕೊದಲ್ಲಿ ಅಡಿಕೆ ಬೆಲೆ :-
ಹೊಸ ಅಡಿಕೆ ದರ – ₹30,000- 45,000
ಹಳೆ ಅಡಿಕೆ ದರ – ಕ್ವಿಂಟಲ್‌ಗೆ ₹43,500 ರಿಂದ ₹47,000
ಕೋಕಂಗೆ – ಕ್ವಿಂಟಲ್‌ಗೆ ₹23,000- 31,000
ಇದನ್ನೂ ಓದಿ: ಹೊಸ ಪಡಿತರ ಚೀಟಿ ಮಂಜೂರು ಮಾಡಬೇಡಿ: ಸರ್ಕಾರದ ಆದೇಶ, ತಕ್ಷಣದಿಂದ ಜಾರಿ
Comments are closed.