Viral Video: ಬಾಯ್‌ಫ್ರೆಂಡ್‌ ಮೇಲೆ ಮುನಿದು 80 ಫೀಟ್ ಹೈ ಟೆನ್ಶನ್ ಟವರ್‌ ಹತ್ತಿ ಯುವತಿಯ ಹೈ ಡ್ರಾಮಾ; ಕಂಗಾಲು ಯುವಕ ತಾನೂ ಕಂಬ ಏರಿದ !

Raipur news Video viral angry at boyfriend girl climbs 80 feet high transmission tower

Viral video: ಸಾಮಾನ್ಯವಾಗಿ ಪ್ರೇಯಸಿ ತನ್ನ ಬಾಯ್ ಫ್ರೆಂಡ್ (boyfriend) ಜೊತೆಗೆ ಜಗಳವಾಡಿ ಕೋಪಿಸಿಕೊಂಡಾಗ ಆತನೊಂದಿಗೆ ಮಾತನಾಡದೆ ಇದ್ದುಬಿಡುತ್ತಾಳೆ. ಕೆಲವು ಪ್ರೇಯಸಿಯರು ಫೋನ್ , ಮೆಸೇಜು ಮಾಡುವುದಿಲ್ಲ. ಆದರೆ ಚತ್ತೀಸ್‌ ಗಢದ ಗೌರೆಲಾ ಪೇಂದ್ರ ಮರ್ವಾಹಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಯುವತಿಯೊರ್ವಳು ಬಾಯ್‌ಫ್ರೆಂಡ್‌ ಮೇಲೆ ಮುನಿದು 80 ಫೀಟ್ ಹೈ ಟೆನ್ಶನ್ ಟವರ್‌ ಹತ್ತಿ ಹೈ ಡ್ರಾಮಾ‌ ಮಾಡಿದ್ದಾಳೆ. ಈಕೆಯ ವರ್ತನೆಯಿಂದ ಕಂಗಾಲಾದ ಯುವಕ ತಾನೂ ಕಂಬ ಏರಿದ್ದಾನೆ. ಮುಂದೇನಾಯ್ತು ಗೊತ್ತಾ?!

 

ಬಾಯ್‌ಫ್ರೆಂಡ್‌ ಮೇಲೆ ಮುನಿದು ಯುವತಿ 80 ಫೀಟ್ ಹೈ ಟೆನ್ಶನ್ ಟವರ್‌ ಹತ್ತಿದ್ದಾಳೆ. ಇತ್ತ ಯುವತಿಯ ವರ್ತನೆ ಕಂಡು ಆಕೆಯ ಬಾಯ್ ಫ್ರೆಂಡ್ ಗೆ ಭಯ ಶುರುವಾಗಿದೆ. ಯುವಕ ಎಷ್ಟೇ ಬೇಡಿಕೊಂಡರು, ಎಷ್ಟೇ ಸಮಾಧಾನಿಸಿದರೂ ಯುವತಿ ಮೇಲಿಂದ ಕೆಳಗೆ ಇಳಿಯಲೇ ಇಲ್ಲ. ಕೊನೆಗೆ ಯುವಕನೂ ಟವರ್ ಏರತೊಡಗಿದ.

ಇಬ್ಬರೂ ವಿದ್ಯುತ್‌ ಟವರ್‌ ಏರಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ದೀರ್ಘಕಾಲದ ಮಾತುಕತೆಯ ನಂತರ ಕೊನೆಗೂ ಇಬ್ಬರನ್ನೂ ಟವರ್‌ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಸದ್ಯ ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral video) ಆಗಿದೆ.

ಇದನ್ನೂ ಓದಿ: Spandana-Rakshit shivaram : ಸ್ಪಂದನಾ ಚಾಡಿ ಬುರುಕಿ, ಎಲ್ಲರ ಮುದ್ದಿನ ಅಚ್ಚು – ಅಣ್ಣ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಬಾಲ್ಯ ಹೇಗಿತ್ತು ಗೊತ್ತೇ ?

Comments are closed.