Nail Shapes: ನಿಮ್ಮ ಕೈಯಲ್ಲಿರುವ ಉಗುರಿನ ಆಕಾರದಲ್ಲಿ ಅಡಗಿದೆ ನಿಮ್ಮ ಭವಿಷ್ಯದ ಸೀಕ್ರೇಟ್‌!

Interesting facts about nail shape nail shape can reveal your hidden personality

Nail Shapes: ಮುಖ ನೋಡಿ ವ್ಯಕ್ತಿತ್ವ ತಿಳಿದುಕೊಳ್ಳಬಹುದು ಎನ್ನುತ್ತಾರೆ. ಅದರಂತೆ ನಿಮ್ಮ ಉಗುರಿನ ಆಕಾರ ನೋಡಿಯೂ ನೀವು ಹೇಗೆ, ಸ್ವಭಾವ ಎಂಥದು ಎನ್ನುವುದನ್ನು ಕೂಡಾ ತಿಳಿದುಕೊಳ್ಳಬಹುದು. ಬೆರಳಿನ ಉಗುರು (Nail Shapes) ನೋಡಿ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಜ್ಯೋತಿಷ್ಯದ ಇನ್ನೊಂದು ಭಾಗ. ನಿಮ್ಮ ಉಗುರಿನ ಆಕಾರ ಯಾವುದು? ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ.

 

ಉದ್ದನೆಯ ಉಗುರು: ಯಾರಿಗೆ ಮೊದಲಿನಿಂದಲೂ ಉದ್ದನೆಯ ಉಗುರು ಇರುತ್ತದೆಯೋ ಅವರು ಬಹಳ ಪ್ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ. ಇವರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಅಲ್ಲದೇ, ತುಂಬಾ ಕ್ರಿಯೇಟಿವ್ ವ್ಯಕ್ತಿತ್ವ ಅವರದ್ದಾಗಿರುತ್ತದೆ. ಸೃಜನಶೀಲರು ಮತ್ತು ಹೊಸದನ್ನು ಮಾಡಲು ಇಷ್ಟಪಡುತ್ತಾರೆ. ಆದರೆ, ಅವರು ಸಣ್ಣ ವಿಷಯಗಳಿಗೆ ಬೇಗನೆ ಕೋಪಗೊಳ್ಳುತ್ತಾರೆ. ಆದರೆ ಅವರ ಸಂಗಾತಿಯೊಂದಿಗಿನ ಅವರ ಸಂಬಂಧವು ಸಿಹಿಯಾಗಿರುತ್ತದೆ.

ಚೌಕಾಕಾರದ ಉಗುರು: ಉಗುರುಗಳು ಚೌಕಾಕಾರವಾಗಿ ಹೊಂದಿರುವ ಜನರು, ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅಂತಹ ಜನರು ಭವಿಷ್ಯದಲ್ಲಿ ಉತ್ತಮ ನಾಯಕರಾಗುತ್ತಾರೆ. ಇವರೊಂದಿಗೆ ಸಂಪರ್ಕ ಹೊಂದಿದ ಜನರು ತುಂಬಾ ಸಂತೋಷವಾಗಿರುತ್ತಾರೆ. ಆದರೆ, ಈ ಉಗುರಿನ ಆಕಾರದ ಜನರು ಬಹಳ ಹಠಮಾರಿಗಳು ಎನ್ನಲಾಗಿದೆ. ಈ ಜನರು ಸಾಮಾನ್ಯವಾಗಿ ವರ್ತನೆಯಲ್ಲಿ ಗಂಭೀರವಾಗಿರುತ್ತಾರೆ ಮತ್ತು ಶಾಂತ ಮನಸ್ಸಿನವರಾಗಿರುತ್ತಾರೆ.

ರೌಂಡ್ ಅಥವಾ ಅಂಡಾಕಾರದ ಉಗುರು: ನಿಮ್ಮ ಉಗುರುಗಳು ದುಂಡಗಿನ ತುದಿಗಳೊಂದಿಗೆ ವೃತ್ತಾಕಾರದ ಅಂಚುಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಗೊಂದಲಕ್ಕೊಳಗಾಗುವುದಿಲ್ಲ ಅಥವಾ ಒತ್ತಡಕ್ಕೊಳಗಾಗುವುದಿಲ್ಲ. ನೀವು ವಿಷಯಗಳನ್ನು ನಿಧಾನವಾಗಿ ತೆಗೆದುಕೊಳ್ಳಲು ಒಲವು ತೋರುತ್ತೀರಿ. ಜೊತೆಗೆ ಅಧಿಕ ಒತ್ತಡವನ್ನು ನಿಭಾಯಿಸುವ ಶಕ್ತಿ ನಿಮಗಿದೆ ಎಂಬ ವ್ಯಕ್ತಿತ್ವವನ್ನು ತೋರಿಸುತ್ತದೆ. ಯಾರ ಉಗುರುಗಳು ದುಂಡಗಿನ ಅಥವಾ ಅಂಡಾಕಾರದ ಆಕಾರದಲ್ಲಿರುತ್ತವೆ ಅಂತಹ ಜನರು ಸಂತೋಷದ ಸ್ವಭಾವವನ್ನು ಹೊಂದಿರುತ್ತಾರೆ.

ಬಾದಾಮಿ ಆಕಾರದ ಉಗುರು: ಈ ರೀತಿಯ ಆಕಾರದ ಉಗುರುಗಳನ್ನು ಪಡೆದ ಜನರು ಪ್ರಾಮಾಣಿಕರು, ದಯೆ, ಕಲ್ಪನಾತ್ಮಕ ಮತ್ತು ನಿಷ್ಠಾವಂತ ಸ್ವಭಾವದವರು. ಹೆಚ್ಚಿನ ವಿಷಯಗಳಲ್ಲಿ ನೀವು ಈ ಜನರನ್ನು ನಂಬಬಹುದು. ಈ ಜನರು ಅನ್ಯಾಯವನ್ನು ಸಹಿಸುವುದಿಲ್ಲ ಮತ್ತು ವಿಶೇಷವಾಗಿ ನಿಮಗೆ ಅರ್ಹವಾದದ್ದನ್ನು ನೀವು ಪಡೆಯುವುದಿಲ್ಲ. ನೀವು ಹೆಚ್ಚಾಗಿ ನಿಮ್ಮನ್ನು ಅಧಿಕ ಒತ್ತಡಕ್ಕೆ ಒಳಪಡಿಸುತ್ತೀರಿ, ಜ್ಯೋತಿಷ್ಯದ ಪ್ರಕಾರ, ನೀವು ಸಾಮಾನ್ಯವಾಗಿ ಆಗಾಗ ಅನಾರೋಗ್ಯದಿಂದ ಬಳಲುವಿರಿ. ಹಾಗೆ ಇವರು ಇತರರ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ.

ಅಗಲವಾದ ಉಗುರು: ಬಹಳ ಚಿಕ್ಕದಾದ ಮತ್ತು ಅಗಲವಾದ ಉಗುರು ಇದ್ದರೆ ಇವರು ತುಂಬಾ ಆರೋಗ್ಯವಂತರು ಎನ್ನಲಾಗುತ್ತದೆ. ಇವರಿಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರುತ್ತದೆ. ಉಗುರುಗಳು ಗಾತ್ರದಲ್ಲಿ ಅಗಲವಾಗಿರುವ ಜನರು ದೈಹಿಕವಾಗಿ ತುಂಬಾ ಬಲಶಾಲಿಯಾಗಿರುತ್ತಾರೆ. ಅವರ ಚಿಂತನೆಯು ಆಳವಾದ ಮತ್ತು ಸ್ಪಷ್ಟವಾಗಿದೆ. ಅವರು ಇತರರ ಸತ್ಯ ಮತ್ತು ಸುಳ್ಳನ್ನು ಬಹಳ ಸುಲಭವಾಗಿ ಕಂಡು ಹಿಡಿಯುತ್ತಾರೆ. ಅಲ್ಲದೇ, ಯಾವುದೇ ವಿಚಾರವಾದರೂ ಸ್ಪಷ್ಟತೆ ಇರುತ್ತದೆ. ಹಾಗೇ ಅಗಲವಾದ ಉಗುರುಗಳನ್ನು ಹೊಂದಿರುವ ಜನರು ಮುಕ್ತ ಮನಸ್ಸಿನವರು.

ಇದನ್ನೂ ಓದಿ: Gruha lakshmi Scheme: ಗೃಹಲಕ್ಷ್ಮಿ ಯೋಜನೆ; ಮಹಿಳೆಯರೇ ಇತ್ತ ಗಮನಿಸಿ, ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡುವ ತಂತ್ರಾಂಶದ ಆವೃತ್ತಿಯಲ್ಲಿ ಬದಲಾವಣೆ!

Leave A Reply

Your email address will not be published.