Home Breaking Entertainment News Kannada Richest Actors: ದಕ್ಷಿಣದ ಶ್ರೀಮಂತ ನಟ ಯಾರು ಗೊತ್ತಾ?! ಟಾಪ್ ಐದು ಶ್ರೀಮಂತ ಹೀರೋಗಳ ಲಿಸ್ಟ್...

Richest Actors: ದಕ್ಷಿಣದ ಶ್ರೀಮಂತ ನಟ ಯಾರು ಗೊತ್ತಾ?! ಟಾಪ್ ಐದು ಶ್ರೀಮಂತ ಹೀರೋಗಳ ಲಿಸ್ಟ್ ಇಲ್ಲಿದೆ

Richest Actors

Hindu neighbor gifts plot of land

Hindu neighbour gifts land to Muslim journalist

Richest Actors: ಚಿತ್ರರಂಗದ ನಟ, ನಟಿಯರ‌ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಎಲ್ಲಿಲ್ಲದ ಉತ್ಸಾಹ. ನಟ, ನಟಿಯರ ಸಿನಿಮಾ ಸಂಭಾವನೆಯ ಕುರಿತು ಮಾಹಿತಿ ತಿಳಿದುಕೊಳ್ಳಲು ಕಾತರಿಸುತ್ತಾರೆ. ಆದರೆ, ನಿಮಗೆ ಗೊತ್ತಾ ? ದಕ್ಷಿಣ ಭಾರತದ ಚಿತ್ರರಂಗದಲ್ಲಿನ ಶ್ರೀಮಂತ ಹಿರೋಗಳು (Richest Actors) ಯಾರೆಂದು. ಇಲ್ಲಿದೆ ನೋಡಿ 2023ನೇ ಸಾಲಿನ ಟಾಪ್ ಐದು ಶ್ರೀಮಂತ ಹೀರೋಗಳ ಲಿಸ್ಟ್ !.

ಅಕ್ಕಿನೇನಿ ನಾಗಾರ್ಜುನ : ತೆಲುಗಿನ ಪ್ರೇಕ್ಷಕರ ಮನಗೆದ್ದಿರೋ ನಾಗಾರ್ಜುನ್, ತನ್ನ ಚಿತ್ರಗಳ ಮೂಲಕ ಅಭಿಮಾನಿ ಬಳಗ ಹೆಚ್ಚಿಸಿಕೊಂಡಿದ್ದಾರೆ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆ ಉದ್ಯಮಿಯಾಗಿಯೂ ಯಶಸ್ವಿಯಾಗಿದ್ದಾರೆ. ನಟನೆ ಮಾತ್ರವಲ್ಲದೆ ಬಿಗ್ ಬಾಸ್ ನಿರೂಪಣೆ ಮಾಡಿಯೂ ಫೇಮಸ್ ಆಗಿದ್ದಾರೆ. ಸದ್ಯ ದಕ್ಷಿಣದ ಶ್ರೀಮಂತ ಹೀರೋಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಅವರ ನೆಟ್​ವರ್ತ್​ ಎಷ್ಟು ಗೊತ್ತಾ? ಸುಮಾರು 3010 ಕೋಟಿ ರೂಪಾಯಿ ಇದೆ.

ರಾಮ್ ಚರಣ್: RRR ಚಿತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ಸ್ಟಾರ್ ನಟ ರಾಮ್ ಚರಣ್‌ ದಕ್ಷಿಣ ಭಾರತದಲ್ಲಿ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ರಾಮ್ ಚರಣ್ ಅವರು ದಕ್ಷಿಣದ ಶ್ರೀಮಂತ ಹೀರೋಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಟ ರಾಮ್ ಚರಣ್‌ (Ram charan) ನಿವ್ವಳ ಆದಾಯವು ಪ್ರಸ್ತುತ 1,370 ಕೋಟಿ ರೂಪಾಯಿ ಆಗಿದೆ.

ಕಮಲ್ ಹಾಸನ್: ಭಾರತೀಯ ಚಿತ್ರರಂಗದ ದಂತಕತೆ ಎಂದೇ ಗುರುತಿಸಿಕೊಂಡಿರುವ, ಬಹುಭಾಷಾ ನಟ ಕಮಲ್ ಹಾಸನ್ ನಟ ಮಾತ್ರವಲ್ಲ, ನಿರ್ಮಾಪಕ ಹಾಗೂ ನಿರ್ದೇಶಕರೂ ಹೌದು. ಇವರು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಇವರ ಒಟ್ಟು ಆಸ್ತಿ 450 ಕೋಟಿ ರೂಪಾಯಿ ಇದೆ.

ದಳಪತಿ ವಿಜಯ್: ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ (Actor Vijay) ಒಂದು ಚಿತ್ರಕ್ಕೆ 150 ಕೋಟಿ ಚಾರ್ಜ್ ಮಾಡುತ್ತಾರೆ. ಅವರು ತಮಿಳು ಇಂಡಸ್ಟ್ರಿಯಲ್ಲಿ ಅತ್ಯಂತ ದುಬಾರಿ ನಟ ಎಂದು ಹೇಳಲಾಗುತ್ತದೆ. ವಾರಿಸು ಚಿತ್ರಕ್ಕೆ ನಟ ವಿಜಯ್ 125 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಸ್ಟಾರ್ ಹೀರೋ ವಿಜಯ್ ಅವರ ಆಸ್ತಿ 445 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ರಜನಿಕಾಂತ್: ಸೂಪರ್ ಸ್ಟಾರ್ ರಜನಿಕಾಂತ್​ ಅವರು ಕರ್ನಾಟಕದವರು. ಅವರು ಬದುಕು ಕಟ್ಟಿಕೊಂಡಿದ್ದು ತಮಿಳಿನಲ್ಲಿ. ಇವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಒಟ್ಟೂ ಆಸ್ತಿ 430 ಕೋಟಿ ರೂಪಾಯಿ ಇದೆ ಎಂದು ಹೇಳಲಾಗಿದೆ.

 

ಇದನ್ನು ಓದಿ: Kerala Temple: ಸೀರೆಯುಟ್ಟ ಪುರುಷರಿಗೆ ಮಾತ್ರ ಈ ದೇವಾಲಯಕ್ಕೆ ಸಿಗುತ್ತೆ ಎಂಟ್ರಿ..!