Railway ticket new rules: ರೈಲು ಹೊರಟ 10 ನಿಮಿಷಗಳ ನಂತರವೂ ಪ್ರಯಾಣಿಕ ಆಸನದಲ್ಲಿ ಕೂರದಿದ್ದರೆ ಟಿಕೆಟ್ ಕ್ಯಾನ್ಸಲ್ ! ಏನಿದು ವಿಚಿತ್ರ ನಿಯಮ ?
Latest news government new rules Indian Railway ticket new rules
Railway ticket new rules: ಭಾರತೀಯ ರೈಲ್ವೇ (Indian Railway) ತನ್ನ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ನೀವು ಕೂಡಾ ಪ್ರಯಾಣಕ್ಕಾಗಿ ರೈಲು ಟಿಕೆಟ್ ಅನ್ನು ಬುಕ್ ಮಾಡಿದ್ದರೆ, ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ. ಪ್ರಯಾಣಿಕರು ರೈಲು(Rail) ಹತ್ತುವಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ತಡವಾದರೆ ಅವರ ಟಿಕೆಟ್ (Railway ticket new rules) ರದ್ದುಗೊಳಿಸಿ ಬೇರೆ ಪ್ರಯಾಣಿಕರಿಗೆ ಆಸನ ಕಾಯ್ದಿರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ.
ಈ ಹಿಂದೆ ರೈಲು ತಪ್ಪಿ ಹೋದಾಗ ಪ್ರಯಾಣಿಕರು(passenger) ಒಂದು ಅಥವಾ ಎರಡು ನಿಲ್ದಾಣಗಳ ನಂತರವೂ ರೈಲು ಏರಬಹುದಿತ್ತು. TTE ಲಿಸ್ಟ್ ಇಟ್ಟುಕೊಂಡು ಪ್ರಯಾಣಿಕರ ಹಾಜರಾತಿಯನ್ನು ರೈಲ್ವೆ ಸಿಬ್ಬಂದಿಗಳು ಗುರುತಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಮುಂದಿನ ಪ್ರಯಾಣಿಕರ ಬರುವಿಕೆಗಾಗಿ ಮುಂದಿನ ನಿಲ್ದಾಣದವರೆಗೂ ಕಾಯುತ್ತಿದ್ದರು. ಆದರೆ ಈಗ ಅವರಿಗೆ ಹ್ಯಾಂಡ್ ಹೋಲ್ಡ್ ಟರ್ಮಿನಲ್(Hand hold terminal) ನೀಡಲಾಗಿದೆ.
ಅಂದರೆ, ಪ್ರಯಾಣಿಕರು ಎಲ್ಲಿಂದ ಟಿಕೆಟ್ ಬುಕ್ಕಿಂಗ್ (Ticket booking) ಮಾಡಿರುತ್ತಾರೋ ಅದೇ ನಿಲ್ದಾಣದಲ್ಲಿ(Railway station) ರೈಲು ಹತ್ತಬೇಕು. ಟಿಟಿಇ ತಪಾಸಣೆಯ ಸಂದರ್ಭದಲ್ಲಿ ಪ್ರಯಾಣಿಕರು ಅವರ ಸೀಟಿನಲ್ಲಿ ಇಲ್ಲದಿದ್ದರೆ 10 ನಿಮಿಷಗಳ ಕಾಲ ಕಾಯುತ್ತಾರೆ. 10 ನಿಮಿಷಗಳೊಳಗೆ ಪ್ರಯಾಣಿಕರು ಬರದೇ ಇದ್ದರೆ ಅವರ ಅನುಪಸ್ಥಿತಿಯನ್ನು ದಾಖಲಿಸಿ ಸೀಟ್ ಅನ್ನು ಕ್ಯಾನ್ಸಲ್ ಮಾಡುತ್ತಾರೆ. ರದ್ದಾದ ಸೀಟನ್ನು(cancelled seat) ಬೇರೆ ಪ್ರಯಾಣಿಕರಿಗೆ ಹಂಚಲಾಗುತ್ತದೆ.
ಕೆಲವೊಮ್ಮೆ ಜನಸಂದಣಿ(population) ಹೆಚ್ಚಿರುವ ಕಾರಣ ಅನೇಕ ಬಾರಿ ಆಸನವನ್ನು ತಲುಪಲು ತಡವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸ್ವಲ್ಪ ಹೆಚ್ಚುವರಿ ಸಮಯ, ಸುಮಾರು 10 ನಿಮಿಷ ಕಾಲಾವಕಾಶವನ್ನು ಪಡೆಯಬಹುದು. ಆದರೆ 10 ನಿಮಿಷದೊಳಗೆ ಬರದಿದ್ದರೆ ಟಿಕೆಟ್ಗಳನ್ನು(Rail ticket) ರದ್ದುಗೊಳಿಸಬಹುದು ಮತ್ತು ಇತರ ಪ್ರಯಾಣಿಕರಿಗೆ ನೀಡಬಹುದು.
ಇದನ್ನು ಓದಿ: PU department Karnataka: ‘ ಪದವಿ ಪೂರ್ವ ಇಲಾಖೆ ‘ ಇನ್ಮುಂದೆ ಇರೋದಿಲ್ಲ- ಏನೀ ಸರ್ಕಾರದ ಹೊಸ ಆದೇಶ !!