Home Breaking Entertainment News Kannada Rakshith Shetty: ಹಾಸ್ಟೆಲ್’ನಲ್ಲಿ ಆ ದಿನಗಳಲ್ಲೇ ಅಂಥ ಚಿತ್ರ ನೋಡ್ತಿದ್ದರಂತೆ ರಕ್ಷಿತ್ ಶೆಟ್ಟಿ

Rakshith Shetty: ಹಾಸ್ಟೆಲ್’ನಲ್ಲಿ ಆ ದಿನಗಳಲ್ಲೇ ಅಂಥ ಚಿತ್ರ ನೋಡ್ತಿದ್ದರಂತೆ ರಕ್ಷಿತ್ ಶೆಟ್ಟಿ

Rakshith Shetty
Image source: The new indian express

Hindu neighbor gifts plot of land

Hindu neighbour gifts land to Muslim journalist

Rakshith Shetty: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡ ರಕ್ಷಿತ್ ಶೆಟ್ಟಿ (Rakshith Shetty) ಇದೀಗ ಇಂಟ್ರೆಸ್ಟಿಂಗ್ ಸುದ್ದಿ ಹಂಚಿಕೊಂಡಿದ್ದಾರೆ.

ಇನ್ನು ಭರ್ಜರಿ ಸುದ್ದಿಯಲ್ಲಿರುವ ಇದೇ ಶುಕ್ರವಾರ ರಿಲೀಸ್‌ ಆಗಲಿರುವ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಈ ಸಿನಿಮಾವನ್ನು ನಿತಿನ್‌ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದು, ಹೊಸಬರಿಗೆ ವೇದಿಕೆ ನೀಡಿರುವ
‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿರುವ ಕಾರಣ ಎಲ್ಲರಿಗೂ ಒಂದು ರೀತಿಯಲ್ಲಿ ಎಕ್ಸೈಟ್‌ಮೆಂಟ್‌ ಇದೆ.

ಮುಖ್ಯವಾಗಿ ಚಿತ್ರವನ್ನು ರಕ್ಷಿತ್‌ ಶೆಟ್ಟಿ ಅರ್ಪಿಸುತ್ತಿದ್ದಾರೆ. ಸದ್ಯ ಸಿಂಪಲ್ ಸ್ಟಾರ್ ‘ಅನುಶ್ರೀ ಆಂಕರ್’ ಯೂಟ್ಯೂಬ್‌ ಚಾನಲ್‌ಗೆ ವಿಶೇಷ ಸಂದರ್ಶನ ನೀಡಿದ್ದು, ಈ ವಿಚಾರ ಬಹಳ ತ್ರಿಲ್ಲಿಂಗ್ ಆಗಿದೆ.

ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ತಂಡಕ್ಕೆ ಶುಭ ಹಾರೈಸಿದ್ದರು. ರಕ್ಷಿತ್‌ ಶೆಟ್ಟಿ ತಮ್ಮದೇ ‘ಪರಂವ’ ಬ್ಯಾನರ್‌ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ.

ಸದ್ಯ ರಕ್ಷಿತ್ ಶೆಟ್ಟಿ ಹಾಸ್ಟೆಲ್ ಲೈಫ್
ಅಭಿಮಾನಿಗಳ ಪ್ರೀತಿಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಆಗಿದ್ದಾಗ ಅಲ್ಲಿನ ಬಾಯ್ಸ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್‌ಗೆ ಮುಂದಾಗಿರುವ ರಕ್ಷಿತ್ ತಮ್ಮದೇ ತಮ್ಮ ಹಾಸ್ಟೆಲ್‌ನಲ್ಲಿ ಸುತ್ತಾಡುತ್ತಾ ಅನುಶ್ರೀಗೆ ವಿಶೇಷ ಸಂದರ್ಶನ ನೀಡಿದ್ದಾರೆ. 15 ವರ್ಷಗಳ ಬಳಿಕ ತಮ್ಮ ಹಾಸ್ಟೆಲ್‌ಗೆ ಹೋಗಿ ಆ ದಿನಗಳನ್ನು ನೆನೆದಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಹಲವು ವರ್ಷಗಳ ಬಳಿಕ ತಮ್ಮ ಹಾಸ್ಟೆಲ್‌ ರೂಮ್‌ನಲ್ಲಿ ಕೂತು ರಕ್ಷಿತ್ ಮಾತನಾಡಿದ್ದಾರೆ. “ನಮ್ಮ ರೂಮ್‌ನಲ್ಲಿ ಒಂದು ಕಂಪ್ಯೂಟರ್ ಇತ್ತು. ನನ್ನ ಫೋನ್ ಅಲ್ಲಿ 1ಕೆಬಿ ಇಂಟರ್‌ನೆಟ್ ಡೇಟಾ ಇರ್ತಿತ್ತು. ಅದರಿಂದ ರಿಸರ್ಚ್ ಎಲ್ಲ ಮಾಡುತ್ತಿದ್ದೆ. ಒಂದು ವೆಬ್ ಪೇಜ್ ಓಪನ್ ಆಗಲು ಬಹಳ ಸಮಯ ಆಗ್ತಿತ್ತು” ಎಂದಿದ್ದಾರೆ.

ಈ ವೇಳೆ ಅನುಶ್ರೀ ಯಾವ ವೆಬ್‌ಸೈಟ್ ಏನು ರೀಸರ್ಚ್ ಅಂತ ನಾನು ಕೇಳಲ್ಲ, ಯಾಕಂದರೆ ಬಾಯ್ಸ್ ಹಾಸ್ಟೆಲ್ ಅಂದ್ಮೇಲೆ ಅದನ್ನೆಲ್ಲಾ ಕೇಳಬಾರದು ಎಂದಿದ್ದಾರೆ. ಕೂಡಲೇ ರಕ್ಷಿತ್‌ “ಅದಕ್ಕೆಲ್ಲಾ ಸೀಡಿಗಳು ಇರ್ತಿತ್ತು” ಎಂದು ಕಾಮಿಡಿ ಮಾಡಿದ್ದಾರೆ.

‘ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ತೋರಿಸಿದ್ದಂತ ಹುಡುಗಾಟಿಕೆ, ಪೋಲಿತನ ತಮ್ಮ ಹಾಸ್ಟೆಲ್‌ ದಿನಗಳಲ್ಲಿ ಇತ್ತು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ತಮ್ಮದೇ ಕಾಲೇಜು ದಿನಗಳ ಸಾಕಷ್ಟು ವಿಚಾರಗಳನ್ನು ಆ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದಿದ್ದಾರೆ. ಕಾಲೇಜಿಗೆ ಸೇರಿದ ಆರಂಭದ ದಿನಗಳಲ್ಲಿ ನಾನು ಸೀನಿಯರ್ಸ್‌ಗೆ ತಿರುಗೇಟು ಕೊಟ್ಟಿದ್ದು. ಬಳಿಕ ಅವರೆಲ್ಲಾ ಸೇರಿ ನನ್ನನ್ನು ಒಂದು ರೂಮ್‌ನಲ್ಲಿ ಕೂಡಿ ಹಾಕಿ ಕ್ಲಾಸ್ ತಗೊಂಡಿದ್ದರು. ಅದನ್ನು ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದಿದ್ದಾರೆ.

4 ವರ್ಷಗಳ ಕಾಲ ನಿಟ್ಟೆ ಬಾಯ್ಸ್ ಹಾಸ್ಟೆಲ್‌ನಲ್ಲಿ ರಕ್ಷಿತ್ ಶೆಟ್ಟಿ ಇದ್ದರಂತೆ. ನನ್ನ ಜೀವನದಲ್ಲಿ ಮರೆಯಲಾಗದ ದಿನಗಳನ್ನು ನಾನು ಇಲ್ಲಿ ಕಳೆದಿದ್ದೇನೆ ಎಂದಿದ್ದಾರೆ. ಒಟ್ಟಿನಲ್ಲಿ ಕಾಲೇಜು ಹಾಸ್ಟೆಲ್ ಹುಡುಗರ ಹಾವಳಿ, ನೋವು, ನಲಿವು ಎಲ್ಲವನ್ನು ಚಿತ್ರದಲ್ಲಿ ಸೊಗಸಾಗಿ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ ಎಂದಿದ್ದಾರೆ.

ಇದನ್ನು ಓದಿ: BJP-JDS: ಕೊನೆಗೂ ಜೆಡಿಎಸ್ ಗೆ ಶಾಕ್ ಕೊಟ್ಟ ಬಿಜೆಪಿ ?! ಮೈತ್ರಿ, ದೋಸ್ತಿ ಇಲ್ದೆ ಕುಮಾರಸ್ವಾಮಿ ಅತಂತ್ರ ??