Sandalwood Highest Paid actors : ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಯಾರು ? ಟಾಪ್ 10 ನಟರ ಲಿಸ್ಟ್ ಇಲ್ಲಿದೆ
Latest Sandalwood news top 10 highest paid Kannada actors in 2023 complete list is here
Sandalwood Highest Paid actors : ಸಿನಿಮಾದ ಸಂಭಾವನೆ ವಿಚಾರದಲ್ಲಿ ನಟಿಯರಿಗಿಂತ ನಟರಿಗೇ ಹೆಚ್ಚು ಸಂಭಾವನೆ. ಅದರಲ್ಲೂ ಸ್ಟಾರ್ ಹಿರೋಗಳು ಸಿನಿಮಾ ಹಿಟ್ ಆದ ಹಾಗೇ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ.
ಹಲವು ಪ್ಯಾನ್-ಇಂಡಿಯಾ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ತಲೆ ಎತ್ತಿವೆ. ಸದ್ಯ ಸ್ಯಾಂಡಲ್‌ವುಡ್‌ನ ನಟರು (Sandalwood Celebrities) ಪ್ರತಿ ಚಿತ್ರಕ್ಕೂ ಉತ್ತಮ ಸಂಭಾವನೆ ಪಡೆಯುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಅತಿ ಹೆಚ್ಚು ಸಂಭಾವನೆ ಪಡೆಯುವ (Sandalwood Highest Paid actors) ಟಾಪ್ ಹೀರೋಗಳ ಲಿಸ್ಟ್ ಇಲ್ಲಿದೆ.
ಯಶ್ (Yash) : KGF ಫ್ರಾಂಚೈಸಿಯೊಂದಿಗೆ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಫೇಮಸ್ ಆಗಿದ್ದು ಮಾತ್ರವಲ್ಲ KGF ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಯಾಂಡಲ್ ವುಡ್ ನಟರ ಪೈಕಿ ರಾಕಿಂಗ್ ಸ್ಟಾರ್ ಯಶ್ ಅಗ್ರಸ್ಥಾನದಲ್ಲಿದ್ದಾರೆ. ಯಶ್ ಪ್ರತಿ ಚಿತ್ರಕ್ಕೆ ಸುಮಾರು 50-100 ಕೋಟಿ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ.
ದರ್ಶನ್ (Darshan Thoogudeepa) : ಡಿ ಬಾಸ್ ಎಂದೇ ಪ್ರಖ್ಯಾತಿ ಪಡೆದಿರುವ ದರ್ಶನ್ ಅಭಿಮಾನಿಗಳ ನೆಚ್ಚಿನ ದಚ್ಚು ಅವರು ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಟಾಪ್ 2 ಸ್ಥಾನ ಪಡೆದುಕೊಂಡಿದ್ದಾರೆ. ದರ್ಶನ್ ಅವರು ಪ್ರತಿ ಚಿತ್ರಕ್ಕೆ 22 – 26 ಕೋಟಿ ರೂ. ಯಷ್ಟು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸದ್ಯ ದರ್ಶನ್ ತಮ್ಮ ಮುಂದಿನ ಚಿತ್ರದ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಕಿಚ್ಚ ಸುದೀಪ್ (Sudeep) : ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದಿರುವ ಕಿಚ್ಚ ಸುದೀಪ್ ಈಗಾಗಲೇ ವಿಕ್ರಾಂತ್ ರೋಣ ಮತ್ತು ಕಬ್ಜಾ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಇನ್ನಷ್ಟು ಸೆಳೆದಿದ್ದಾರೆ. ಇವರು ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಟಾಪ್ 3ನೇ ಸ್ಥಾನವನ್ನು ಪಡೆದಿದ್ದಾರೆ. ಪ್ರತಿ ಸಿನಿಮಾಗಳಿಗೂ ಕೂಡ ಸುಮಾರು 20 – 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಉಪೇಂದ್ರ(Upendra Rao): ಕನ್ನಡ ಚಲನಚಿತ್ರೋದ್ಯಮದಲ್ಲಿ ರಿಯಲ್ ಸ್ಟಾರ್ ಎಂದೂ ಕರೆಯಲ್ಪಡುವ ಉಪೇಂದ್ರ ನಟ, ನಿರ್ಮಾಪಕ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಪ್ರತಿ ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಕಬ್ಜಾದಲ್ಲಿ ಕಾಣಿಸಿಕೊಂಡಿದ್ದ ಉಪೇಂದ್ರ ಮುಂದಿನ ಸಿನಿಮಾ UI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿ ವಿಭಿನ್ನ ಸಿನಿಮಾಗಳ, ಪಾತ್ರಗಳ ಮೂಲಕ ಎಂಟ್ರಿ ಕೊಡುವ ನಟನ UI ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ರಿಷಬ್ ಶೆಟ್ಟಿ (Rishab Shetty) : ಕಾಂತಾರ ಸಿನಿಮಾ ಮೂಲಕ ದೇಶ-ವಿದೆಶಗಳಲ್ಲಿ ಖ್ಯಾತಿ ಪಡೆದ ನಟ ರಿಷಬ್ ಶೆಟ್ಟಿ. ತುಳುನಾಡ ಕಲೆಯನ್ನು ಅದ್ಭುತವಾಗಿ ತೋರಿಸಿದ ಸಿನಿಮಾ ಕಾಂತಾರ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದೆ. ಈ ಸಿನಿಮಾದಿಂದ ನಟ ಡಿವೈನ್ ಸ್ಟಾರ್ ಎಂಬ ಬಿರುದು ಪಡೆದಿದ್ದಾರೆ. ಕಾಂತಾರ ಸಿನಿಮಾದ ಬಳಿಕ, ಈಗ ರಿಷಬ್ ಶೆಟ್ಟಿ ಸುಮಾರು 10-15 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.
ರಕ್ಷಿತ್ ಶೆಟ್ಟಿ (Rakshit Shetty) : ಕಿರಿಕ್ ಪಾರ್ಟಿ ಮೂಲಕ ಜನಮನಗೆದ್ದ ನಟಿ ರಕ್ಷಿತ್ ಶೆಟ್ಟಿ ಬಳಿಕ , 777 ಚಾರ್ಲಿ ಸಿನಿಮಾ ಮೂಲಕ ಜನರನ್ನು ಇನ್ನಷ್ಟು ಸೆಳೆದರು. ಇವರು ಪ್ರತಿ ಚಿತ್ರಕ್ಕೆ ಅಂದಾಜು 5 ರಿಂದ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸದ್ಯ, ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಸಿನಿಮಾಗಳಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ.
ಶಿವರಾಜ್‌ಕುಮಾರ್ (Shiva Rajkumar): ಶಿವಣ್ಣ ಎಂದೇ ಖ್ಯಾತಿ ಪಡೆದಿರುವ ಶಿವರಾಜ್‌ಕುಮಾರ್ ಅದ್ಭುತ ನಟ. ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಗುರುತಿಸಿಕೊಂಡಿದ್ದಾರೆ. 120 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಶಿವಣ್ಣ, ಪ್ರತಿ ಚಿತ್ರಕ್ಕೂ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಶ್ರೀಮುರಳಿ ( SriMurali) : ಉಗ್ರಂ ಸಿನಿಮಾ ಮೂಲಕ ಶ್ರೀಮುರಳಿ ಜನ ಮನ ಗೆದ್ದಿದ್ದಾರೆ. ಈ ಚಿತ್ರವು ಸಕತ್ ಹಿಟ್ ಆಗಿತ್ತು. ಶ್ರೀಮುರಳಿ ಪ್ರತಿ ಚಿತ್ರಕ್ಕೆ ಸುಮಾರು 4 – 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯ ನಟ ಸಿನಿಮಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಗಣೇಶ್ (Ganesh): ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ, ಮುಗುಳು ನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೆ ಜನ ಮನಸೋತು ತಲೆದೂಗಿದ್ದಾರೆ. ಸದ್ಯ ಇವರು ಪ್ರತಿ ಚಿತ್ರಕ್ಕೆ ಸುಮಾರು 3 – 6 ಕೋಟಿ ಸಂಭಾವನೆ ಪಡೆಯುತ್ತಾರೆ.
ಧ್ರುವ ಸರ್ಜಾ (Dhruva Sarja): ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಲವು ಸಿನಿಮಾಗಳನ್ನು ಮಾಡಿದ್ದು, ಪೊಗರು ಚಿತ್ರದ ಮೂಲಕ ಖ್ಯಾತಿ ಪಡೆದಿದ್ದಾರೆ. ಧ್ರುವ ಸರ್ಜಾ ಪ್ರತಿ ಸಿನಿಮಾಗೆ ಸುಮಾರು 3 – 5 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಧ್ರುವ ಸರ್ಜಾ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: Himanta Biswa Sarma: ತರಕಾರಿ ಬೆಲೆ ಹೆಚ್ಚಾಗೋದಕ್ಕೆ ಮಿಯಾ ಮುಸ್ಲಿಮರೇ ಕಾರಣ ; ಹೀಗ್ಯಾಕಂದ್ರು ಹಿಮಂತ ಬಿಸ್ವಾ ಶರ್ಮಾ ?!