Tulunadu Koragajja: ಕೊರಗಜ್ಜನ ಮಹಿಮೆ: ಗದ್ದೆಯಲ್ಲಿ ದಿನವಿಡೀ ಹುಡುಕಿದರೂ ಸಿಗದ ಹಣ ಹರಕೆ ಇಟ್ಟ ಕ್ಷಣಗಳಲ್ಲಿ ಮತ್ತೆ ಸಿಕ್ತು !
Latest news intresting news Know what is the glory of Tulunadu Koragajja
Tulunadu Koragajja: ಕರಾವಳಿಗರು ನಂಬುವ ಶಿವನ ಅಂಶವಾಗಿರುವ ಕೊರಗಜ್ಜ (Tulunadu Koragajja) ಎಲ್ಲರ ಮನೆ ಮನಗಳಲ್ಲೂ ಅಪಾರ ನಂಬಿಕೆ ಭಕ್ತಿ ತುಂಬಿರುವ ವಿಶೇಷ ಶಕ್ತಿ ಆಗಿದೆ. ಕೊರಗಜ್ಜನ ಶಕ್ತಿ ಅಪಾರವಾದುದು, ಕಷ್ಟ ಎಂದು ಬೇಡಿದರೆ ಕಷ್ಟವನ್ನು ಮಾಯ ಮಾಡುವ ಶಕ್ತಿ ತುಳುನಾಡ ಕೊರಗಜ್ಜನಿಗೆ ಇದೆ. ಅದೆಷ್ಟೋ ಬಾರಿ ಕೊರಗಜ್ಜನ ಮಹಿಮೆ ಜನರಿಗೆ ಅಲ್ಲಲ್ಲಿ ಮನಗಂಡು ಬಂದಿರುವುದು ಸಹ ಇದೆ.
ಅದೇ ರೀತಿ ಕೊರಗಜ್ಜನಿಗೆ ಹರಕೆ ಹೊತ್ತ ಕೆಲವೇ ಹೊತ್ತಿನಲ್ಲಿ ಕಳೆದು ಹೋದ ಹಣ ಮರಳಿ ದೊರೆತ ಘಟನೆ ಆರೂರು ಕುರುಡುಂಜೆಯಲ್ಲಿ ಸೋಮವಾರ ನಡೆದಿದೆ.
ಬ್ರಹ್ಮಾವರದ ಕುರುಡುಂಜೆಯ ಗದ್ದೆಯಲ್ಲಿ ಉಳುಮೆ ಮಾಡಲು ಬಂದ ಶಿವಮೊಗ್ಗದ ಗಣೇಶ್ ಎಂಬ ಟ್ರ್ಯಾಕ್ಟರ್ ಚಾಲಕ ತಾನು ಸಂಪಾದನೆ ಮಾಡಿದ ಹಣವನ್ನು ಒಂದು ಗಂಟು ಕಟ್ಟಿ ಟ್ರಾಕ್ಟರ್‌ನಲ್ಲಿ ಇಟ್ಟುಕೊಂಡೆ ಉಳುಮೆ ಮಾಡುತ್ತಿದ್ದ.
ಆದರೆ ಕೆಲಸ ಮುಗಿಸಿ ನೋಡುವಾಗ ಹಣ ಕಳೆದು ಹೋಗಿತ್ತು. ಗಾಬರಿಗೊಂಡ ಅವರು ಹತ್ತಾರು ಜನರರಿಗೆ ಹೇಳಿ ಹುಡುಕಿಸಿದರೂ ಗದ್ದೆಯಲ್ಲಿ ಹಣ ಸಿಗಲಿಲ್ಲ.
ಅದೇ ಸಮಯಕ್ಕೆ ಆಗಮಿಸಿದ ಕೊರಗಜ್ಜನ ಭಕ್ತ ಮಹೇಶ್ ಶೆಟ್ಟಿ ಅವರು ವಿಷಯ ತಿಳಿದು ಹಣ ದೊರೆತರೆ ಆರೂರು ಕುರುಡುಂಜೆ ಕೊರಗಜ್ಜನಿಗೆ ಕಳ್ಳು, ಬೀಡ, ಚಕ್ಕುಲಿ, ಮತ್ತು ಒಂದು ಸಾವಿರ ಕೊಡುತ್ತಾರೆ ಎಂದು ಹರಕೆ ಹೊತ್ತು ಗದ್ದೆಗೆ ಇಳಿದೇ ಬಿಟ್ಟರು.
ಪವಾಡ ಎಂದರೆ 4 ಹೆಜ್ಜೆ ಹಾಕುತ್ತಲೇ ಅವರ ಕಾಲಿಗೆ ಕೆಸರಲ್ಲಿ 25 ಸಾವಿರ ಹಣದ ಕಟ್ಟು ಸಿಕ್ಕಿತು. ಇದು ತುಳನಾಡ ಕೊರಗಜ್ಜನ ಪ್ರತ್ಯಕ್ಷ ಪವಾಡವಾಗಿದ್ದು ಜನರಿಗೆ ಮತ್ತಷ್ಟು ನಂಬಿಕೆ ಬಂದಂತೆ ಆಗಿದೆ.
ಇದನ್ನು ಓದಿ: Anna bhagya scheme money: ‘ಅನ್ನಭಾಗ್ಯ’ದ ಅಕ್ಕಿ ಹಣ ಖಾತೆಗೆ ಬಂದಿದೆಯೆಂದು ತಿಳಿಯಬೇಕೆ? ಹಾಗಿದ್ರೆ ಈ ಕೂಡಲೇ ಹೀಗೆ ಮಾಡಿ.