Doctor Recieves Fake Note: 500ರ ನಕಲಿ ನೋಟು ಕೊಟ್ಟು ಡಾಕ್ಟರ್’ಗೇ ಕೈ ಕೊಟ್ಟ ರೋಗಿ !! ಯಾಮಾರಿದ ವೈದ್ಯರು ಮಾಡಿದ್ದೇನು?
Latest news intresting news Doctor Receives Fake Note From Patient
Doctor Recieves Fake Note: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಎಲ್ಲಾ ಕಡೆಯೂ ಡಿಜಿಟಲ್ ಪೇಮೆಂಟ್’ಗಳು ತಲೆ ಎತ್ತಿ ನಿಂತಿವೆ. ಇಂಡಿಯಾದಲ್ಲೂ ಏನೂ ಕಮ್ಮಿ ಇಲ್ಲ. ಇಲ್ಲೂ ಹೆಚ್ಚಿನ ಜನರು ಆನ್ಲೈನ್ ಪೇಮೆಂಟ್ (online payment) ಗಳನ್ನೇ ಬಳಸುತ್ತಾರೆ. ತೀರ ಅಪರೂಪವೆನ್ನುವಂತೆ ಕೆಲವರು ನೋಟುಗಳಿಗೆ (cash) ಆದ್ಯತೆಯನ್ನು ನೀಡುತ್ತಾರೆ. ಇದೀಗ ರೋಗಿಯೊಬ್ಬನು ವೈದ್ಯರಿಗೆ ನಕಲಿ ನೋಟು (Doctor Recieves Fake Note) ಕೊಟ್ಟು ಪಂಗನಾಮ ಹಾಕಿರುವ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಡಾಕ್ಟರ್, ಇದೊಂದು ಫನ್ನಿ ಮೂಮೆಂಟ್ ಅಂತ ಬರೆದುಕೊಂಡಿದ್ದಾರೆ.
ಡಾ. ಮನನ್ ವೋರಾ ಅವರು ಮೂಳೆ ಶಸ್ತ್ರಚಿಕಿತ್ಸಕ ಮತ್ತು ಆರೋಗ್ಯ ವಿಷಯ ಬರಹಗಾರರಾಗಿದ್ದಾರೆ. ಇತ್ತೀಚೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ (social media) ತನಗಾದ ಹೊಸ ಅನುಭವವನ್ನು ಹಂಚಿಕೊಂಡಿದ್ದಾರೆ. ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆಗೆ 500 ರೂ.ನ ನೋಟು ನೀಡಿ ಬಿಲ್ ಪಾವತಿಸಿದ್ದಾರೆ. ಆದರೆ ಇದು ನಕಲಿ ನೋಟು(500rs fake note) ಎಂದು ನಂತರ ವೈದ್ಯರಿಗೆ (Doctor) ಗೊತ್ತಾಗಿದೆ.
“ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು(patient) ನಕಲಿ ನೋಟನ್ನು ಪಾವತಿಸಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದರ ಬಗ್ಗೆ ಸರಿಯಾಗಿ ಗಮನ ವಹಿಸಲಿಲ್ಲ. ಕೊನೆಗೆ ಅದು ನನ್ನ ಕೈ ಸೇರಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಏಕೆಂದರೆ ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ (Social media) ನೋಟಿನೊಂದಿಗೆ ಡಾ. ಮಾನನ್ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ.
ರೋಗಿಯು ವೈದ್ಯನಿಗೆ ಬೇಕಂತಲೇ ನಕಲಿ ನೋಟನ್ನು(fake note) ನೀಡಿ ಮೋಸ ಮಾಡಿದ್ದಾನೋ ಅಥವಾ ತಾನು ಬೇರೆಯವರಿಂದ ಮೋಸ ಹೋಗಿದ್ದು, ಅದು ನಕಲಿ ನೋಟು ಎಂದು ಅರಿವಿಲ್ಲದೆ ವೈದ್ಯರಿಗೆ ನೀಡಿದ್ದಾನೆಯೇ ಎಂದು ತಿಳಿದಿಲ್ಲ. ಒಟ್ಟಿನಲ್ಲಿ ಕರೆನ್ಸಿ ನೋಟು ತೆಗೆದುಕೊಳ್ಳುವಾಗ ಸರಿಯಾಗಿ ಪರೀಕ್ಷಿಸಿ, ಪರಿಶೀಲಿಸಿ ತೆಗೆದುಕೊಳ್ಳುವುದು ನಮಗೆ ಒಳಿತು.
ಇದನ್ನು ಓದಿ: Shakthi yojane: ಉಚಿತ ಬಸ್ ಪ್ರಯಾಣದಿಂದ ಕೊನೆಗೂ ಪೆಟ್ಟು ತಿಂದ ಸರ್ಕಾರ !! ಮತ್ತೆ ಹೊಸ ರೂಲ್ಸ್ ಬಿಡುಗಡೆ!!