Ration card lost: ರೇಷನ್ ಕಾರ್ಡ್ ದಾರರಿಗೆ ಮಹತ್ವದ ಸುದ್ದಿ- ಕಾರ್ಡ್ ಕಳೆದು ಹೋದ್ರೆ ಕೂಡಲೇ ಹೀಗೆ ಮಾಡಿ !! ಇಲ್ಲಾಂದ್ರೆ ಹೊಸ ಕಾರ್ಡ್ ಸಿಗೋಲ್ಲ ನೋಡಿ !!

Latest news Do this immediately if you lost Ration card

Ration card lost: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದನ್ನು (Ration Card Big Update) ಆಹಾರ ಇಲಾಖೆ ನೀಡಿದ್ದು, ಪಡಿತರ ಚೀಟಿ ಕಳೆದುಹೊದ್ರೆ (Ration card lost) , ದಾಖಲೆಗಳನ್ನು ನೀಡಿ ನಕಲಿ ಪಡಿತರ ಚೀಟಿಯನ್ನು ಪಡೆಬಹುದಾಗಿದೆ.

ಹೌದು, ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ ವ್ಯವಸ್ಥೆ ಮಾಡಲಾಗಿದೆ. ಪಡಿತರ ಚೀಟಿ ಕಳೆದು ಹೋದರೆ ಅಥವಾ ಕಳ್ಳತನವಾದರೆ ಆತಂಕವಾಗುವುದು ಸಹಜ. ಆದರೆ ಪಡಿತರ ಚೀಟಿಯನ್ನು ಕಳೆದುಕೊಂಡರೆ, ನೀವು ಚಿಂತಿಸದೆ ಕೆಲವು ಸರಳ ಹಂತಗಳನ್ನು ಅನುಸರಿಸಬೇಕು, ಅದರ ನಂತರ ನಿಮ್ಮ ನಕಲಿ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು.

ನಿಮ್ಮ ಪಡಿತರ ಚೀಟಿ ಎಲ್ಲೋ ಕಳೆದು ಹೋಗಿದ್ದರೆ, ಆ ಸಂದರ್ಭದಲ್ಲಿ ನೀವು ನಕಲಿ ಕಾರ್ಡ್ ಪಡೆಯಲು ಈ ವಿಧಾನವನ್ನು ಅನುಸರಿಸಿ.
*ಮೊದಲು ನಿಮ್ಮ ರಾಜ್ಯದ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ http://ahara.kar.nic.in/ ಅಥವಾ https://kfcsc.karnataka.gov.in/ ಗೆ ಲಾಗಿನ್ ಆಗಿ.
*ನಂತರ ನೀವು ನಕಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ.
*ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಮುಂದೆ ಒಂದು ಫಾರ್ಮ್ ತೆರೆಯುತ್ತದೆ.
*ಫಾರ್ಮ್‌ನಲ್ಲಿ ನಿಮ್ಮ ಹೆಸರು, ಪಡಿತರ ಚೀಟಿ ಸಂಖ್ಯೆಯಂತಹ ಇತರ ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಿ.
*ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನೀವು ವಿನಂತಿಸಿದ ಡಾಕ್ಯುಮೆಂಟ್ ನ ನಕಲನ್ನು ಇಲ್ಲಿ ಅಪ್ ಲೋಡ್ ಮಾಡಬೇಕು.
*ಅಪ್ ಲೋಡ್ ಮಾಡಿದ ನಂತರ, ನೀವು “ಸಬ್ಮಿಟ್” ಬಟನ್ ಮೇಲೆ ಕ್ಲಿಕ್ ಮಾಡಿ. ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ನಕಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಾಧ್ಯ.

ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಗಿ ಕಂಡುಬಂದರೆ, ಕೆಲವೇ ದಿನಗಳಲ್ಲಿ ನಿಮಗೆ ನಕಲಿ ಪಡಿತರ ಚೀಟಿ ಲಭ್ಯವಾಗುತ್ತದೆ.

 

ಇದನ್ನು ಓದಿ: Siddarama swamiji: ‘ಹಿಂದೂ’ ಎನ್ನುವುದು ಧರ್ಮವೇ ಅಲ್ಲ.. ! ಅಚ್ಚರಿ ಹೇಳಿಕೆಯಿಂದ ಶಾಕ್ ಕೊಟ್ಟ ಖ್ಯಾತಿ ಸ್ವಾಮಿ ! 

Leave A Reply

Your email address will not be published.