Bitcoin Fund: ಭಯೋತ್ಪಾದನೆಗೆ ಬಿಟ್ ಕಾಯಿನ್ ನಂಟು ; ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಬ್ಲಾಸ್ಟ್ ಕೇಸ್’ನಲ್ಲೂ ಬಳಕೆ !!

Latest news bitcoin fund Bitcoin Link to Terrorism

Bitcoin Fund: ಮಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ (Mangalore cooker blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರಿಗೆ ಭಯೋತ್ಪಾದನಾ ಕೃತ್ಯಕ್ಕೆ ‘ಕ್ರಿಪ್ಟೋ ಕರೆನ್ಸಿ’ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂ. ಬಂದಿದೆ ಎಂಬ ಶಾಕಿಂಗ್ ಮಾಹಿತಿ ಎನ್​ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಫೇಸ್​ಬುಕ್, ಟೆಲಿಗ್ರಾಂ ಮುಖೇನ ಬಿಟ್ ಕಾಯಿನ್ (Bitcoin Fund) ಸಂಗ್ರಹಿಸಿ, ಡಾರ್ಕ್ ನೆಟ್ ಮುಖಾಂತರ ವಿವಿಧ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಿಕೊಂಡಿರುವ ವಿಚಾರ ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರು ನಗರದ ನಾಗುರಿಯಲ್ಲಿ 2022ರ ನ.19ರಂದು ನಡೆದ ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್​ಗಳು ಡಾರ್ಕ್ ವೆಬ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಳುಹಿಸಿದ್ದಾರೆ ಎಂಬುದು ಸಾಬೀತಾಗಿದೆ. ಅಲ್ಲದೆ, ಈ ಬಗ್ಗೆ ಎನ್​ಐಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್​ಶೀಟ್​ನಲ್ಲಿ ಕೂಡ ಉಲ್ಲೇಖಿಸಿದೆ.

ಅಲ್ಲದೆ, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಉಗ್ರ ಮಹಮ್ಮದ್ ಶಾರೀಕ್ ಡಾರ್ಕ್ ನೆಟ್​ನಲ್ಲಿ ಖಾತೆ ಹೊಂದಿದ್ದಾನೆ. ವಿದೇಶದಿಂದ ಡಾಲರ್ ಹಾಗೂ ಬಿಟ್ ಕಾಯಿನ್ ಈತನ ಖಾತೆ ಬರುತ್ತಿತ್ತು. ಇದನ್ನು ಆತ ಭಾರತೀಯ ಕರೆನ್ಸಿಗೆ ಬದಲಾವಣೆ ಮಾಡಿ ಸ್ನೇಹಿತರು, ಪರಿಚಯಸ್ಥರು ಸೇರಿ ನೂರಾರು ಜನರ ಖಾತೆಗಳಿಗೆ ವರ್ಗಾವಣೆ ಮಾಡಿ, ಮತ್ತೆ ಅವರ ಖಾತೆಗಳಿಂದ ಇನ್ನೊಬ್ಬರ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.

2018 ರಿಂದಲೇ ಉಗ್ರ ಸಂಘಟನೆಗಳು ಡಿಜಿಟಲ್ ಕರೆನ್ಸಿಯನ್ನು ಬಳಸುತ್ತಿವೆ. 2018ರಿಂದ ಈವರೆಗೆ ಕರ್ನಾಟಕ ಸೇರಿ ದೇಶಾದ್ಯಂತ ಉಗ್ರರಿಗೆ ಹಣ ವರ್ಗಾವಣೆ ಸಂಬಂಧಿಸಿದಂತೆ ಎನ್​ಐಎ 65ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ 2022ರ ಅನ್ವಯ 24 ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸಿ ಚಾರ್ಜ್​ಶೀಟ್ ಸಲ್ಲಿಸಿದೆ.

ಕ್ರಿಪ್ಟೋ ಕರೆನ್ಸಿ ವಿನಿಯಮ ವೇದಿಕೆ ವಜೀರ್ ಎಕ್ಸ್​ನ ಅಕ್ರಮ ವಹಿವಾಟು ಸಂಬಂಧ 3 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಅಪರಿಚಿತ ವ್ಯಾಲೆಟ್​ಗಳಿಗೆ 2790 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ 64 ಕೋಟಿ ಮೌಲ್ಯದ ಕರೆನ್ಸಿಯನ್ನು ತಡೆಹಿಡಿಯಲಾಗಿದೆ.

ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಈಗಾಗಲೇ ಗೃಹ ಇಲಾಖೆ ಅಧೀನದಲ್ಲಿ ಕೌಂಟರಿಂಗ್ ಆಫ್ ಫೈನಾನ್ಸಿಂಗ್ ಆಫ್ ಟೆರರಿಸಂ (ಸಿಎಫ್​ಟಿ ಸೆಲ್) ಹಾಗೂ ಎನ್​ಐಎ ಸುಪರ್ದಿಯಲ್ಲಿ ಟೆರರ್ ಫಂಡಿಂಗ್ ಮತ್ತು ಫೇಕ್ ಕರೆನ್ಸಿ (ಟಿಎಫ್​ಎಫ್​ಸಿ) ಸೆಲ್ ಸ್ಥಾಪನೆ ಮಾಡಲಾಗಿದೆ. ಈ ಎರಡೂ ಘಟಕಗಳು ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ ಬಗ್ಗೆ ನಿಗಾ ವಹಿಸಲಿವೆ.

 

ಇದನ್ನು ಓದಿ: Rahul Gandhi: ರಾಹುಲ್ ಗಾಂಧಿ ಬಳಿ ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಬೈಕ್ ಮೆಕ್ಯಾನಿಕ್, ರಾಹುಲ್ ಕೊಟ್ಟ ಉತ್ತರ ಏನು ? 

Leave A Reply

Your email address will not be published.