Karan Johar: ನೀವು ಸಲಿಂಗ ಕಾಮಿ ತಾನೇ? ನೇರ ಪ್ರಶ್ನೆಗೆ ಜಾಣ್ಮೆಯ ಅದ್ಭುತ ಉತ್ತರ ನೀಡಿದ ನಿರ್ದೇಶಕ !
Latest Bollywood news karan Johar is gay or not film maker replies this way
Karan Johar: ಕರಣ್ ಜೋಹರ್ (Karan Johar) ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ತಮ್ಮ ನಿರೂಪಣಾ ಶೈಲಿಯಿಂದ ಕೂಡ ಹೆಸರು ಪಡೆದಿದ್ದಾರೆ. ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಹೊಂದಿರುವ ಕರಣ್ ಜೋಹರ್ (Karan Johar) ಹೆಚ್ಚು ಫೇಮಸ್ ಆಗಿದ್ದು, ‘ಕಾಫಿ ವಿತ್ ಕರಣ್’ (Koffee With Karan) ಶೋ ಮೂಲಕ ಎಂದರೆ ತಪ್ಪಾಗದು.
51 ವರ್ಷ ವಯಸ್ಸಾದರೂ ಕರಣ್ ಮದುವೆಯಾಗಿಲ್ಲ. ಬದಲಿಗೆ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದು ಸಾಕುತ್ತಿದ್ದಾರೆ.
ಇದೀಗ ಕರಣ್ ಜೋಹರ್’ಗೆ ನೆಟ್ಟಿಗರೊಬ್ಬರಿಂದ ನೇರ ಪ್ರಶ್ನೆ ಎದುರಾಗಿದೆ. ನೀವು ಸಲಿಂಗ ಕಾಮಿ ತಾನೇ? ಕೇಳಿದೆ ಪ್ರಶ್ನೆಗೆ
ಕರಣ್ ಜಾಣ್ಮೆಯ ಅದ್ಭುತ ಉತ್ತರ ನೀಡಿದ್ದಾರೆ.
ಈಗ ಸೋಶಿಯಲ್ ಮೀಡಿಯಾ ಜಗತ್ತಿಗೆ ಥ್ರೆಡ್ಸ್ (Threads) ಲಗ್ಗೆ ಇಟ್ಟಿದೆ. ಕರಣ್ ಜೋಹರ್ ಕೂಡ ಇದರಲ್ಲಿ ಖಾತೆ ತೆರೆದಿದ್ದಾರೆ. ಹಾಗಾಗಿ ಅವರು ಶನಿವಾರ (ಜುಲೈ 8) ಹತ್ತು ನಿಮಿಷಗಳ ಕಾಲ ಅಭಿಮಾನಿಗಳೊಡನೆ ಸಂವಾದ ನಡೆಸಿದರು. ಅವರಿಂದ ಪ್ರಶ್ನೆ ಸ್ವೀಕರಿಸಿದರು. ಈ ವೇಳೆ ‘ನೀವು ಸಲಿಂಗ ಕಾಮಿ ಹೌದಲ್ಲವೇ’ ? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮುಂದಿಟ್ಟರು. ಇದಕ್ಕೆ ಕರಣ್ ಜೋಹರ್ ಏನಂದ್ರು ಗೊತ್ತಾ ?!
ನೆಟ್ಟಿಗನ ಪ್ರಶ್ನೆಗೆ ‘ನಿಮಗೆ ಆಸಕ್ತಿ ಇದೆಯೇ’ ?! ಎಂದು ಕರಣ್ ಜೋಹರ್ ಮರುಪ್ರಶ್ನೆ ಹಾಕಿದ್ದಾರೆ. ಈ ಪ್ರತಿಕ್ರಿಯೆ ಕಂಡು ಕರಣ್ ಒಪ್ಪಿಕೊಂಡಂತೆಯೇ ಆಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ, ಕರಣ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ (ranveer singh) ಮತ್ತು ಆಲಿಯಾ ಭಟ್ (Alia bhat) ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Kisan Samman: ರೈತರ ಪಾಲಿನ 4,000 ರೂ. ನೆರವು ಬಹುತೇಕ ಸ್ಥಗಿತ