Actress Photo: ಯಾರೀ ಪುಟಾಣಿ ಹುಡುಗಿ ?, ಸಿನಿಮಾದಲ್ಲಿ ಗೆಜ್ಜೆ – ರಾಜಕಾರಣದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಸೌತ್ ಸ್ಟಾರ್ ?

Latest news cinima news Actress Photo South star Who is this child artist little girl

Actress Photo: ಪ್ರತಿಯೊಬ್ಬರಿಗೂ ತಮ್ಮ ನೆಚ್ಚಿನ ನಟಿ ಬಾಲ್ಯದಲ್ಲಿ ಹೇಗಿದ್ದರು ಎಂಬ ಕುತೂಹಲ ಖಂಡಿತವಾಗಿಯೂ ಮನೆ ಮಾಡಿರುತ್ತದೆ. ಇದೀಗ ದಕ್ಷಿಣ ಭಾರತದ ನಟಿಯ ಬಾಲ್ಯದ ಫೋಟೋ (Actress Photo) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇದೀಗ, ನಟಿಯ ಅಭಿಮಾನಿಗಳು ಫೋಟೋ (ಫೋಟೋ) ಅನ್ನು ಹಂಚಿಕೊಂಡು ಈ ನಟಿ ಯಾರು ಎಂದು ಕಂಡು ಹಿಡಿಯುವಂತೆ ಸವಾಲು ಹಾಕುತ್ತಿದ್ದಾರೆ. ನೀವು ಕೂಡ ಫೋಟೋವನ್ನು ಗಮನಿಸಿ, ಯಾರೆಂದು ಗುರುತಿಸಲು ಪ್ರಯತ್ನಿಸಬಹುದು.

ಈಕೆ ಈಗಾಗಲೇ ಪಂಚಭಾಷೆಗಳಲ್ಲಿ ನಟಿಸಿರುವ ಸೂಪರ್ ಸ್ಟಾರ್ (Super Star) ನಟಿ. ಬಾಲನಟಿಯಾಗಿ ವೃತ್ತಿ ಆರಂಭಿಸಿ ಆ ನಂತರ 80 ರ ದಶಕದ ಅಂತ್ಯದಲ್ಲಿ ನಾಯಕಿಯಾದ ಈ ನಟಿ ಯಶಸ್ವಿ ಬಹಳ ದೊಡ್ಡದು.

1980ರಲ್ಲಿ ಬಿಡುಗಡೆ ಆದ ಹಿಂದಿಯ ದಿ ಬರ್ನಿಂಗ್ ಟ್ರೈನ್ (The Burning Train) ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಆ ಬಳಿಕ ಕೇವಲ ಐದು ವರ್ಷದಲ್ಲಿಯೇ ನಾಯಕಿಯಾಗಿ ಪದಾರ್ಪಣೆ ಮಾಡಿ ಅತ್ಯಂತ ದೊಡ್ಡ ಯಶಸ್ಸು ಕಂಡ ನಟಿ ಖುಷ್ಬು (Khushboo) ಅವರ ಬಾಲ್ಯದ ಚಿತ್ರವಿದು. ಹಿಂದಿ ಚಿತ್ರರಂಗದಿಂದ ಖುಷ್ಬು ನಟನೆ ಆರಂಭಿಸಿದರಾದರೂ ಬೆಳೆದಿದ್ದು ಮಾತ್ರ ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ.

1986ರಲ್ಲಿ ಮೊದಲ ಬಾರಿಗೆ ತೆಲುಗಿನ ಕಲಿಯುಗ ಪಾಂಡವಲು ಸಿನಿಮಾದಲ್ಲಿ ನಟಿಸಿದ ಖುಷ್ಬು, ಇಲ್ಲೇ ವೃತ್ತಿ ಮುಂದುವರೆಸುವ ಉದ್ದೇಶದಿಂದ ಸಿನಿಮಾ ಚಟುವಟಿಕೆಗಳ ಕೇಂದ್ರವಾಗಿದ್ದ ಚೆನ್ನೈಗೆ ಸ್ಥಳಾಂತರಗೊಂಡರು. ಹಿಂದಿಯಲ್ಲಿ ಮಾಧುರಿ ದೀಕ್ಷಿತ್, ರೇಖಾ, ಜೂಹಿ ಚಾವ್ಲಾ ಇನ್ನೂ ಹಲವು ನಟಿಯರ ಪಾರುಪತ್ಯ ಇದ್ದಿದ್ದರಿಂದ ಖುಷ್ಬು ದಕ್ಷಿಣ ಭಾರತ ಚಿತ್ರರಂಗವನ್ನು ಆಯ್ದುಕೊಂಡರು.

ಇನ್ನು ಕನ್ನಡದಲ್ಲಿ ಖುಷ್ಬು ಹಾಗೂ ರವಿಚಂದ್ರನ್ ಜೋಡಿ ಅತ್ಯಂತ ಯಶಸ್ವಿ ಜೋಡಿ. 1988 ರಲ್ಲಿ ಬಿಡುಗಡೆ ಆದ ‘ರಣಧೀರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಖುಷ್ಬು ಪ್ರವೇಶಿಸಿದರು. ಇಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು.

‘ರಣಧೀರ’ ಬಳಿಕ ‘ಅಂಜದ ಗಂಡು’, ‘ಯುಗಪುರುಷ’, ‘ಶಾಂತಿ-ಕ್ರಾಂತಿ’ ಸಿನಿಮಾಗಳಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದಾರೆ. ರವಿಚಂದ್ರನ್ ಮಾತ್ರವೇ ಅಲ್ಲದೆ ವಿಷ್ಣುವರ್ಧನ್, ಅಂಬರೀಶ್, ಅನಂತ್​ನಾಗ್, ಅರ್ಜುನ್ ಸರ್ಜಾ, ಟೈಗರ್ ಪ್ರಭಾಕರ್ ಇನ್ನೂ ಕೆಲವರೊಟ್ಟಿಗೆ ನಾಯಕಿಯಾಗಿ ಖುಷ್ಬು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳು ಮಾತ್ರವೇ ಅಲ್ಲದೆ ರಾಜಕೀಯದಲ್ಲಿಯೂ ಖುಷ್ಬು ಸಕ್ರಿಯರಾಗಿದ್ದಾರೆ. 2010 ರಲ್ಲಿ ಡಿಎಂಕೆ ಪಕ್ಷ ಸೇರುವ ಮೂಲಕ ರಾಜಕೀಯ ಪಯಣ ಆರಂಭಿಸಿದ ಖುಷ್ಬು 2014 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬಳಿಕ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಮುಖ್ಯವಾಗಿ ಖುಷ್ಬು ( khushbu ) ಅವರು ತೆಲುಗು , ಮಲಯಾಳಂ , ಕನ್ನಡ ಭಾಷೆಯ ಚಿತ್ರಗಳ ಜೊತೆಗೆ ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಭಾರತೀಯ ನಟಿ . ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅದರಲ್ಲಿ 100+ ಚಲನಚಿತ್ರಗಳು ನೇರವಾಗಿ ತಮಿಳಿಗೆ ಸಲ್ಲುತ್ತವೆ.

 

ಇದನ್ನು ಓದಿ: ಸಲಿಂಗ ಗೆಳತಿಗಾಗಿ ಹೇಬಿಯಸ್ ಕಾರ್ಪಸ್ ಹಿಡಿದು ಹೈಕೋರ್ಟ್ ಗೆ ಹೊರಟ ಹುಡುಗಿ: ಗುಡ್ ಲಕ್ ಅಂದ ಕೋರ್ಟು

Leave A Reply

Your email address will not be published.